ಗಂಡ ಇಲ್ಲದ ಪರಿಣಾಮ 70ರ ಮಾವನ ಜೊತೆ ಆ ಕೆಲಸಕ್ಕೆ ಬೇಡಿಕೆ; ಸಿಸಿಟಿವಿ ದೃ.ಶ್ಯ

 | 
Gyi

ಅತ್ತೆ -ಸೊಸೆ ಜಗಳದ ಬಗ್ಗೆ ನೂರಾರು ಕಥೆಗಳನ್ನು ಕೇಳಿದ್ದೇವೆ, ಅವರು ಹಾಕುವ ಕಣ್ಣೀರನ್ನೂ ನೋಡಿದ್ದೇವೆ. ಆದ್ರೆ ಇಲ್ಲಿ ಮಾವನಿಗೆ ಸೊಸೆ ಕಾಟ ಕೊಟ್ಟಿದ್ದಾಳೆ. ಇಂಥ ಸಮಾಜದಲ್ಲೂ ಸ್ವಲ್ಪ ಸುರಕ್ಷಿತವಾಗಿರುವಂತೆ ಕಾಣುವುದು ಮಾವ ಮಾತ್ರ. ಆದರೆ, ಮಂಗಳೂರಿನಲ್ಲಿ  ನಡೆದ ಘಟನೆ ಈ ನಂಬಿಕೆಯನ್ನೂ ಸುಳ್ಳು ಮಾಡಿದೆ. ಇಲ್ಲಿ ಸೊಸೆಯೊಬ್ಬಳು ತನ್ನ ಮಾವನನ್ನು ಮನಸೋ ಇಚ್ಛೆ ಥಳಿಸಿ, ನೆಲಕ್ಕೆ ತಳ್ಳಿದ್ದಾಳೆ! 

ಹೌದು ಮಂಗಳೂರಿನ ಕುಲಶೇಖರದಲ್ಲಿ ನಡೆದ ಸೊಸೆಯ ರಾಕ್ಷಸಿ ಕೃತ್ಯ ಈಗ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗೆ ಮಾವನನ್ನು ಹೀನಾಯವಾಗಿ ಥಳಿಸಿದ ಸೊಸೆಯ ಹೆಸರು ಉಮಾಶಂಕರಿ. ಹಾಗಂತ ಇವರು ಸಾಮಾನ್ಯರೇನೂ ಅಲ್ಲ. ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾರೆ .ಕೆಇಬಿಯಲ್ಲಿ ಅಧಿಕಾರಿಯಾಗಿರುವ ಸೊಸೆ ಉಮಾಶಂಕರಿ ಅವರ ಪತಿ ವಿದೇಶದಲ್ಲಿದ್ದಾರೆ. ಪತಿಯ ತಂದೆ ಮಂಗಳೂರಿನ ಮನೆಯಲ್ಲಿ ಸೊಸೆಯ ಜತೆ ವಾಸವಾಗಿದ್ದಾರೆ. ಮಾವನಿಗೆ ವಯಸ್ಸು ಸುಮಾರು 76. ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿತ್ತು, ಸೊಸೆ ಮಾವನನ್ನು ಹೇಗೆ ನೋಡಿಕೊಳ್ಳುತ್ತಿದ್ದರು ಎನ್ನುವುದು ಗೊತ್ತಿಲ್ಲ. ಆದರೆ, ಮಾರ್ಚ್‌ 9ರಂದು ಸೊಸೆ ಥೇಟ್‌ ರಾಕ್ಷಸಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ.

