ಪ್ರತಿಯೊಬ್ಬ ಪೋಷಕರು ನೋಡಲೇಬೇಕಾದ ಮಾಹಿತಿ, ನಿಮ್ಮ ಮಕ್ಕಳು ಮೊಬೈಲ್ ಉಪಯೋಗಿಸುವಂತಿಲ್ಲ

 | 
Usue

ಇಂದು ಅಂತರ್ಜಾಲ ಎನ್ನುವುದು ನಮಗೆಲ್ಲಾ ತವರು ಮನೆಯಾಗಿದೆ. ಏಕೆಂದರೆ ಸ್ವತಃ ನಮ್ಮ ಮನೆಯ ಬಗ್ಗೆ ನಮಗೆ ಅಷ್ಟು ತಿಳುವಳಿಕೆ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣ ಮತ್ತು ಪ್ರತಿ ದಿನ ಬಳಕೆ ಮಾಡುವ ಆನ್ಲೈನ್ ವೆಬ್ ಸೈಟ್ ಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರುತ್ತದೆ.

ಅಮೆರಿಕದ ಫ್ಲೋರಿಡಾದಲ್ಲಿ 14ಕ್ಕಿಂತ ಕಡಿಮೆ ವಯಸ್ಸಿನವರು ಮುಂದಿನ ವರ್ಷದಿಂದ ಸಾಮಾಜಿಕ ಜಾಲತಾಣ ಸೇರುವಂತಿಲ್ಲ. ಈ ಸಂಬಂಧದ ಕಾನೂನಿಗೆ ಗವರ್ನರ್ ರಾನ್ ಡೆಸ್ಯಾಂಟಿಸ್ ಸಹಿ ಮಾಡಿದ್ದಾರೆ. 14 ವರ್ಷಕ್ಕಿಂತ ಕೆಳ ವಯಸ್ಸಿನವರ ಎಲ್ಲ ಖಾತೆಗಳನ್ನು ಕಿತ್ತುಹಾಕುವಂತೆ ಈಗಾಗಲೇ ಎಲ್ಲ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.

ಹೊಸ ಕಾನೂನಿನ ಅನ್ವಯ 14 ರಿಂದ 15 ವರ್ಷದೊಳಗಿನ ಮಕ್ಕಳು ಇನ್‍ಸ್ಟಾಗ್ರಾಂ ಮತ್ತು ಸ್ನ್ಯಾಪ್‍ಚಾಟ್‍ನಂಥ ಸಾಮಾಜಿಕ ಜಾಲತಾಣ ಖಾತೆಗಳನ್ನು ಹೊಂದಲು ಪೋಷಕರ ಒಪ್ಪಿಗೆ ಪಡೆಯುವುದು ಕಡ್ಡಾಯ.ಖಾತೆಯನ್ನು ಕಿತ್ತುಹಾಕಲು ಸಾಮಾಜಿಕ ಜಾಲತಾಣ ಕಂಪನಿಗಳು ವಿಫಲವಾದಲ್ಲಿ, ಮಕ್ಕಳ ಪರವಾಗಿ ದಾವೆ ಹೂಡಲಾಗುವುದು ಹಾಗೂ 10 ಸಾವಿರ ಡಾಲರ್ ವರೆಗೆ ಪರಿಹಾರವನ್ನು ಮಕ್ಕಳಿಗೆ ನೀಡಲಾಗುತ್ತದೆ. 

ಕಂಪನಿಗಳಿಗೆ 50 ಸಾವಿರ ಡಾಲರ್ ವರೆಗೂ ದಂಡ ವಿಧಿಸಬಹುದಾಗಿದೆ.ಮುಂದಿನ ವರ್ಷದ ಜನವರಿಯಿಂದ ಫ್ಲೋರಿಡಾದಲ್ಲಿ ಇದು ಜಾರಿಗೆ ಬರಲಿದೆ. ಆದರೆ ಇದು ಅಮೆರಿಕದ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಜಾಲತಾಣ ಕಂಪನಿಗಳು ಈ ನಿರ್ಧಾರವನ್ನು ಪ್ರಶ್ನಿಸುವ ಸಾಧ್ಯತೆ ಇದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.