ಮಾಜಿ ರಾಜಾಹುಲಿಯ ಇಬ್ಬರು ಮಕ್ಕಳ ಸಾಧನೆ ಕೇಳಿದರೆ ತಲೆಕೆಡುತ್ತೆ

 | 
Jdjd

ಕರ್ನಾಟಕದ ಮಟ್ಟಿಗೆ ಮತ್ತು ಬಿಜೆಪಿಯ ಮಟ್ಟಿಗೆ ಬಿ.ಎಸ್‌.ಯಡಿಯೂರಪ್ಪ ಅವರದ್ದು ಮಾಸ್‌ ನಾಯಕತ್ವ.ಹೌದು ಕರ್ನಾಟಕದ ಮಟ್ಟಿಗೆ ಬಿ.ಎಸ್.ಯಡಿಯೂರಪ್ಪ‌ ಅವರು ಬಿಜೆಪಿಯ ಮಾಸ್‌ ಲೀಡರ್. ಕರ್ನಾಟಕದಲ್ಲಿ ಬಿಜೆಪಿಯ ಮಟ್ಟಿಗೆ ದಶಕಗಳಿಂದ ಏಕಮೇವ ನಾಯಕರಾಗಿ ಕಾಣಿಸಿಕೊಂಡವರು ಬಿ.ಎಸ್‌. ಯಡಿಯೂರಪ್ಪ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಎಂಬ ಕೀರ್ತಿಗೆ ಭಾಜನರಾದವರಲ್ಲಿ ಇವರೂ ಒಬ್ಬರು.

ಕಾಲೇಜು ದಿನಗಳಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿದ್ದ ಯಡಿಯೂರಪ್ಪನವರ ಸಾರ್ವಜನಿಕ ಸೇವೆಯು 1970 ರಲ್ಲಿ ಸಂಘದ ಶಿಕಾರಿಪುರ ಘಟಕದ ಕಾರ್ಯದರ್ಶಿ ಆಗಿ ನೇಮಕಗೊಂಡಾಗ ಪ್ರಾರಂಭವಾಯಿತು. ಮುಂದೆ, 1972 ರಲ್ಲಿ ಅವರು ಶಿಕಾರಿಪುರ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದರು. ಅದೇ ರೀತಿ ಜನಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿಯೂ ನೇಮಕಗೊಂಡರು. 

1975ರಲ್ಲಿ ಶಿಕಾರಿಪುರ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತದಲ್ಲಿ ತುರ್ತುಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿ ಬಳ್ಳಾರಿ ಮತ್ತು ಶಿವಮೊಗ್ಗ ಜೈಲುಗಳಲ್ಲಿದ್ದವರು.
ಹೀಗೆ, ರಾಜಕೀಯವಾಗಿ ಹಂತ ಹಂತವಾಗಿ ಹೋರಾಟದ ಹಾದಿಯಲ್ಲಿ ಮುಂದುವರಿದು ನಾಲ್ಕು ಸಲ ಮುಖ್ಯಮಂತ್ರಿ ಗಾದಿ ಏರಿದ ಅವರು, ಪಕ್ಷವನ್ನು ಆಡಳಿತ ಚಾವಡಿಗೆ ತಂದು ನಿಲ್ಲಿಸಿದವರು ಎಂಬ ಕೀರ್ತಿಗೆ ಭಾಜನರು. 

ಪಕ್ಷವನ್ನು 2008ರಲ್ಲಿ ಮೊದಲ ಸಲ ಅಧಿಕಾರ ಗದ್ದುಗೆಯ ಮೇಲೆ ಕೂರಿಸಿದವರು. ಅಷ್ಟೇ ಅಲ್ಲ, ಬಿಜೆಪಿ ಆಳ್ವಿಕೆಯಲ್ಲಿ ಮೊದಲ ಮುಖ್ಯಮಂತ್ರಿ ಎನಿಸಿಕೊಂಡರು. ಮುಂದೆ, 2019 ಮತ್ತು 2021ರಲ್ಲೂ ಮುಖ್ಯಮಂತ್ರಿ ಆದರೂ ಪೂರ್ಣ ಅವಧಿ ಇರಲಿಲ್ಲ. ಶಿಕಾರಿಪುರ ಕ್ಷೇತ್ರದಿಂದ ಈವರೆಗೆ 8 ಸಲ ವಿಧಾನಸಭೆಗೆ ಹಾಗೂ ಒಮ್ಮೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸಂಸತ್​​ಗೆ ಆಯ್ಕೆಯಾದವರು. ಆದರೆ, 1999ನೇ ಇಸವಿಯಲ್ಲಿ ಮಾತ್ರ ಸೋಲು ಕಂಡಿದ್ದರು. 

