ಕೊನೆಯ 15 ನಿಮಿಷದಲ್ಲಿ ಪುನೀತ್ ತನ್ನ ಪತ್ನಿಗೆ ಹೇಳಿದ್ದೇನು, ಇವತ್ತಿಗೂ ಅಶ್ವಿನಿ ಮೇಡಂ ಕಣ್ಣೀರು ಹಾಕುವುದ್ಯಾಕೆ ಗೊ.ತ್ತಾ
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ಅಸುನೀಗಿದ್ದು ಅವರ ಅಗಲಿಕೆ ಹೊಂದುವುದಕ್ಕೆ ಮೊದಲು ಆರೋಗ್ಯದಲ್ಲಿ ಏನೇನು ವ್ಯತ್ಯಾಸವಾಯಿತು ಎಂದು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಂಗನಾಥ್ ನಾಯಕ್ ಮಾಹಿತಿ ನೀಡಿದ್ದರು.
ಹೌದು ಶುಕ್ರವಾರ ಬೆಳಗ್ಗೆ ಎದ್ದ ಪುನೀತ್ ರಾಜ್ ಕುಮಾರ್ ರವರು ಎಂದಿನಂತೆ ವರ್ಕೌಟ್ ಗೆ ಜಿಮ್ ಗೆ ಹೋಗಿದ್ದರು. ಅಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಪಕ್ಕದ ಫ್ಯಾಮಿಲಿ ಡಾಕ್ಟರ್ ಆದ ಡಾ.ರಮಣರ ಬಳಿಗೆ ಹೋಗಿದ್ದಾರೆ. ಇಸಿಜಿ ಮಾಡಿದ್ದು ಇಸಿಜಿಯಲ್ಲಿ ಹೃದಯಾಘಾತವಾಗಿದೆ ಎಂದು ತೋರಿಸಿತ್ತು. ಕೂಡಲೇ ವಿಕ್ರಂ ಆಸ್ಪತ್ರೆಗೆ ಪುನೀತ್ ಅವರನ್ನು ಕರೆತರಲಾಗಿತ್ತು.
ದಾರಿಮಧ್ಯದಲ್ಲಿ ಅವರಿಗೆ ಹೃದಯಾಘಾತವಾಗಿದ್ದು ಕರೆದುಕೊಂಡು ಬರುವಾಗ ಅವರ ಹೃದಯ ಚಟುವಟಿಕೆ ಮಾಡುತ್ತಿರಲಿಲ್ಲ ನಂತರ ಸುಮಾರು 3 ಗಂಟೆಗಳ ಕಾಲ ವೆಂಟಿಲೇಟರ್ ನಲ್ಲಿಟ್ಟು ಹೃದಯಕ್ಕೆ ಮಸಾಜ್ ಮಾಡಿ ನಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಅಷ್ಟಕ್ಕೂ ಆ ಕೊನೆಯ ಕ್ಷಣದಲ್ಲಿ ನಿಜಕ್ಕೂ ಏನು ನಡೆಯಿತೆಂದು ಅಪ್ಪು ಕೊನೆಯದಾಗಿ ಮಲಗಿದ್ದ ಅದೇ ಕಾರ್ ನ ಡ್ರೈವರ್ ಬಾಬು ಸತ್ಯ ಬಿಚ್ಚಿಟ್ಟಿದ್ದಾರೆ.
ಗುರುವಾರ ರಾತ್ರಿಯಷ್ಟೆ ಗುರುಕಿರಣ್ ಅವರ ಮನೆಯಲ್ಲಿ ಬರ್ತ್ ಡೆ ಪಾರ್ಟಿ ಮಾಡುತ್ತಾ ಹಾಡಿ ನಲಿದ ಅಪ್ಪು ರಾತ್ರಿ 11.20 ರ ತನಕ ಕೂಡ ಎಂಜಾಯ್ ಮಾಡಿದ್ದರು. ಅಲ್ಲದೆ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ ಅವರ ಜೊತೆ ಮಾತನಾಡುತ್ತಾ ಕುಳಿತಿದ್ದು ಅಲ್ಲಿಯೂ ಕೂಡ ಅನಿರುದ್ಧ್ ಅವರ ಜೊತೆ ವ್ಯಾಯಾಮ ಹಾಗೂ ಸೈಕ್ಲಿಂಗ್ ಬಗ್ಗೆ ಅಪ್ಪು ಮಾತನಾಡಿದ್ದರು.
