ಜೀ ವಾವಧಿ ಶಿಕ್ಷೆ ಇದ್ದವರಿಗೆ ಜೈಲಲ್ಲಿ ತುಂಬಾ ಕಷ್ಟ ಜೀವನ; ನಟ ಹರೀಶ್ ರಾಯ್

 | 
D

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಪಾಲಾಗಿದ್ದಾರೆ. ಈ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ಹರೀಶ್‌ ರಾಯ್‌ ಮಾತನಾಡಿದ್ದು, ನಟ ದರ್ಶನ್‌ ತಮಗೆ ಮಾಡಿದ ಸಹಾಯವನ್ನು ನೆನೆದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಹರೀಶ್‌ ರಾಯ್‌, ತುಂಬಾ ಜನ ದರ್ಶನ್‌ ಅವರನ್ನು ನಂಬಿಕೊಂಡು ಬದುಕಿದ್ದೇವೆ. 

ತುಂಬಾ ಕಲಾವಿದರು, ಸಿನಿಮಾದಲ್ಲಿ ಬೇರೆ ಕೆಲಸ ಮಾಡುವವರು, ನಿರ್ದೇಶಕರು ಹೀಗೆ ತುಂಬಾ ಜನ ನಂಬಿಕೊಂಡಿದ್ದೇವೆ. ಈ ಎಷ್ಟು ಜನರ ದುಡಿಮೆ ಹಾಳಾಯಿತು. ಎಷ್ಟು ಜನರ ಬದುಕು ಹಾಳಾಯಿತು ಎಂದರು.ಈ ಘಟನೆಯನ್ನು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಒಂಥರಾ ಮಂಕು ಬಡಿದ ಹಾಗಾಗಿದೆ. ನಮ್ಮ ದರ್ಶನ್‌ಗೆ ಹೀಗಾಯ್ತು ಅಂತಾ ಏನೋ ಒಂದು ಕಳೆದುಕೊಂಡ ಹಾಗೆ ಆಗಿದೆ. 

ನನ್ನ ಮನೆಯಲ್ಲಿ ಮಾತ್ರವಲ್ಲ. ಅವರ ಅಭಿಮಾನಿಗಳ ಮನೆಯಲ್ಲೂ ಇದೇ ಸ್ಥಿತಿ ಇದೆ. ನಮ್ಮಂತ ನಟರ ಜೊತೆ ಮೊದಲು ನಿಲ್ಲುವುದು ದರ್ಶನ್‌. ಅವರು ನಮಗೆ ಸುಲಭವಾಗಿ ಸಿಗುತ್ತಾರೆ.ಎಲ್ಲೇ ಸಿಕ್ಕರೂ ಕಂಡು ಮಾತನಾಡಿಸಿ ಏನಾದರೂ ಸಮಸ್ಯೆ ಇದೆಯಾ ಎಂದು ವಿಚಾರಿಸುತ್ತಾರೆ. ಬೇರೆಯವರಿಂದಲೂ ಸಹ ತಿಳಿದುಕೊಳ್ಳುತ್ತಾರೆ. ಹೀಗೆ ಅನೇಕರಿಗೆ ಸಹಾಯ ಮಾಡಿದ್ದಾರೆ. 

ಆದರೆ ಅವರು ಮಾಡಿರುವ ಸಹಾಯ ಅವರು ಎಂದೂ ಹೇಳಿಕೊಳ್ಳುವುದಿಲ್ಲ. ದರ್ಶನ್‌ಗೆ ಸಹಾಯ ಮಾಡಿ ಹೆಸರು ಮಾಡಬೇಕೆನ್ನುವುದಿಲ್ಲ ಎಂದು ದರ್ಶನ್‌ ದೊಡ್ಡ ಗುಣವನ್ನು ನೆನಪಿಸಿಕೊಂಡರು.ನಾನು ಇಂದು ಧೈರ್ಯವಾಗಿದ್ದೇನೆ ಎಂದರೆ ಅದಕ್ಕೆ ಯಶ್‌, ದರ್ಶನ್‌ ಕಾರಣ. ಯಶ್‌ ಕೋಟಿ ಖರ್ಚಾದರೂ ನಾನು ನಿಮ್ಮನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದರು. ಆ ಕ್ಷಣದಿಂದಲೇ ನಾನು ಗೆದ್ದಂತೆ ಆಗಿತ್ತು. ದರ್ಶನ್‌ ಕೂಡ ಅದೇ ದಿನ ಹುಡುಗರ ಜೊತೆಗೆ ಹಣವನ್ನು ಕಳುಹಿಸಿದ್ದರು. ಮಾರನೇ ದಿನ ಮತ್ತೆ ಎಲ್ಲರ ಹತ್ತರ ಮಾತನಾಡಿ ದೊಡ್ಡ ಬ್ಯಾಗಿನಲ್ಲಿ ಹಣ ಕಳುಹಿಸಿಕೊಟ್ಟಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಹರೀಶ್‌ ರಾಯ್‌, ತುಂಬಾ ಜನ ದರ್ಶನ್‌ ಅವರನ್ನು ನಂಬಿಕೊಂಡು ಬದುಕಿದ್ದೇವೆ. ತುಂಬಾ ಕಲಾವಿದರು, ಸಿನಿಮಾದಲ್ಲಿ ಬೇರೆ ಕೆಲಸ ಮಾಡುವವರು, ನಿರ್ದೇಶಕರು ಹೀಗೆ ತುಂಬಾ ಜನ ನಂಬಿಕೊಂಡಿದ್ದೇವೆ. ಈ ಎಷ್ಟು ಜನರ ದುಡಿಮೆ ಹಾಳಾಯಿತು. ಎಷ್ಟು ಜನರ ಬದುಕು ಹಾಳಾಯಿತು ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.