ಈ ರೇಖೆ ನಿಮ್ಮ ಕೈಯಲ್ಲಿ ಇದ್ದರೆ ಸಾಕು, ಸ್ಪಲ್ಪ ಸಮಯದಲ್ಲೇ ಕೋ.ಟಿಯ ಒಡೆಯರಾಗುವುದು ಕಂಡಿತ
ಹಸ್ತ ಶಾಸ್ತ್ರದ ಪ್ರಕಾರ, ನಮ್ಮ ಕೈಯಲ್ಲಿನ ರೇಖೆಗಳು ನಮ್ಮ ವ್ಯಕ್ತಿತ್ವವನ್ನು, ಭವಿಷ್ಯವನ್ನು ಹೇಳುತ್ತದೆ. ಕೆಲವೊಂದು ರೇಖೆಗಳು ಉದ್ಯೋಗವನ್ನು ಸೂಚಿಸಿದರೆ, ಇನ್ನು ಕೆಲವೊಂದು ರೇಖೆಗಳು ವಿದ್ಯಾಭ್ಯಾಸವನ್ನು ಹಾಗೂ ಸಂಪತ್ತನ್ನು ಸೂಚಿಸುತ್ತದೆ. ನಿಮ್ಮ ಜಾತಕದಲ್ಲಿ ರಾಜಯೋಗದ ಬಗ್ಗೆ ನೀವು ಆಗಾಗ್ಗೆ ಕೇಳಿರಬಹುದು.
ಆದರೆ, ವ್ಯಕ್ತಿಯ ಜೀವನದಲ್ಲಿ ರಾಜಯೋಗವನ್ನು ಸೂಚಿಸುವ ಅಂತಹ ಕೆಲವು ಗೆರೆಗಳು ಮತ್ತು ಗುರುತುಗಳು ವ್ಯಕ್ತಿಯ ಕೈಯಲ್ಲಿ ಇರುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾರ ಕೈಯಲ್ಲಿ ರಾಜಯೋಗದ ರೇಖೆ ಇರುತ್ತದೆಯೋ ಆ ವ್ಯಕ್ತಿಯ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಹಾಗಿದ್ದರೆ ಅಂಗೈಯಲ್ಲಿರಬೇಕಾದ ಆ ಲಕ್ಷಣಗಳು ಯಾವುದು ಹಾಗೂ ಯಾರಿಗೆಲ್ಲ ಈ ಸೌಭಾಗ್ಯವಿದೆ ಎನ್ನುವುದನ್ನು ನೋಡೋಣ ಬನ್ನಿ.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಅಂಗೈಯ ಮಧ್ಯದಲ್ಲಿ ಕುದುರೆ, ಹೂಜಿ, ಮರ ಅಥವಾ ಕಂಬದ ಗುರುತು ಇದ್ದರೆ, ಈ ಚಿಹ್ನೆಗಳನ್ನು ರಾಜಯೋಗದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಕೈಯಲ್ಲಿ ಬಿಲ್ಲು ಚಕ್ರ, ಮಾಲೆ, ಧ್ವಜ, ರಥ, ಆಸನ ಇದ್ದರೆ ಅಂತಹವರು ಮಾತೆ ಲಕ್ಷ್ಮಿ ವಿಶೇಷ ಅನುಗ್ರಹವನ್ನು ಹೊಂದಿರುತ್ತಾರೆ. ಅಂತಹ ಜನರು ಸಾಕಷ್ಟು ಹಣವನ್ನು ಗಳಿಸುತ್ತಾರೆ.
ಕೈಯಲ್ಲಿ ಸೂರ್ಯ ಪರ್ವತವು ನಿಮಗೆ ಉನ್ನತ ಸ್ಥಾನವನ್ನು ನೀಡುತ್ತದೆ. ಹಾಗಾಗಿ ಸೂರ್ಯ ಪರ್ವತವು ಉಬ್ಬಿದ್ದರೆ ರಾಜಯೋಗದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಶುದ್ಧವಾದ ತಲೆ ರೇಖೆಯನ್ನು ಹೊಂದಿದ್ದರೆ ಮತ್ತು ಆ ರೇಖೆಯು ಗುರುವಿನ ಕಡೆಗೆ ನೇರವಾಗಿ ಬಾಗಿ ಚತುರ್ಭುಜವನ್ನು ರಚಿಸಿದರೆ, ಅದು ರಾಜಯೋಗದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಈ ಸ್ವಸ್ತಿಕ ಚಿಹ್ನೆಯನ್ನು ಅಂಗೈಯಲ್ಲಿ ಹೊಂದಿದವರಿಗೆ ಅತ್ಯಂತ ಅದ್ಭುತವಾದ ಶುಭ ಫಲವನ್ನು ನೀಡುತ್ತದೆ. ತಮ್ಮ ಅಂಗೈಯಲ್ಲಿ ಇಂತಹ ಲಕ್ಷಣಗಳನ್ನು ಹೊಂದಿರುವವರು ಬಹಳ ಅಪರೂಪವಾದರೂ ಕೂಡಾ ತಾಯಿ ಲಕ್ಷ್ಮಿ ಯೂ ಅವರ ಅಂಗೈಯಲ್ಲಿ ಸದಾ ನೆಲೆಸಿರುತ್ತಾಳೆ. ಹಾಗಾಗಿ ಕೈ ಅಥವಾ ಅಂಗೈಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹೊಂದಿದವರು ಬಹಳ ಅದೃಷ್ಟ ವಂತರೂ ಹಾಗೂ ಅತ್ಯಂತ ಸಂತೋಷದಾಯಿಗಳು ಆಗಿರುತ್ತಾರೆ. ಜೊತೆಗೆ ಇವರು ಯಾವುದೇ ಕೆಲಸಗಳನ್ನು ಮಾಡಿದರೂ ಕೂಡಾ ಯಶಸ್ಸು ಅನ್ನುವುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.