ರಾತ್ರಿ ಹೊತ್ತು ಪತಿಗೆ ಪತ್ನಿ ಕೊಡಲಾಗದ ಒಂದೇ ಒಂದು ವಸ್ತು ಯಾ ವುದು ಗೊ ತ್ತಾ
Aug 14, 2024, 09:17 IST
|
ಜೀವನ ಅಂದ್ರೆ ತುಂಬಾ ಸಿಂಪಲ್ ಒಂದಿಷ್ಟು ಪ್ರೀತಿ ,ಇನ್ನಷ್ಟು ಹೊಂದಾಣಿಕೆ ಸಾಕು. ಹೌದು ಜೀವನ ಅಂದಮೇಲೆ ಇಲ್ಲಿ ಏರಿಳಿತಗಳು ಇದ್ದೇ ಇರುತ್ತದೆ. ಅದರಲ್ಲೂ ಗಂಡ-ಹೆಂಡತಿಯ ವೈವಾಹಿಕ ಜೀವನ ಒಂದು ರೀತಿ ರೈಲಿನ ಹಳಿ ಇದ್ದಂತೆ. ಯಾವುದಾದರೂ ಒಂದು ಹಳಿಗೆ ಹಾನಿಯಾದರೂ ವೈವಾಹಿಕ ಜೀವನದಲ್ಲಿ ಬಿರುಗಾಳಿಯೇ ಏಳುತ್ತದೆ.
ಕ್ಷುಲಕ ಕಾರಣಗಳಿಗೂ ವೈವಾಹಿಕ ಜೀವನ ಹಾಳಾದಂತಹ ಎಷ್ಟೋ ಉದಾಹರಣೆಗಳಿವೆ. ಹೀಗಾಗಿಯೇ ಗಂಡ-ಹೆಂಡತಿ ಸಂಬಂಧದ ಬಗ್ಗೆ ಅನೇಕ ಚರ್ಚೆಗಳು ಮತ್ತು ಜೋಕ್ಸ್ಗಳು ಆಗುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರ ಪ್ರಮುಖ ವಿಚಾರವೂ ಕೂಡ ಗಂಡ-ಹೆಂಡತಿಯ ಜಗಳವೇ ಆಗಿದೆ. ಇದೀಗ ಗಂಡ-ಹೆಂಡತಿ ಸಂಬಂಧಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಪತ್ನಿಯ ಕೈಯಿಂದ ಗಂಡನಿಗೆ ಕೊಡಲಾಗದ ಒಂದೇ ಒಂದು ವಸ್ತು ಯಾವುದು ಎಂಬ ಪಾಕಿಸ್ತಾನಿ ಮಹಿಳೆಯ ಪ್ರಶ್ನೆಗೆ ಯುವಕನೊಬ್ಬ ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ದಯವಿಟ್ಟು ನಾನು ಕೇಳುವ ಸಾಮಾನ್ಯ ಪ್ರಶ್ನೆಗಳು ಉತ್ತರಿಸಿ, ಪತ್ನಿಯು ತನ್ನ ಗಂಡನಿಗೆ ಕೊಡಲಾಗದ ಒಂದೇ ಒಂದು ವಸ್ತು ಯಾವುದು ಎಂದು ಮಹಿಳೆ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಕೆಲ ಸೆಕೆಂಟ್ ಯೋಚಿಸಿ ಉತ್ತರಿಸುವ ಯುವಕ 'ಶಾಂತಿ' ಎಂದು ಹೇಳುತ್ತಾನೆ.
ಪತ್ನಿಯರು ತಮ್ಮ ಗಂಡದಿರಿಗೆ ಶಾಂತಿ ಅಥವಾ ನೆಮ್ಮದಿಯನ್ನು ನೀಡಲಾರರು ಎನ್ನುತ್ತಾನೆ. ಈ ಉತ್ತರ ಕೇಳಿ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದು, ಕಾಮೆಂಟ್ಗಳ ಮಹಾಪೂರವನ್ನು ಹರಿಸುತ್ತಿದ್ದಾರೆ. ಯುವಕನ ಉತ್ತರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅಬ್ಬಾ ಎಂಥಾ ಉತ್ತರ ನೀಡಿದಿರಿ ಬ್ರೋ, ಇದು ನೂರಕ್ಕೆ ನೂರು ಸತ್ಯ. ನಾವು ಸುಮ್ಮನಿದ್ದರೂ ಪತ್ನಿಯರು ಸುಮ್ಮನೆ ಇರಲು ಬಿಡುವುದಿಲ್ಲ ಅಂತ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ಗಳನ್ನು ಮಾಡಿದ್ದಾರೆ.
ಇನ್ನು ಕೆಲವರು ಮಹಿಳೆಯರ ಪರ ಅಭಿಪ್ರಾಯ ವ್ಯಕ್ತಪಡಿಸಿ, ಯುವಕನ ಹೇಳಿಕೆಯನ್ನು ಖಂಡಿಸಿದ್ದಾರೆ. ಅಲ್ಲ ನಾವು ಶಾಂತಿ ನೆಮ್ಮದಿ ನೀಡಲಾರವು ಅಂದಮೇಲೆ ನೀವೇಕೆ ನಮ್ಮನ್ನು ಪ್ರೀತಿಸುತ್ತೀರಿ ಮದುವೆ ಆಗುತ್ತೀರಿ ಎಂದು ಅವನ ಹೇಳಿಕೆಯನ್ನು ಖಂಡಿಸಿದ್ದಾರೆ. ಪ್ರೀಯ ಓದುಗರೇ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ನಮಗೆ ತಿಳಿಸಿ.