'ಈ ಊರಿನ ಯ.ವತಿಯರು ಮದುವೆ ಮುನ್ನ ಗರ್ಭಿಯಾಗಬೇಕು' ಇದು ಪರಂಪರೆಯ ನಿಯಮವಾಗಿದೆ

 | 
Gbhj
ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟ. ಮದುವೆ ಸಂಪ್ರದಾಯಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತವೆ. ಆದ್ರೆ ಈ ಪ್ರದೇಶದ ಮಹಿಳೆಯರು ಮದುವೆಗೂ ಮುಂಚೆಯೇ ತಾಯಿ ಆಗುತ್ತಾರೆ. ಹೌದು ಅಚ್ಚರಿ ಆದರೂ ಸತ್ಯವಿದು.ಮದುವೆಗೆ ಮುಂಚೆಯೇ ಜೊತೆಯಾಗಿರೋ ಟ್ರೆಂಡ್ ಮಹಾನಗರಗಳಲ್ಲಿ ಶುರುವಾಗಿದೆ. ಇದನ್ನ ಲಿವ್ ಇನ್ ರಿಲೇಶನ್​ಶಿಪ್ ಎಂದು ಕರೆಯಲಾಗುತ್ತದೆ. 
ಗ್ರಾಮೀಣ ಪ್ರದೇಶಗಳಲ್ಲಿಯೂ ಲಿವ್-ಇನ್ ಸಂಬಂಧಗಳು ಕಂಡು ಬರುತ್ತಿರುತ್ತವೆ. ಆದರಲ್ಲಿಯೂ ಬುಡಕಟ್ಟು ಸಮುದಾಯವೊಂದರಲ್ಲಿ ಲಿವ್-ಇನ್ ಸಂಬಂಧವನ್ನುಎಲ್ಲರೂ ಒಪ್ಪುತ್ತಾರಂತೆ. ಈ ಬುಡಕಟ್ಟು ಸಮುದಾಯದಲ್ಲಿ ಲಿವ್ ಇನ್ ಸಂಬಂಧಗಳು ತುಂಬಾ ಸಾಮಾನ್ಯ. ಈ ಸಂಬಂಧದ ಮೂಲಕ ತಮ್ಮ ಸಂಗಾತಿಯನ್ನು ಇಲ್ಲಿಯ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಗರಾಸಿಯಾ ಬುಡಕಟ್ಟುಗಳ ಜನರು ರಾಜಸ್ಥಾನ ಮತ್ತು ಗುಜರಾತ್‌ನ ಹೆಚ್ಚಿನ ಭಾಗಗಳಲ್ಲಿ ವಾಸಿಸುತ್ತಾರೆ. 
ಈ ಬುಡಕಟ್ಟಿನ ಹೆಚ್ಚಿನ ಮಹಿಳೆಯರು ಮದುವೆಗೆ ಮುಂಚೆಯೇ ತಾಯಂದಿರಾಗುತ್ತಾರೆ. ನಂತರ ಆ ಸಂಗಾತಿಯೊಂದಿಗೆ ಮದುವೆಯಾಗಿ ಸಾಂಸರಿಕ ಜೀವನ ನಡೆಸುತ್ತಾರೆ. ಈ ಬುಡಕಟ್ಟಿನಲ್ಲಿಯ ಪುರುಷರು ಮತ್ತು ಮಹಿಳೆಯರು ಮದುವೆಗೂ ಮುನ್ನವೇ ಜೊತೆಯಾಗಿ ವಾಸಿಸಲು ಆರಂಭಿಸುತ್ತಾರೆ. ಆದ್ದರಿಂದ ಮದುವೆಗೂ ಮೊದಲೇ ತಾಯಿ ಆಗುತ್ತಾರೆ. ಈ ಬುಡಕಟ್ಟಿನಲ್ಲಿ. 
ಮಹಿಳೆಯರಿಗೆ ಪುರುಷ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಈ ಸಮುದಾಯದಲ್ಲಿ ಮದುವೆಗಾಗಿಯೇ ಎರಡು ದಿನದ ಜಾತ್ರೆಯನ್ನು ಆಚರಿಸಲಾಗುತ್ತದೆ. ಇಲ್ಲಿ ಸಂಗಾತಿ ಆಯ್ಕೆಗಾಗಿ ಮೇಳವನ್ನು ನಡೆಸಲಾಗುತ್ತದೆ. ಈ ಮೇಳದಲ್ಲಿ ಭಾಗಿಯಾಗಲಿ ಹೆಚ್ಚಿನ ಸಂಖ್ಯೆಯ ಯುವಕ ಮತ್ತು ಯುವತಿಯರು ಸೇರುತ್ತಾರೆ. ಇಲ್ಲಿ ಯುವತಿಗೆ ಯಾರಾದ್ರು ಇಷ್ಟವಾದ್ರೆ ಆತನೊಂದಿಗೆ ವಾಸಿಸಲು ಆರಂಭಿಸುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.