ಅನಿರುದ್ಧ್ ಅವರು ಸೈಕ್ಲಿಂಗ್ ಸ್ಪರ್ಧೆಯೊಂದರ ಬಗ್ಗೆ ತಿಳಿಸಿ ಅದರಲ್ಲಿ ಭಾಗವಹಿಸುವಂತೆ ತಿಳಿಸಿದ್ದು ಎಂದಿನಂತೆ ಪುನೀತ್ ತಮ್ಮ ಮುಗ್ಧತೆಯಿಂದ ನಕ್ಕು ಸುಮ್ಮನಾಗಿದ್ದರು. ಆನಂತರ ಕಾರ್ಯಕ್ರಮ ಮುಗಿಸಿ 11.45ರ ಸಮಯಕ್ಕೆ ಮನೆಗೆ ಮರಳಿದ್ದರು. ಮನೆಗೆ ಬಂದು ಆರಾಮಾಗೇ ಅಪ್ಪು ಬೆಳಿಗ್ಗೆ ಎಂದಿನಂತೆ ತಮ್ಮ ದಿನಚರಿಗಳನ್ನು ಮುಗಿಸಿ ಯಾಕೋ ಸ್ವಲ್ಪ ಸುಸ್ತಾಗ್ತಾ ಇದೆ ಎಂದು ಅಶ್ವಿನಿ ಅವರ ಬಳಿ ಹೇಳಿಕೊಂಡಿದ್ದಾರೆ.
ಗಾಬರಿಗೊಂಡ ಅಶ್ವಿನಿ ಅವರು ಆಸ್ಪತ್ರೆಗೆ ಹೋಗೋಣ ಎಂದಿದ್ದು ಆದರೆ ಆಗಲೂ ಸಹ ಅಪ್ಪು ಬೇಡ ರೆಸ್ಟ್ ಮಾಡಿದರೆ ಸರಿ ಹೋಗುತ್ತದೆ ಎಂದಿದ್ದಾರೆ. ಆದರೆ ಅಶ್ವಿನಿ ಮಾತ್ರ ಫ್ಯಾಮಿಲಿ ಡಾಕ್ಟರ್ ಬಳಿಯಾದರೂ ಹೋಗಿ ಬರೋಣ ಎಂದು ಕಾಳಜಿ ತೋರಿದ್ದು ಕೊನೆಗೆ ಇಬ್ಬರೂ ಕಾರ್ ನಲ್ಲಿ ರಮಣ ಕ್ಲಿನಿಕ್ ಗೆ ತೆರಳಿದ್ದಾರೆ. ಇನ್ನು ಮನೆಯಿಂದ ಹೊರಡುವಾಗ ಪುನೀತ್ ಅವರು ಬಹಳ ಹಾರಾಮಾಗಿದ್ದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ.
ಇನ್ನು ಬಾಡಿಗಾರ್ಡ್ ಚಲಪತಿ ಅವರನ್ನು ಬರೋದು ಬೇಡ ಎಂದು ಹೇಳಿದ ಪುನೀತ್ ಅವರು ಅಶ್ವಿನಿ ಅವರ ಜೊತೆ ಕ್ಲಿನಿಕ್ ಗೆ ಹೊರಟಿದ್ದು ಅಲ್ಲಿ ಜೊತೆಗಿದ್ದದ್ದು ಕೇವಲ ಡ್ರೈವರ್ ಬಾಬು ಅಶ್ವಿನಿ ಅವರು ಹಾಗೂ ಮತ್ತೊಬ್ಬ ಸಹಾಯಕ ಅಷ್ಟೇ. ಆಗಲೂ ಕೂಡ ಪುನೀತ್ ಅವರು ಕಾರಿ ನಲ್ಲಿ ಭಜರಂಗಿ ಚಿತ್ರ ವಿತರಕರಿಗೆ ಫೋನ್ ಮಾಡಿ ಹೇಗಿದೆ ರೆಸ್ಪಾನ್ಸ್ ಎಂದು ವಿಚಾರಿಸಿಕೊಂಡಿದ್ದಾರೆ.
ನಂತರ ಡಾಕ್ಟರ್ ರಮಣ್ ಅವರ ಕ್ಲಿನಿಕ್ ನಲ್ಲಿ ಅಪ್ಪುವಿಗೆ ಪರೀಕ್ಷೆ ನಡೆಸಲಾಗಿದ್ದು, ಎಲ್ಲವೂ ನಾರ್ಮಲ್ ಆಗಿದ್ದರು ಕೂಡ ಇಸಿಜಿ ಮಾಡಿಸಲಾಯಿತು. ಆಗ ಅಲ್ಲಿ ಅವರ ಹಾರ್ಟ್ ರೇಟ್ ನಲ್ಲಿ ಒತ್ತಡ ಇರುವುದು ಕಂಡು ಬಂದಿದ್ದು ಅದಾಗಲೇ ಪುನೀತ್ ಬಹಳ ಬೆವರಲು ಶುರು ಮಾಡಿದ್ದರು. ನಂತರ ಕೆಲ ನಿಮಿಷಗಳಲ್ಲೇ ಘಟಿಸಬಾರದ ಘಟನೆ ಘಟಿಸಿತು ನಮ್ಮೆಲ್ಲರ ಆರಾಧ್ಯ ದೈವ ಅಪ್ಪು ಸರ್ ಇನ್ನಿಲ್ಲವಾದರು ಎಂದಿದ್ದಾನೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.