ಆಗ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿತ್ತು. ಕರ್ನಾಟಕದ ಮಟ್ಟಿಗೆ ಮಾಸ್‌ ಲೀಡರ್‌ ಮತ್ತು ಬಿಜೆಪಿಯ ಬಹಳ ಜನಪ್ರಿಯ ನಾಯಕರು. ಲಿಂಗಾಯಿತರ ಪ್ರಭಾವಿ ನಾಯಕರಾಗಿದ್ದು, ಪಕ್ಷದ ಮೇಲೂ ಹಿಡಿತ ಸಾಧಿಸಿದವರು. ಶಿಕಾರಿಪುರ ಕ್ಷೇತ್ರದಲ್ಲಿ ಅವರದ್ದು ಪಕ್ಷವನ್ನೂ ಮೀರಿದ ವೈಯಕ್ತಿಕ ವರ್ಚಸ್ಸು. ಈ ನಡುವೆ ಅವರು ಮುಖ್ಯಮಂತ್ರಿ ಆಗಿದ್ದಾಗ, ಅಕ್ರಮ ಗಣಿಗಾರಿಕೆ ವಿಚಾರ ಮುನ್ನೆಲೆಗೆ ಬಂತು.

ಈ ಅವಧಿಯಲ್ಲಿ ಅಂದರೆ, 2011ರಲ್ಲಿ ಜಾರಿಯಾದ ಐದು ಪ್ರಕರಣಗಳಲ್ಲಿ ಯಡಿಯೂರಪ್ಪ ಅವರು ಜಮೀನು ಅಕ್ರಮ ಡಿ-ನೋಟಿಫಿಕೇಶನ್‌ಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಅವಧಿಯಲ್ಲಿ ಅವರು ಭ್ರಷ್ಟಾಚಾರ ಕೇಸ್‌ನಲ್ಲಿ ಅಪರಾಧಿಯಾಗಿ ಜೈಲುವಾಸ ಅನುಭವಿಸಿದರು. ಮುಂದೆ, 2015 ರಲ್ಲಿ ಕರ್ನಾಟಕ ಹೈಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿತು, ಆ ಮೂಲಕ ಅವರ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಿತು.

ಆದಾಗ್ಯೂ, ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲು ಮಾಜಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಅನುಮತಿಯನ್ನು ಹೈಕೋರ್ಟ್ ರದ್ದುಗೊಳಿಸಿದ ನಂತರ, ವಿಶೇಷ ಲೋಕಾಯುಕ್ತ ನ್ಯಾಯಾಲಯವು ಅವರ ವಿರುದ್ಧದ ಇತರ ನಾಲ್ಕು ಎಫ್‌ಐಆರ್‌ಗಳನ್ನು ರದ್ದುಗೊಳಿಸಿತು. ಲೋಕಾಯುಕ್ತ ಕೇಸ್‌ ವಿಚಾರದಲ್ಲಿ ಅನಿವಾರ್ಯವಾಗಿ ಬಿಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಈ ವಿಚಾರವಾಗಿ ಕೇಂದ್ರ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಬಿಎಸ್‌ವೈ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂಬ ಒತ್ತಡ ಹೆಚ್ಚಾಗಿತ್ತು. ಇದನ್ನು ಅರಿತ ಅವರು 2012 ನವೆಂಬರ್‌ 30ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದರು. ಬಳಿಕ 2011ರ ಏಪ್ರಿಲ್‌ನಲ್ಲಿ ನೋಂದಣಿಯಾಗಿದ್ದ ಕರ್ನಾಟಕ ಜನತಾ ಪಕ್ಷವನ್ನು ಬೆಳೆಸಲು ಮುಂದಾದರು. ಬಿಎಸ್‌ವೈ ಅಸಾಧ್ಯ ಹೋರಾಟಗಾರ.

