ಏನೇ ಆದರೂ ಈ ಸ್ಫಧಿ೯ ಮಾತ್ರ ಬಿಗ್ ಬಾಸ್ ವಿನ್ ಆಗಬಾರದು, ಅವಿನಾಶ್ ಶೆಟ್ಟಿ ಗರಂ ಆಗಿದ್ದು ಯಾರ ಮೇಲೆ ಗೊತ್ತಾ

 | 
ಪ್

ಬಿಗ್ಬಾಸ್ ಮನೆಯು ದಿನದಿಂದ ದಿನಕ್ಕೆ ಕೂತೂಹಲ ಹೆಚ್ಚಿಸುತ್ತಿರುವುದು ಮಾತ್ರವಲ್ಲದೆ ಅಂತಿಮ ಘಟ್ಟ ತಲುಪಿದೆ.
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಸಿರಿ ಔಟ್ ಆಗಿ ಹೊರಬಂದಿದ್ದರು. ಅದಕ್ಕೂ ಮುಂಚಿನ ವಾರ ಅವಿನಾಶ್ ಶೆಟ್ಟಿ ಎಲಿಮಿನೇಟ್ ಆಗಿದ್ದರು. ಈ ಬಳಿಕ ಬಿಗ್ ಬಾಸ್ ಮನೆಯೊಳಗಿನ ರಹಸ್ಯ ಬಿಚ್ಚಿಟ್ಟ ಅವಿನಾಶ್, ತಾನು ಔಟ್ ಆಗೋಕೆ ಕಾರಣ ಯಾರು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ವೈಲ್ಡ್ ಕಾರ್ಡ್ ಅಲ್ಲಿ ಎಂಟ್ರಿ ಕೊಟ್ಟರು ಜನರ ಮನಗೆದ್ದ ಅವಿನಾಶ್  ಶೆಟ್ಟಿ ಎಂಟ್ರಿ ಆಗುವಾಗಲೂ ಕಿಚ್ಚ ಇರಲಿಲ್ಲ, ಎಲಿಮಿನೇಟ್ ಆಗಿ ಹೊರಬರುವಾಗಲಾ ಇರಲಿಲ್ಲ. ಈ ಬೇಸರ ಈಗಲೂ ಇದೆ. ಒಂದು ವೇಳೆ ಹೊರ ಬರುವಾಗ ವೇದಿಕೆಯಲ್ಲಿ ಸುದೀಪ್ ಸರ್ ಸಿಕ್ಕಿದ್ರೆ ನಾನು ನಿಜಕ್ಕೂ ಅಳುತ್ತಿದ್ದೆ ಎಂದು ನುಡಿದಿದ್ದಾರೆ. ಒಟ್ಟಿನಲ್ಲಿ ಕಿಚ್ಚ ಅವರ ಭೇಟಿಯೇ ಇಲ್ಲದ ಹಾಗೆ ನನ್ನ ಜರ್ನಿ ಮುಗಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಿಂದ ನಾನು ಹೊರಬರಲು ಕಾರಣವಾಗಿದ್ದು ಮೈಕಲ್ ಅವರ ತಂಡ ಸೇರಿರೋದು. ವಿನಯ್ ಗೌಡ ಮಾತ್ರ ವಿನ್ನರ್ ಆಗಬಾರದು, ವರ್ತೂರ್ ಸಂತೋಷ್ ಆದ್ರೆ ಒಳ್ಳೆದು. ಏಕೆಂದರೆ ಅವರು ರೈತ ಕುಟುಂಬದಿಂದ ಬಂದವರು. ಅವರು ಗೆದ್ದರೆ ರೈತರಿಗೆ ಉಪಯೋಗ ಆಗುತ್ತೆ ಎಂದು ಅವಿನಾಶ್ ಹೇಳಿದ್ದಾರೆ.

ನನಗೆ ವರ್ತೂರ್ ಸಂತೋಷ್ ತುಂಬ ಜೆನ್ಯೂನ್ ಮನುಷ್ಯ ಅನಿಸುತ್ತದೆ. ವಿನಯ್  ಸ್ವಲ್ಪ ಫೇಕ್ ಮಾಡ್ತಿದ್ದಾರೆ ಅನಿಸುತ್ತಿದೆ. ತನಿಷಾ ಕೂಡ ಸ್ವಲ್ಪ ಫೇಕ್ ಮಾಡುತ್ತಿದ್ದಾರೆ. ವರ್ತೂರ್ ಸಂತೋಷ್ ಖಂಡಿತ ಅಂತಿಮ ಹಂತಕ್ಕೆ ಹೋಗುತ್ತಾರೆ. ಅವರ ಜೊತೆಗೆ ಪ್ರತಾಪ್ ಕೂಡ ಬರಬಹುದು. ಪ್ರತಾಪ್  ಅವರು ಅಲ್ಲಿನ ಸಂದರ್ಭವನ್ನು ಬಳಸಿಕೊಳ್ಳುವುದು ಹೇಗೆ ಎಂಬುದು ತುಂಬ ಚೆನ್ನಾಗಿ ಗೊತ್ತಿದೆ. ಸಂಗೀತಾ ಕೂಡ ಟಾಪ್ 5ನಲ್ಲಿ ಇರುತ್ತಾರೆ. ಅವರು ಜಾಸ್ತಿ ಮಾಡುತ್ತಾರೆ, ಆದರೂ ಅವರಿಗೆ ಟಾಸ್ಕ್‌ನಲ್ಲಿ ಕಮ್‌ಬ್ಯಾಕ್ ಮಾಡುವ ರೀತಿಯಿಂದಲೇ ಅವರು ಫೈನಲ್‌ಗೆ ಹೋಗುತ್ತಾರೆ ಅನಿಸುತ್ತದೆ. ಕಾರ್ತಿಕ್ ಕೂಡ ತುಂಬಾ ಪ್ರಬಲ ಸ್ಪರ್ಧಿ. ತುಕಾಲಿ ಬಹಳ ಬುದ್ಧಿವಂತ. ಅಷ್ಟೇ ಸ್ವಯಂಕೇಂದ್ರಿತ ಮನುಷ್ಯ. ನನಗೆ ವೈಯಕ್ತಿಕವಾಗಿ ವರ್ತೂರ್ ಸಂತೋಷ್ ಗೆಲ್ಲಬೇಕು ಎಂಬ ಆಸೆ ಇದೆ ಎಂದಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.