ಸಿಸಿ ಟಿವಿಯಲ್ಲಿ ದಾಖಲಾದಂತೆ ಮಾರ್ಚ್‌ 9ರಂದು ಮಧ್ಯಾಹ್ನ 2.22ರ ಹೊತ್ತಿಗೆ ಈ ಘಟನೆ ನಡೆದಿದೆ. ಬಹುಶಃ ಉಮಾಶಂಕರಿ ಅವರು ಕಚೇರಿಯಿಂದ ಮಧ್ಯಾಹ್ನದ ಊಟಕ್ಕೆ ಬಂದ ವೇಳೆ ಈ ಘಟನೆ ನಡೆದಿದೆ. ಆಕೆಗೂ ಮಾವನಿಗೂ ಯಾವೂದೋ ವಿಷಯಕ್ಕೆ ಸಂಬಂಧಿಸಿ ಜಗಳವಾಗಿದೆ. ಆಗ ಆಕೆ ಮಾವನ ಕೈಯಲ್ಲಿದ್ದ ವಾಕಿಂಗ್‌ ಸ್ಟಿಕ್‌ನ್ನು ಕಿತ್ತುಕೊಂಡಿದ್ದಾರೆ. ಮೊದಲು ಆಕೆ ವಾಕಿಂಗ್‌ ಸ್ಟಿಕ್‌ನಿಂದ ಹೊಡೆಯುತ್ತಿದ್ದಂತೆಯೇ ಮಾವ ಅದನ್ನು ಕಿತ್ತುಕೊಳ್ಳಲು ಮುಂದಾಗುತ್ತಾರೆ.

ಈ ಹಂತದಲ್ಲಿ ಮಾವ ಸೊಸೆಯ ಕೈಯಲ್ಲಿದ್ದ ವಾಕಿಂಗ್‌ ಸ್ಟಿಕ್ಕನ್ನು ಕಿತ್ತುಕೊಳ್ಳಲು ಮುಂದಾಗುತ್ತಾರೆ. ಆಗ ಅವರಿಬ್ಬರ ನಡುವೆ ಒಂದಿಷ್ಟು ಎಳೆದಾಟ ನಡೆಯುತ್ತದೆ. ನರಪೇತಲ ಮಾವ ಸೊಸೆಯ ಕೈಲಿದ್ದ ವಾಕಿಂಗ್‌ ಸ್ಟಿಕ್ಕನ್ನು ಕಿತ್ತುಕೊಳ್ಳಲು ಯತ್ನಿಸುವಾಗ ಸಿಟ್ಟುಗೊಂಡ ಸೊಸೆ ಮಾವನನ್ನು ಜೋರಾಗಿ ತಳ್ಳಿ ಬಿಡುತ್ತಾಳೆ.ವಾಕಿಂಗ್‌ ಸ್ಟಿಕ್‌ ಸಮೇತವಾಗಿ ಮಾವ ಹೋಗಿ ಸೋಫಾದ ಮೇಲೆ ಬೀಳುತ್ತಾರೆ, ಸೋಫಾದ ಬದಿಗಳು ಕೈಗೆ ಬಡಿದು ಗಾಯಗೊಳ್ಳುತ್ತಾರೆ. 

ಮಾವ ನೆಲದಲ್ಲಿ ಬಿದ್ದು ಹೊರಳಾಡಿದರೂ ಆಕೆ ಅವರನ್ನು ಎಬ್ಬಿಸಲು ಪ್ರಯತ್ನ ಮಾಡುವುದಿಲ್ಲ. ಬದಲಾಗಿ ಮಾವನ ಕೈಯಲ್ಲಿದ್ದ ವಾಕಿಂಗ್‌ ಸ್ಟಿಕ್ಕನ್ನು ಕಿತ್ತುಕೊಂಡು ಇನ್ನಷ್ಟು ಬೈಯುತ್ತಾರೆ. ಮಾವ ಅಮ್ಮಾ ಅಮ್ಮಾ ಎಂದು ಕಿರುಚುತ್ತಾರೆ.ಅಂದ ಹಾಗೆ ಈ ಎಲ್ಲ ಘಟನೆಗಳು ಹೊರಬಂದಿದ್ದು ವಿದೇಶದಲ್ಲಿರುವ ಪತಿ ಮನೆಯ ಸಿಸಿಟಿವಿ ಫೂಟೇಜ್‌ಗಳನ್ನು ಗಮನಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.