30 ನಿಮಿಷದಲ್ಲಿ ಸಾಲ ಪಾವತಿ ಮಾಡದಿದ್ದರೆ ನಿನ್ನ ಬೆ#ತ್ತಲೆ ಫೋಟೋ ಬಿಡುವುತ್ತೇವೆ; ಕನ್ನಡದ ಸೀರಿಯಲ್ ನಟಿಗೆ Online Loan ಆವಾಜ್
May 9, 2025, 10:34 IST
|

ದುಡ್ಡಿಗಾಗಿ ಅದೆಂತಹ ಮಟ್ಟಕ್ಕಾದರೂ ಇಳಿಯುವ ಕೆಲ ವರ್ಗವಿದೆ. ಏನಾದರೂ ಮಾಡಿ ದುಡ್ಡು ಮಾಡಲೇಬೇಕು ಅಂತ ಎಂತಹ ನೀಚ ಮಟ್ಟಕ್ಕೆ ಇಳಿಯುವವರಿದ್ದಾರೆ. ಅದರಲ್ಲೂ ಇತ್ತೀಚೆಗೆ ಈ ಆನ್ಲೈನ್ ಸ್ಕ್ಯಾಮ್ಗಳು ಹೆಚ್ಚಾಗಿವೆ. ವಾಟ್ಸಾಪ್ಗೆ ಒಂದು ಲಿಂಕ್ ಅನ್ನು ಕಳುಹಿಸುತ್ತಾರೆ. ಗೊತ್ತಿಲ್ಲದೇ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರೆ ಮುಗೀತು ಅಕೌಂಟ್ನಲ್ಲಿರುವ ಅಷ್ಟು ಹಣ ಸೆಕೆಂಡ್ನಲ್ಲಿ ಮಾಯವಾಗಿ ಬಿಡುತ್ತದೆ. ಸದ್ಯ ಇದೇ ರೀತಿಯಾದ ಸ್ಕ್ಯಾಮ್ಗೆ ಅಂತರಪಟ ಧಾರಾವಾಹಿಯ ನಟಿ ಶರ್ಮಿಳಾ ಚಂದ್ರಶೇಖರ್ ಸಿಕ್ಕಿಹಾಕಿಕೊಂಡಿದ್ದಾರೆ.
ಶರ್ಮಿಳಾ ಚಂದ್ರಶೇಖರ್ ಅವರಿಗೆ ವಾಟ್ಸಾಪ್ನಲ್ಲಿ ಬೆದರಿಕೆ ಮೆಸೇಜ್ ಬಂದಿದೆ. ತಕ್ಷಣವೇ ವಿಡಿಯೋ ಮೂಲಕ ಮೆಸೇಜ್ನ ಸ್ಕ್ರೀನ್ಶಾಟ್ ಅನ್ನು ತಮ್ಮ ಇನಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಯಾರೂ ಕೂಡ ಇಂತಹ ಆನ್ಲೈನ್ ಸ್ಕ್ಯಾಮ್ಗೆ ಸಿಕ್ಕಿ ಹಾಕಿಕೊಳ್ಳಬೇಡಿ ಎಂದಿದ್ದಾರೆ. ಶರ್ಮಿಳಾ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ,ನಾನು ಈ ವಿಡಿಯೋ ಮಾಡುತ್ತಿರುವ ಮುಖ್ಯ ಉದ್ದೇಶವೇನೆಂದರೆ, ನಿಮಗೆ ಈಗಾಗಲೇ ಗೊತ್ತಿರುವ ಹಾಗೆ ಆನ್ಲೈನ್ ಫ್ರಾಡ್ಗಳು ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ವೇವ್ ಕ್ಯಾಶ್ ಎಂಬ ಲೋನ್ ಆಪ್ನಿಂದ ನಿಮಗೆ ಲೋನ್ ಆಗಿದೆ. ಅದನ್ನು 30 ನಿಮಿಷದಲ್ಲಿ ಮರು ಪಾತವತಿಸದಿದ್ದರೆ, ನಿಮ್ಮ ಫೊಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತೇವೆ ಎಂದಿದ್ದಾರೆ.
ನಿಮ್ಮ ಫೋಟೋಗಳನ್ನು ಬಳಸಿಕೊಂಡು ಮಾರ್ಫ್ ಮಾಡಿ ನಗ್ನವಾಗಿ ಎಡಿಟ್ ಮಾಡಿ ಎಲ್ಲಾ ವಾಟ್ಸಾಪ್ ಕಾಂಟಾಕ್ಟ್ಸ್ಗೆ ಕಳುಹಿಸುತ್ತೀನಿ ಅಂತ ಬ್ಲ್ಯಾಕ್ಮೇಲ್ ಮೆಸೇಜ್ಗಳು ಬರುತ್ತಿದೆ. ಹಾಗಾಗಿ ನನ್ನ ಎಡಿಟೆಡ್ ಫೊಟೋಗಳು, ಅಥವಾ ನಗ್ನ ಫೋಟೋಗಳು ನಿಮಗೆ ಬಂದರೆ, ಅಥವಾ ಹಣ ಕೊಡದೇ ಫ್ರಾಡ್ ಮಾಡುತ್ತಿದ್ದಾರೆ ಅನ್ನೋ ಯಾವುದೇ ಮೆಸೇಜ್ ಬಂದರು ಅದನ್ನು ನಿರಾಕರಿಸಿ. ಹಾಗೆಯೇ ಆ ನಂಬರ್ಗೆ ರಿಪ್ಲೈ ಮಾಡಬೇಡಿ, ಅವರು ನಿಮ್ಮ ಕಾಂಟ್ಯಾಕ್ಟ್ಗಳ ಆಕ್ಸೆಸ್ ಅನ್ನು ಪಡೆಯಬಹುದು ಎಂದಿದ್ದಾರೆ ನಟಿ ಶರ್ಮಿಳಾ ಚಂದ್ರಶೇಖರ್.
ನಟಿ ಶರ್ಮಿಳಾ ಚಂದ್ರಶೇಖರ್ ಪೌರಾಣಿಕ ಧಾರಾವಾಹಿ ಸೀತೆಯಲ್ಲಿ ಸೀತೆಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಶರ್ಮಿಳಾ ಚಂದ್ರಶೇಖರ್, ಮುಂದೆ ಪಲ್ಲವಿ ಅನುಪಲ್ಲವಿ,ಪರಿಣಿತ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ʻಪಲ್ಲವಿ ಅನುಪಲ್ಲವಿʼ ಧಾರಾವಾಹಿಯ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿರುವ ಶರ್ಮಿಳಾಗೆ ಜೀ ಕನ್ನಡ ವಾಹಿನಿಯ ಪತ್ತೆದಾರಿ ಪ್ರತಿಭಾ ಧಾರಾವಾಹಿ ಹೆಸರು ತಂದು ಕೊಟ್ಟಿತು. ಅಂತರಪಟ ಧಾರಾವಾಹಿಯಲ್ಲಿ ನಟಿಸಿರುವ ಶರ್ಮಿಳಾ ಚಂದ್ರಶೇಖರ್ ಅವರು ಅಮಲಾ ಎನ್ನುವ ನೆಗೆಟಿವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.