'ಈ ಬಾರಿ ಗೆಲ್ಲುವುದು ಕಾಂಗ್ರೇಸ್; ಯಶ್ ಖಡಕ್ ಮಾತು

 | 
Hy

ರಾಕಿಂಗ್​ ಸ್ಟಾರ್​ ಯಶ್​ ಅವರು ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದಾರೆ. ಎಲ್ಲರೂ ಓಟ್​ ಮಾಡಲೇಬೇಕು. ಅದು ನಮ್ಮ ಕರ್ತವ್ಯ ಮತ್ತು ಹಕ್ಕು. ಮತದಾನಕ್ಕೆ ಅವಕಾಶ ಸಿಕ್ಕ ನಂತರ ನಿಮ್ಮ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕು. ಎಲ್ಲವನ್ನೂ ಗಮನಿಸಿ ಕಲಿಯಬೇಕು. 

ಓಟಿಂಗ್​ ಜಾಸ್ತಿ ಆದರೆ ಜಾಗೃತಿ ಜಾಸ್ತಿ ಆಗಿದೆ ಅಂತ ಅರ್ಥ. ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇರಬೇಕು. ಕೆಲವೊಮ್ಮೆ ಸ್ವಲ್ಪ ಜನರು ಮಾತ್ರ ಮತದಾನ ಮಾಡಿರುತ್ತಾರೆ. ಮಿಕ್ಕಿದವರ ಅಭಿಪ್ರಾಯ ಏನಿರುತ್ತೆ ಎಂಬುದು ನಮಗೆ ಗೊತ್ತಾಗುವುದೇ ಇಲ್ಲ. ಸಂಜೆ ವೇಳೆಗೆ ಎಷ್ಟು ಮತದಾನ  ಆಗುತ್ತೆ ಎಂಬುದು ನೋಡಬೇಕು.

ಸರ್ಕಾರ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಜನರಿಗೆ ಅವರ ಕೆಲಸವನ್ನು ಮಾಡಲು ಬಿಡಬೇಕು. ಸರ್ಕಾರದ ಇಷ್ಟು ದಿನಗಳ ಕೆಲಸಗಳ ಪೈಕಿ ಕೆಲವು ವಿಭಾಗಗಳಲ್ಲಿ ನನಗೆ ತೃಪ್ತಿ ಇರಬಹುದು. ಕೆಲವು ವಿಭಾಗಗಳಲ್ಲಿ ತೃಪ್ತಿ ಇಲ್ಲ. ಭಾರತಕ್ಕೆ ಈಗ ಅವಕಾಶ ಇದೆ. ಯುವಕರ ಸಂಖ್ಯೆ ನೋಡಿದರೆ ಇದು ಒಳ್ಳೆಯ ಸಮಯ ಎನಿಸುತ್ತದೆ. ಇದನ್ನು ಉಪಯೋಗಿಸಿಕೊಂಡು ಮುಂದಕ್ಕೆ ಹೋಗಬೇಕು ಎಂದು ಯಶ್​ ಹೇಳಿದ್ದಾರೆ.

ಹೊಸಕೆರೆಹಳ್ಳಿ ಸರ್ಕಾರಿ ಶಾಲೆ ಮತಗಟ್ಟೆ ನಂ 1 ರಲ್ಲಿ ಕೆಜಿಎಫ್ ಸ್ಟಾರ್ ಯಶ್ ಮತಚಲಾವಣೆ ಮಾಡಿದ್ದಾರೆ. ವೋಟ್ ಮಾಡಿದ ನಂತರ ಮಾತನಾಡಿದ ಯಶ್ ಅವರು, ಮತ ಹಾಕೋದು ನಮ್ಮೆಲ್ಲರ ಕರ್ತವ್ಯ. ಅದು ನಮ್ಮ ಹಕ್ಕು.  ದೇಶಕ್ಕಾಗಿ ಮತ ಚಲಾವಣೆ ಮಾಡಬೇಕು. ನಿಮ್ಮ ನಿರ್ಧಾರಗಳಿಂದ ಕಲಿಯೋದಕ್ಕೆ ಅವಕಾಶ ಸಿಗಲಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.