ನಟಿ ಮೀನಾಗೆ ಮಗಳಿದ್ದರು ಪರವಾಗಿಲ್ಲ; 'ಓಕೆ ಎಂದರೆ ತಕ್ಷಣ ಮದುವೆಯಾಗುತ್ತೇನೆ ಎಂದ ಯೂಟ್ಯೂಬರ್'

 | 
Hsu

2009ರಲ್ಲಿ ವಿದ್ಯಾಸಾಗರ್ ಎಂಬ ಉದ್ಯಮಿಯನ್ನು ನಟಿ ಮೀನಾ ಮದುವೆಯಾಗಿದ್ದರು. ಈ ಜೋಡಿಗೆ ನೈನಿಕಾ ಎಂಬ ಮಗಳಿದ್ದಾಳೆ. 2022 ರಲ್ಲಿ ವಿದ್ಯಾಸಾಗರ್ ಅವರು ಅನಾರೋಗ್ಯದಿಂದ ಸಾವನ್ನಪ್ಪಿದರು. ಇದರಿಂದಾಗಿ ಮೀನಾ ತಮ್ಮ ಮಗಳೊಂದಿಗೆ ಒಂಟಿಯಾಗಿ ಜೀವನ ನಡೆಸಬೇಕಾಯಿತು.  

ಕನ್ನಡ, ತೆಲುಗು, ತಮಿಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಮೀನಾ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. 1982 ರಲ್ಲಿ ಬಾಲನಟಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು, 1990ರಲ್ಲಿ ನವಯುಗಂ ಎಂಬ ತೆಲುಗು ಸಿನಿಮಾ ಮೂಲಕ ನಾಯಕಿಯಾಗಿ ಹೊರಹೊಮ್ಮಿದರು.

1994 ರಲ್ಲಿ ಪುಟ್ನಂಜ ಸಿನಿಮಾದ ಮೂಲಕ ಮೀನಾ ಚಂದನವನಕ್ಕೆ ಪ್ರವೇಶ ಮಾಡಿದರು. ತಮ್ಮ ಚೊಚ್ಚಲ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದರು. ಸಿಂಹಾದ್ರಿಯ ಸಿಂಹ, ಸ್ವಾತಿ ಮುತ್ತು, ಮೈ ಆಟೋಗ್ರಾಫ್‌, ಸೇರಿದಂತೆ ಹಲವಾರು ಸೂಪರ್‌ ಹಿಟ್‌ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಧ್ಯ ತಮ್ಮ ಎರಡನೇ ಮದುವೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ಅವರು, ಈ ರೀತಿಯ ಸುಳ್ಳು ಸುದ್ದಿಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ನೋವಾಗಿದೆ. ಮಾಧ್ಯಮಗಳು ಸಹ ಈ ರೀತಿಯ ಸುದ್ದಿಗಳನ್ನು ಪರಿಶೀಲಿಸಿ ಪ್ರಕಟಿಸುವುದು ಉತ್ತಮ ಅಂತ ತಾವು ಸದ್ಯಕ್ಕೆ ಮದುವೆಯಾಗುತ್ತಿಲ್ಲ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಆದರೆ ಇತ್ತೀಚಿಗೆ ಯುಟ್ಯೂಬರ್ ಒಬ್ಬ ನಾನು ಮೀನಾ ಅವರನ್ನು ಮದುವೆ ಆಗೋದಾಗಿ ನಾಲಿಗೆ ಹರಿ ಬಿಟ್ಟಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.