ಅಪ್ಪ ಅಮ್ಮನ ಒಪ್ಪಿಗೆ ‌ಇಲ್ಲದೆ ಮದುವೆಯಾದರೆ ಪೋ ಲೀಸ್ ರಕ್ಷಣೆ ಸಿಗಲ್ಲ; ಹೈಕೋರ್ಟ್

 | 
S
ಇತ್ತೀಚಿನ ದಿನಗಳಲ್ಲಿ ಅರೇಂಜ್ ಮ್ಯಾರೇಜ್ ಅಂದರೆ ನಿಶ್ಚಯಿಸಿದ ಮದುವೆಗಿಂತಲೂ ಪ್ರೇಮ ವಿವಾಹಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಯಾವುದೇ ವಿವಾಹವಾಗಿದ್ದರೂ ಅವರ ದಾಂಪತ್ಯ ಜೀವನ ಸುಖಕರವಾಗಿರಬೇಕಾದುದ್ದು ತುಂಬಾನೇ ಮುಖ್ಯ. ಮದುವೆಯಾದ ಬಳಿಕ ಪತ್ನಿಯನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವುದು ಸುಸಂಸ್ಕೃತ ಮಾನವನ ಸಂಕೇತವೆನ್ನುವ ನಂಬಿಕೆಯಿದೆ. 
ಹಿಂದೂ ಧರ್ಮದಲ್ಲಿ ಪ್ರೇಮ ವಿವಾಹವನ್ನು ಗಂಧರ್ವ ವಿವಾಹ ಎಂದು ಕರೆಯಲಾಗುತ್ತದೆ. ಇದು ಸಮಾಜದಲ್ಲಿ ಅಷ್ಟೊಂದು ಮಾನ್ಯತೆಯನ್ನು ಪಡೆದುಕೊಂಡಿಲ್ಲ. ಇದಲ್ಲದೇ ಅಸುರ ವಿವಾಹ, ರಾಕ್ಷಸ ವಿವಾಹ, ಪೈಶಾಚ ವಿವಾಹ ಕೂಡ ಸಮಾಜದಲ್ಲಿ ಮಾನ್ಯವಾಗಿಲ್ಲ. ಸಮಾಜದಲ್ಲಿ ಬ್ರಹ್ಮ ವಿವಾಹ, ಪ್ರಾಜಾಪತ್ಯ ವಿವಾಹ, ದೇವ ವಿವಾಹಗಳು ಮಾನ್ಯವಾಗಿವೆ. ಹಾಗಾದರೆ ಇದೀಗ ಕೋರ್ಟ್ ಲವ್ ಮ್ಯಾರೇಜ್ ಆಗೋರಿಗೆ ಶಾಕ್ ನೀಡಿದೆ.
ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಪೊಲೀಸ್‌ ರಕ್ಷಣೆ ಇರುವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.ತಮ್ಮ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಸ್ವಂತ ಇಚ್ಛೆಯಿಂದ ವಿವಾಹವಾಗುವ ಜೋಡಿಗೆ ಯಾವುದೇ ಬೆದರಿಕೆ ಇದ್ದರೆ, ಪೊಲೀಸ್ ರಕ್ಷಣೆಯನ್ನು ಹಕ್ಕಿನ ವಿಷಯವಾಗಿ ಪಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. ರಕ್ಷಣೆ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ.
ಅರ್ಹ ಪ್ರಕರಣದಲ್ಲಿ ದಂಪತಿಗೆ ನ್ಯಾಯಾಲಯ ಭದ್ರತೆ ಒದಗಿಸಬಹುದು. ಆದರೆ, ಯಾವುದೇ ಗಂಭೀರ ಸ್ವರೂಪದ ಬೆದರಿಕೆ ಇಲ್ಲದಿದ್ದಾಗ, ಅಂತಹ ದಂಪತಿ ಸಮಾಜವನ್ನು ಎದುರಿಸಿ ನಿಲ್ಲುವುದನ್ನು ಕಲಿಯಬೇಕು ಎಂದು ತಿಳಿಸಿದೆ.ಪೊಲೀಸ್ ರಕ್ಷಣೆ ಮತ್ತು ಪೋಷಕರು ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶನ ಕೋರಿ ಶ್ರೇಯಾ ಕೇಸರ್ವಾನಿ ಮತ್ತು ಅವರ ಪತಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub