India vs Pak; ಭಾರತದ ಆಟಗಾರ್ತಿ ಸಾನಿಯಾ ಮಿರ್ಜಾ ನಿಂತಿದ್ದು ಯಾರ ಪರ, ಸಿ#ಡಿದೆದ್ದ ಫ್ಯಾನ್ಸ್
May 10, 2025, 13:57 IST
|

ಸಾನಿಯಾ ಯುದ್ಧಕ್ಕೆ ಬೆಂಬಲ ನೀಡುತ್ತಿದ್ದಾರೆ. ಅಮಾಯಕರ ಹತ್ಯೆಯನ್ನು ಸಾನಿಯಾ ಸಂಭ್ರಮಿಸುತ್ತಿದ್ದಾರೆ ಅನ್ನೋ ಟೀಕೆಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ತಮ್ಮ ವರಸೆ ಬದಲಿಸಿದ್ದಾರೆ. ಪಾಕಿಸ್ತಾನದ ಭಾರತದ ಮೇಲೆ ಮಾಡಿದ ಮಿಲಿಟರಿ ದಾಳಿಯನ್ನು ಹಿಮ್ಮೆಟ್ಟಿಸುತ್ತಿದ್ದಂತೆ ಸಾನಿಯಾ ಮಿರ್ಜಾ ಶಾಂತಿಯ ಪಾಠ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಭಾರತ ಪ್ರತಿದಾಳಿ ಬದಲು ಶಾಂತಿ ಮಾತುಕತೆ, ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದಾರೆ.
ಆಪರೇಶನ್ ಸಿಂದೂರ್ ಕುರಿತು ಭಾರತೀಯ ಸಶಸ್ತ್ರ ಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಸುದ್ದಗೋಷ್ಠಿ ನಡೆಸಿದ ಫೋಟೋವನ್ನು ಸಾನಿಯಾ ಮಿರ್ಜಾ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ನಾವು ಒಂದು ರಾಷ್ಟ್ರವಾಗಿ ಏನು ಅನ್ನೋ ಪ್ರಬಲ ಸಂದೇಶವಿದೆ ಅನ್ನೋ ಫೋಟೋವನ್ನು ಸಾನಿಯಾ ಹಂಚಿಕೊಂಡಿದ್ದರು. ಆಧರೆ ಈ ಫೋಟೋಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಸಾನಿಯಾ ಮಿರ್ಜಾ ಮಾಜಿ ಗಂಡನ ತವರು ಪಾಕಿಸ್ತಾನದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸಾನಿಯಾ ಮಿರ್ಜಾ ಆಪರೇಶನ್ ಸಿಂದೂರ್‌ಗೆ ಬೆಂಬಲ ನೀಡುವ ಮೂಲಕ ಪಾಕಿಸ್ತಾನದಲ್ಲಿನ ಅಮಾಯಕ ಜೀವನಗಳ ಬಲಿಯನ್ನು ಸಭ್ರಮಿಸಿದ್ದಾರೆ.
ಮುಸ್ಲಿಮ್ ಮಹಿಳೆಯಾಗಿ ಮಹಿಳೆಯರ ಬಗ್ಗೆ ಧ್ವನಿ ಎತ್ತಬೇಕು. ಆಪರೇಶನ್ ಸಿಂದೂರ್‌ನಿಂದ ಪಾಕಿಸ್ತಾನದ ಅಮಾಯಕ ಹೆಣ್ಣು ಮಕ್ಕಳು ಹತರಾಗಿದ್ದಾರೆ. ಇದನ್ನು ಸಾನಿಯಾ ಮಿರ್ಜಾ ಹೇಗೆ ಸಂಭ್ರಮಿಸುತ್ತೀರಿ. ನಿಮ್ಮ ಮಾನವೀಯತೆ ಕೆಲವರಿಗೆ ಮಾತ್ರ ಸೀಮಿತವಾಗಿದೆ ಎಂಬ ಟೀಕೆಗಳು ಪಾಕಿಸ್ತಾನದಿಂದ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸತತ ಗುಂಡಿನ ದಾಳಿ, ಮಿಸೈಲ್ ದಾಳಿ ಆರಂಭಿಸಿತ್ತು. ಇದಕ್ಕೆ ಭಾರತ ಕೂಡ ಪ್ರತ್ಯುತ್ತರ ನೀಡಿದೆ. ಭಾರತದ ಪ್ರತಿದಾಳಿ ನಡೆಸುತ್ತಿದ್ದಂತೆ ಸಾನಿಯಾ ಮಿರ್ಜಾ ವರಸೆ ಬದಲಾಗಿದೆ. ಶಾಂತಿ ಎಲ್ಲರ ಆಯ್ಕೆಯಾಗಬೇಕು, ದಾಳಿಯಿಂದ ಏನೂ ಸಾಧ್ಯವಿಲ್ಲ. ಎಂದು ಶಾಂತಿಧೂತರಂತೆ ಸಂದೇಶ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025