ಬಹುಬೇಡಿಕೆಯ ನಟಿಯ ಗಂಡನಿಗೆ ಜೀವ ಬೆದರಿಕೆ, ರೊಚ್ಚಿಗೆದ್ದ ಕನ್ನಡಿಗರು

ಕಳೆದೊಂದು ವರ್ಷದಿಂದ ತೆಲುಗಿನ ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಸಕತ್ ಸುದ್ದಿಯಲ್ಲಿದ್ದಾರೆ. ಇವರು ಮತ್ತೆ ಮದುವೆ ಚಿತ್ರದ ಮೂಲಕ ಹಲ್ಚಲ್ ಸೃಷ್ಟಿಸಿದ್ದರು. ಮೊನ್ನೆಯಷ್ಟೇ ಈ ಸಿನಿಮಾ ಪ್ರೈಮ್ ನಲ್ಲಿ ರಿಲೀಸ್ ಆಗಿತ್ತು. ಇದೀಗ ದಿಢೀರ್ ಅಂತ ಅದು ಮಿಸ್ಸಿಂಗ್ ಆಗಿದೆ. ಇದಕ್ಕೆ ಕಾರಣ ನರೇಶ್ ಪತ್ನಿ ರಮ್ಯಾ ರಘುಪತಿ ಎನ್ನುವ ವಿಷಯ ಎಲ್ಲರಿಗೂ ತಿಳಿದದ್ದೇ. ತಮ್ಮನ್ನೇ ಗುರಿಯಾಗಿರಿಸಿಕೊಂಡು ಮತ್ತೆ ಮದುವೆ ಸಿನಿಮಾ ತಯಾರು ಮಾಡಿದ್ದಾರೆ ಎಂದು ರಮ್ಯಾ ರಘುಪತಿ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಸಿನಿಮಾ ಬಿಡುಗಡೆಗೆ ತಡೆ ಕೋರಿದ್ದರು.
ಆದರೆ ಅಲ್ಲಿ ಅರ್ಜಿ ಮಾನ್ಯ ಆಗಿರಲಿಲ್ಲ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದಂತೆಯೇ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು ರಮ್ಯಾ. ಅವರ ಮನವಿ ಮೇರೆಗೆ ಓಟಿಟಿಯಲ್ಲಿ ಮತ್ತೆ ಮದುವೆ ಸಿನಿಮಾವನ್ನು ತೆಗೆದುಹಾಕಲಾಗಿದೆ. ಈ ಮೂಲಕ ನರೇಶ್ ಅವರಿಗೆ ಹಿನ್ನೆಡೆಯಾಗಿದೆ. ಇನ್ನು ನರೇಶ್ ತಮ್ಮದೇ ಜೀವನದ ಘಟನೆಗಳನ್ನು ಸೇರಿಸಿ 'ಮಳ್ಳಿ ಪೆಳ್ಳಿ' ಕನ್ನಡದಲ್ಲಿ ಮತ್ತೆ ಮದುವೆ ಸಿನಿಮಾ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇತ್ತೀಚೆಗೆ ಸಿನಿಮಾ ಓಟಿಟಿಗೆ ಬಂದಿತ್ತು.
ಆದರೆ ರಮ್ಯಾ ರಘುಪತಿಯಿಂದ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ. ಈ ನಡುವೆಯೇ, ಅವರು ತಮಗೆ ಗನ್ ಅವಶ್ಯಕತೆ ಇರುವುದಾಗಿ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿದ್ದು, ರಕ್ಷಣೆಗಾಗಿ ಪರವಾನಗಿ ಹೊಂದಿರುವ ರಿವಾಲ್ವರ್‌ಗೆ ಅನುಮತಿ ನೀಡುವಂತೆ ಜಿಲ್ಲಾ ಎಸ್ಪಿ ಮಾಧವರೆಡ್ಡಿ ಅವರನ್ನು ಕೋರಿದ್ದಾರೆ. ನಿನ್ನೆ ಪುಟ್ಟಪರ್ತಿಯಲ್ಲಿ ಎಸ್ಪಿ ಅವರನ್ನು ಭೇಟಿಯಾಗಿರೋ ನರೇಶ್ ಅವರು ಈ ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಇವರಿಗೆ ಜೀವ ಬೆದರಿಕೆ ಇರುವುದು ಮಾವೋವಾದಿಗಳಿಂದ ಎಂದು ಹೇಳಿದ್ದಾರೆ.
ಮಾವೋವಾದಿಗಳಿಂದ ಜೀವ ಬೆದರಿಕೆ ಇರುವ ಕಾರಣ 2008ರಲ್ಲಿ ಪರವಾನಗಿ ಪಡೆದ ರಿವಾಲ್ವರ್ ತೆಗೆದುಕೊಂಡು ಹೋಗಿದ್ದೆ. ಈಗ ಹಿಂದೂಪುರಂನಲ್ಲಿ ವಾಸವಿದ್ದೇನೆ. ಈ ಹಿಂದೆ ಅನುಮತಿ ನೀಡದ ಕಾರಣ ಪರವಾನಗಿ ಪಡೆದ ರಿವಾಲ್ವರ್ ಅನ್ನು ತನ್ನ ಬಳಿ ಇಟ್ಟುಕೊಳ್ಳಲು ಅವಕಾಶ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ. ನಕ್ಸಲ್ಸ್ ಹಿಟ್ ಲಿಸ್ಟ್‌ನಲ್ಲಿ ಇರುವುದರಿಂದ ತಮಗೆ 2008ರಲ್ಲಿ ಗನ್ ಲೈಸೆನ್ಸು ನೀಡಲಾಗಿತ್ತು. ಪ್ರಸ್ತುತ ಈಗ ಕೂಡ ಜೀವಹಾನಿ ಇರುವುರಿಂದ ಲೈಸೆನ್ಸ್ ಪರವಾನಗಿ ನವೀಕರಣವಾಗಬೇಕಿದೆ ಎಂದಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.