ಇಸ್ರೋ ವಿಜ್ಞಾನಿ ಕಾರಿಗೆ ಕಲ್ಲೆಸೆತ, ಕಾರನ್ನು ತಡೆದು ಹ.ಲ್ಲೆ ಮಾಡಲಾಗಿದೆ

 | 
Hg

ಒಳ್ಳೆಯದಾಗಲಿ ಎಂದು ಬೇಡುವ ನೂರಾರು ಜನರಿದ್ದರೆ ಒಲ್ಲೆಯದಾಗದಿರಲಿ ಎಂದು ಕಾಡುವ ಜನ ಕೂಡ ಇದ್ದಾರೆ. ಹೌದು ಚಂದ್ರಯಾನ 3 ಯಶಸ್ವಿಯಾದ ಹಿನ್ನೆಯಲ್ಲಿ ಇಸ್ರೋ ವಿಜ್ಞಾನಿಗಳು ಸಂತೋಷದಲ್ಲಿದ್ದಾರೆ ಆದರೆ ಈ ಸಮಯದಲ್ಲಿ ವಿಜ್ಞಾನಿಯೊಬ್ಬರ ಕಾರಿಗೆ ಕಲ್ಲು ಎಸೆಯುವ ಮೂಲಕ ಅಪರಿಚಿತ ದುಷ್ಕರ್ಮಿ ಒಬ್ಬ ವಿಕೃತಿ ಮೆರೆದಿದ್ದಾನೆ.

ಇಸ್ರೋ ಯುವ ವಿಜ್ಞಾನಿಯ ಕಾರ್‌ಗೆ ಕಲ್ಲು ಎಸೆದು ವಿಜ್ಞಾನಿಯ ಮೇಲೆ ಹಲ್ಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಐದು ದಿನದ ಹಿಂದೆ ನಡೆದಿರುವ ಈ ದುಷ್ಕೃತ್ಯ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌತನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ‌‌ರೌತನಹಳ್ಳಿಯ ಮುಖ್ಯ ರಸ್ತೆಯಲ್ಲಿ ಆಗಸ್ಟ್‌ 24ರ ರಾತ್ರಿ 12ರ ವೇಳೆ ಮನೆಗೆ ತೆರಳುತ್ತಿದ್ದ ಇಸ್ರೋದ ಯುವ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರನ್ನು ಹಿಂಬಾಲಿಸಿದ ಅಪರಿಚಿತ ದುಷ್ಕರ್ಮಿಗಳು, ಹಿಂಬದಿಯಿಂದ ಕಾರ್‌ನ ಗ್ಲಾಸ್‌ ಒಡೆದು ಗೂಂಡಾಗಿರಿ ನಡೆಸಿದ್ದಾರೆ.

ಯುವ ವಿಜ್ಞಾನಿ ಅಶುತೋಷ್ ಸಿಂಗ್ ಅವರು ತನ್ನ ಕ್ವಿಡ್ ಕಾರ್‌ನಲ್ಲಿ ಚಲಿಸುತ್ತಿದ್ದಾಗ ಹಿಂಬಾಲಿಸಿಕೊಂಡ ಬಂದ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳಿಂದ ಎಸ್ಕೇಪ್ ಆದ ಅಶುತೋಷ್ ಸಿಂಗ್ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಮತ್ತೊಂದೆಡೆ ಈ ಘಟನೆಯ ಬಗ್ಗೆ ದೂರು ನೀಡಲು ಮುಂದಾದಾಗ ಪೊಲೀಸರು ಕೂಡ ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಕೇಳಿಬಂದಿದೆ. 

ಈ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಘಟನೆಯ ಮಾಹಿತಿಯನ್ನು ಅಶುತೋಷ್ ಸಿಂಗ್ ಹಂಚಿಕೊಂಡಿದ್ದಾರೆ. ಬಳಿಕ ಎಚ್ಚೆತ್ತ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.