ತಪ್ಪಾಗಿದೆ ಕ್ಷಮಿಸಿ ಇನ್ನೆಂದೂ ಮಾಡಲ್ಲ, ಕೈಮುಗಿದು ಕ್ಷಮೆ ಕೇಳಿದ ಕಲಾವಿದ

 | 
G

ಕಾವೇರಿ ಕನ್ನಡ ಮೀಡಿಯಂ ಧಾರವಾಹಿಯಲ್ಲಿ  ದೈವಾರಾಧನೆ ತೋರಿಸಲಾಗಿದೆ. ಆದರೆ ಇದಕ್ಕೆ ದೈವಾರಾಧಕರು ಆಕ್ಷೇಪ ವ್ಯಕ್ತಪಡಿಸಿದ್ದು, ಮಂಗಳೂರು ಇನ್ನಿತರೆ ಕಡೆಗಳಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬೆನ್ನಲ್ಲೆ ಧಾರಾವಾಹಿ ನಿರ್ದೇಶಕ ಆರ್ ಪ್ರೀತಮ್ ಶೆಟ್ಟಿ ಮಾತನಾಡಿದ್ದು, 2019 ಪಿಂಗಾರ ಸಿನಿಮಾನ ನಿರ್ದೆಶನ ಮಾಡಿದ್ದೇ ಅದು ಸಂಪೂರ್ಣವಾಗಿ ಆಗಿ ದೈವಾರಾಧನೆ ಬಗ್ಗೆನೇ ಸಿನಿಮಾ ಮಾಡಲಾಗಿತ್ತು ಚಿತ್ರಕ್ಕಾಗಿ ನ್ಯಾಷನಲ್ ಅವಾರ್ಡ್ ಜೊತೆ ಸಾಕಷ್ಟು ಪ್ರಶಸ್ತಿಗಳನ್ನ ಪಡೆದಿದ್ದೇನೆ.

 2016 ರಲ್ಲಿ ಮೀನಾಕ್ಷಿ ಮದುವೆ ಎಂಬ ಧಾರಾವಾಹಿಯಲ್ಲೂ ದೇವರಾಧನೆ ತೋರಿಸಿದ್ದೆ. ಆದರೆ ಅಗ ಯಾವುದೇ ರೀತಿ ಸಮಸ್ಯೆ ಆಗಿರಲಿಲ್ಲ. ನಾನು ಮಂಗಳೂರಿನವನೇ ನಮ್ಮ ಮನೆಯಲ್ಲೂ ದೇವರಾಧನೆ ನಡೆಯುತ್ತದೆ. ಈಗ ನಾವು ಆಚಾರ ವಿಚಾರ ಗಮನದಲ್ಲಿಟ್ಕೋಂಡೆ ಮಾಡಿರೋದು. ಒಂದು ವಾರ ಮಾಂಸಾಹಾರ ಸೇವಿಸಬಾರದು, ಶೂಟಿಂಗ್ ನಲ್ಲಿ ಯಾರು ಚಪ್ಪಲಿ ಹಾಕಬಾರದು ಅದನ್ನೆಲ್ಲ ಪಾಲಿಸಿದ್ದೀವಿ.

 ನಾವೆಲ್ಲು ದೈವದ ಅಪಹಾಸ್ಯ ಮಾಡಿಲ್ಲ. ಧಾರವಾಹಿಯಲ್ಲಿ ನಾಯಕಿ ಕೊರಗಜ್ಜನ‌ಭಕ್ತೆ ಮೊದಲಿನಿಂದಲೂ ಹೀಗಾಗಿ ಕಷ್ಟ ಬಂದಾಗ ದೈವ ಯಾವ ರೀತಿ ಪರಿಹಾರ ನೀಡುತ್ತೆ ಎಂಬ ಒಳ್ಳೆ ರೀತಿಯಲ್ಲಿ ನಾವು ತೋರಿಸಿದ್ದೇವೆ ಎಲ್ಲೂ ಅಪಹಾಸ್ಯ ಮಾಡಿಲ್ಲ. ಸೋಮವಾರ ಧಾರವಾಹಿಯ ಎಪಿಸೋಡ್ ಅನ್ನು ಪ್ರಸಾರ ಮಾಡಬೇಕೋ ಬೇಡವೋ ಎಂಬ ವಿಚಾರ ಚಾನೆಲ್ ಮುಖ್ಯಸ್ಥರದ್ದು, ಆದರೆ ಇನ್ಮುಂದೇ ನಾನು ಈ ರೀತಿಯ ದೈವರಾಧನೆ ದೃಶ್ಯಗಳನ್ನ ಮಾಡೋದಿಲ್ಲ ಎಂದಿದ್ದಾರೆ.

ದೈವಾರಾಧನೆ ದೃಶ್ಯಗಳನ್ನು ಪ್ರದರ್ಶಿಸಿರುವ ವಿಚಾರವಾಗಿ ಮಂಗಳೂರು, ಪಂಜೇಶ್ವರಗಳಲ್ಲಿ ಕೆಲವರು ಧಾರಾವಾಹಿ ವಿರುದ್ಧ ದೂರು ದಾಖಲಿಸಿದ್ದು, ದೈವಾರಾಧನೆಯನ್ನು ಹಣ ಮಾಡುವ ದಂಧೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಧಾರಾವಾಹಿ, ಸಿನಿಮಾಗಳಲ್ಲಿ ತಮ್ಮ ಆಚರಣೆಗಳ ಅನುಕರಣೆ ಮಾಡುತ್ತಿರುವುದು ಭಾವನೆಗೆ ಧಕ್ಕೆಯಾಗಿದೆ ಎಂದು ದೂರು ನೀಡಿದ್ದರು. ದೈವದ ದೃಶ್ಯಗಳನ್ನು ಧಾರಾವಾಹಿಯಿಂದ ತೆಗೆದುಹಾಕಬೇಕು, ದೈವಾರಾಧಕರ ಭಾವನೆಗೆ ಧಕ್ಕೆ ತಂದಿರುವ ಧಾರಾವಾಹಿಯ ತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಲಾಗಿದೆ. ಆ ಕಾರಣದಿಂದ ಇನ್ಮುಂದೆ ದೈವದ ದೃಶ್ಯಗಳನ್ನು ಮಾಡುವುದಿಲ್ಲ ಎಂದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.