ಬಿ. ಎಸ್. ಯಡಿಯೂರಪ್ಪ 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದರು. ಪಕ್ಷ ಸಂಘಟನೆಯ ವಿಚಾರದಲ್ಲೂ ಚತುರ ರಾಜಕಾರಣಿ. ಅವರ ಈ ಅದಮ್ಯ ವಿಶ್ವಾಸ, ಚುತರತೆ ಮತ್ತು ಅಸಾಧ್ಯ ಇಚ್ಛಾ ಶಕ್ತಿಯ ಕಾರಣವೇ ಅವರು ಪಕ್ಷಕ್ಕೆ ಒಂದು ಪಾಠ ಕಲಿಸಿಯೇ ಬಿಡುತ್ತೇನೆಂಬ ಹುಮ್ಮಸ್ಸು ತೋರಿಸಿತು. 

ಫಲಿತಾಂಶ ಎಲ್ಲರಿಗೂ ಗೊತ್ತೇ ಇರುವಂಥದ್ದು. ಪಕ್ಷ ಮತ್ತು ಬಿಎಸ್‌ವೈ ಇಬ್ಬರಿಗೂ ಪಾಠವಾಯಿತು. ಅವರು ಮತ್ತೆ ಬಿಜೆಪಿ ಸೇರಿದರು. 2019ರಲ್ಲಿ ಮತ್ತೆ ಪಕ್ಷವನ್ನು ಅಧಿಕಾರ ಸ್ಥಾನಕ್ಕೆ ತಂದು ಕೂರಿಸಿದವರು. ಈ ಸಲದ ಚುನಾವಣೆಯಲ್ಲಿ ಅವರು ವಯಸ್ಸಿನ ಕಾರಣ ಮುಂದಿಟ್ಟು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.

ಪುತ್ರ ಬಿ.ವೈ. ವಿಜಯೇಂದ್ರ ಹಾಗೂ ರಾಘವೇಂದ್ರ ಅವರನ್ನು ಬಿಜೆಪಿ ಪಕ್ಷದಲ್ಲಿಯೇ ಕಣಕ್ಕಿಳಿಸಲು ಬಯಸಿದ್ದರು. ಅದರಂತೆ ಬಿವೈ ರಾಘವೇಂದ್ರ ಅವರು ಸಂಸದರಾಗಿದ್ದು, ಭಾರತೀಯ ಜನತಾ ಪಕ್ಷಕ್ಕೆ ಸೇರಿದವರು. 2019 ರಲ್ಲಿ, ಅವರು ಕರ್ನಾಟಕದ ಶಿವಮೊಗ್ಗವನ್ನು ಪ್ರತಿನಿಧಿಸುವ 17 ನೇ ಲೋಕಸಭೆಯಲ್ಲಿ ಸಂಸದರಾಗಿ ಆಯ್ಕೆಯಾದರು. 

ಅಲ್ಲದೆ, ಅವರು 2018 ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ 16 ನೇ ಲೋಕಸಭೆಯಲ್ಲಿ ಉಪಚುನಾವಣೆ ಮೂಲಕ ಸಂಸದರಾಗಿ ಆಯ್ಕೆಯಾದರು ಮತ್ತು 2009 ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ 15 ನೇ ಲೋಕಸಭೆಯಲ್ಲಿ ಸಂಸದರಾಗಿ ಆಯ್ಕೆಯಾದರು. ಜೊತೆಗೆ, ಅವರು ಸದಸ್ಯರಾಗಿ ಆಯ್ಕೆಯಾದರು. ಇನ್ನು ವಿಜಯೇಂದ್ರ ಅವರು ಹೈಕಮಾಂಡ್‌ ಜೊತೆಗೂ ಉತ್ತಮ ಭಾಂಧವ್ಯವನ್ನು ಹೊಂದಿದ್ದಾರೆ. 

ಕಳೆದ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಜಯೇಂದ್ರ ಬೆನ್ನು ತಟ್ಟಿದ ಫೋಟೋ ಈ ಸಂದೇಶವನ್ನು ರವಾನೆ ಮಾಡಿತ್ತು. ಇದು ಕೂಡಾ ವಿಜಯೇಂದ್ರ ಪಾಲಿಗೆ ಸಕರಾತ್ಮಕವಾಗಿ ಪರಿಣಮಿಸಬಹುದು. ಜೊತೆಗೆ ಉತ್ತಮ ಮಾತುಗಾರಿಕೆಯೂ ವಿಜಯೇಂದ್ರ ಅವರಲ್ಲಿದೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಬಿಜೆಪಿಯ ಬಹುತೇಕ ಶಾಸಕರು ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಕ್ಕೆ ಅಭ್ಯಂತರ ಇಲ್ಲದಂತಹ ವಾತಾವರಣ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.