'ನಾನು ಮದುವೆ ಅಂತ ಆದರೆ ಅದು ತನಿಷಾನೇ' ವರ್ತೂರು ಸಂತು

 | 
H

ಬಿಗ್​ ಬಾಸ್​​ ಫಿನಾಲೆಯಂದು ಐದು ಸ್ಪರ್ಧಿಗಳಲ್ಲಿ ಮೊದಲಿಗರಾಗಿ ಮನೆಯಿಂದ ಹೊರಗೆ ಬಂದ ವರ್ತೂರ್​ ಸಂತೋಷ್​​ ಮೊಗದಲ್ಲಿನ ಮುಗ್ಧತೆ ಕಿಂಚಿತ್ತೂ ಮಾಸಿರಲಿಲ್ಲ. ಆದರೆ, ಕತ್ತಿನಲ್ಲಿದ್ದ ಹುಲಿಯುಗುರು ಪೆಂಡೆಂಟ್​ ಮಾಯವಾಗಿತ್ತು!. ಕಳೆದುಕೊಂಡಿದ್ದು ಒಂದು ಹುಲಿಯುಗುರು ಶೈಲಿಯ ಪೆಂಡೆಂಟ್, ಆದರೆ ಈ ಮನೆಯಲ್ಲಿ ವರ್ತೂರ್ ಗಳಿಸಿಕೊಂಡಿದ್ದಕ್ಕೆ ಲೆಕ್ಕವಿಲ್ಲ. 

ಹಳ್ಳಿಕಾರ್ ಒಡೆಯ ಎಂಬ ಬಿರುದನ್ನು ಗಳಿಸಿಕೊಂಡಿದ್ದ, ಹಳ್ಳಿಕಾರ್ ತಳಿಯ ಹೈನುಗಳನ್ನು ಸಲುಹುತ್ತಿದ್ದ ವರ್ತೂರ್​​ ಸಂತೋಷ್​​ ಬಿಗ್‌ ಬಾಸ್‌ ರೇಸ್‌ಗೆ ಬಂದಿದ್ದು ಹಲವರ ಖುಷಿಗೆ ಕಾರಣವಾಗಿತ್ತು. ಆದರೆ ಈ ಮನೆಯೊಳಗೆ ಹಲವು ಏರಿಳಿತಗಳನ್ನು ಅವರು ಕಂಡಿದ್ದಾರೆ. ವರ್ತೂರ್​ ಸಂತೋಷ್ ಬಿಗ್‌ ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು. ಅಸಮರ್ಥರ ಗುಂಪಿನಿಂದ ಸಮರ್ಥರ ಗುಂಪಿಗೆ ಜಿಗಿದರೂ ಮನೆಯೊಳಗೆ ಅತ್ಯಂತ ಕ್ರಿಯಾತ್ಮಕವಾಗಿಯೇನೂ ವರ್ತೂರ್ ಪಾಲ್ಗೊಳ್ಳುತ್ತಿರಲಿಲ್ಲ. 

ಹಾಗಾಗಿಯೇ ಪ್ರತೀ ವಾರ ನಾಮಿನೇಷನ್‌ ಆಗುವಾಗಲೂ ಈ ಒಂದು ಕಾರಣ ಎಲ್ಲರ ಬಾಯಲ್ಲಿ ಬರುತ್ತಿತ್ತು. ಆದರೆ ಕ್ರಮೇಣ ಮನೆಯ ಸದಸ್ಯರ ಜೊತೆ ಬೆರೆಯುತ್ತಾ, ಆಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ, ಗಲಾಟೆ, ಜಗಳದಿಂದ ಮಾರು ದೂರವೇ ಉಳಿದುಕೊಳ್ಳುತ್ತ ವರ್ತೂರ್​ ರೇಸ್‌ನ ಕಣದೊಳಗೆ ಎಂಟ್ರಿ ಕೊಡತೊಡಗಿದರು. ಬಿಗ್‌ ಬಾಸ್ ಮನೆಯ ಬೆಂಕಿ ಎಂದೇ ಖ್ಯಾತರಾಗಿದ್ದ ತನಿಷಾ ಜೊತೆಗಿನ ವರ್ತೂರ್ ಒಡನಾಟ ಸಖತ್ ಸದ್ದು ಮಾಡಿತ್ತು. 

ತನಿಷಾ, ವರ್ತೂರ್ ಅವರ ಕಾಲಿಗೆ ಮಸಾಜ್ ಮಾಡುವುದು, ವರ್ತೂರ್, ತನಿಷಾ ಅವರ ಮಡಿಲಲ್ಲಿ ಮಲಗುವುದು, ಪರಸ್ಪರ ಮಾತುಗಳನ್ನು ಹಂಚಿಕೊಳ್ಳುವುದು ಎಲ್ಲವೂ ತಮಾಷೆಯ ಟ್ರ್ಯಾಕ್ ಆಗಿ ಸಖತ್ ಹಿಟ್ ಆಗಿತ್ತು. ಟಾಸ್ಕ್‌ನಲ್ಲಿ ವರ್ತೂರ್​ ಅವರಿಂದಲೇ ತನಿಷಾ ಗಾಯಗೊಂಡು ಹೊರಗೆ ಹೋಗುವಂತಾಗಿದ್ದು, ಅವರಿಗೆ ಪಶ್ಚಾತ್ತಾಪ ಕಾಡಿತ್ತು. ಹಾಗಾಗಿಯೇ ತನಿಷಾ ವಾಪಸ್ ಮನೆಗೆ ಬಂದಾಗ ವರ್ತೂರ್ ತುಸು ಹೆಚ್ಚೇ ಕಾಳಜಿ ತೋರಿಸಿದ್ದರು. 

ಶಾಲಾ ಟಾಸ್ಕ್‌ನಲ್ಲಿ ವರ್ತೂರ್ 'ಪಟಾಕಿ ಯಾರದ್ದಾದ್ರೂ ಆಗಿರ್ಲಿ, ಹಚ್ಚೋರು ನಾವಾಗಿರ್ಬೇಕು' ಎಂಬ ಡೈಲಾಗ್‌ ಹೊಡೆದಿದ್ದು ಕೂಡ ಸಖತ್ ವೈರಲ್ ಆಗಿತ್ತು. ವಾರಾಂತ್ಯದಲ್ಲಿ ಕಿಚ್ಚ ಕೂಡ ಅದನ್ನು ವರ್ತೂರ್ ಮತ್ತು ತನಿಷಾ ಜೊತೆ ಮಾಡಿಸಿ ನೋಡಿದ್ದರು. ಇನ್ನು ಅವರ ವಯಕ್ತಿಕ ಸುದ್ದಿಗಳ ಕೇಳಬೇಡಿ ಮಾತಾಡಬೇಡಿ ಎಂದು ಮಾದ್ಯಮದ ಮುಂದೆ ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.