ಮದುವೆಯಾಗಿ ವರ್ಷ ಕಳೆಯಿತು ಇನ್ನೂ ಸಿಹಿಸುದ್ದಿ ಕೊಟ್ಟಿಲ್ಲ, ಗಂಡನ ಮುಂದೆಯೇ ಮೌನ ಮುರಿದ ಸಿರಿ
Jul 4, 2025, 16:04 IST
|

ಬೇಗ ಮದುವೆ ಆದ್ರೆ ಯಾಕಿಷ್ಟು ಬೇಗ? ಲೇಟ್ ಆಗಿ ಮದುವೆ ಆದರೆ, ಯಾಕಿನ್ನು ಮದುವೆ ಆಗಲಿಲ್ಲ? ಇಂತಹ ಪ್ರಶ್ನೆಗಳು ಸೆಲೆಬ್ರೆಟಿಗಳಿಗೆ ಸಖತ್ ಕಾಮನ್. ಅಂದಹಾಗೆ ಮದುವೆಗೆ ಮುಂಚೆ ನಟಿ ಸಿರಿ ಅವರಿಗೂ ಈ ಪ್ರಶ್ನೆಗಳೆಲ್ಲಾ ಎದುರಾಗಿದ್ದವು. ಈ ಬಗ್ಗೆ ನಟಿ ಸಿರಿ ಇದೀಗ ರಿಯಾಕ್ಟ್ ಮಾಡಿದ್ದಾರೆ. ಬೇರೆಯವರ ಲೈಫ್ ಅನ್ನು ನಾನು ಬಂದು ಲೀಡ್ ಮಾಡೋಕೆ ಆಗೋದಿಲ್ಲ. ನಿಮ್ಮ ಕಷ್ಟಗಳೇನು, ನಿಮ್ಮ ಸುಖಗಳೇನು, ನಿಮ್ಮ ಇಷ್ಟಗಳೇನು ಅನ್ನೋದು ನಿಮಗೆ ಮಾತ್ರ ಗೊತ್ತಿರುತ್ತದೆ. ಈಗ ನಾನು ಯಾರಿಗೋ ಏನೋ ಹೇಳ್ತೀನಿ ಅಂತ ಅವರು ಆ ಹೆಜ್ಜೆ ಇಡಲು ಆಗುವುದಿಲ್ಲ. ಹೇಳುವವರು ಸಾವಿರ ಹೇಳ್ತಾರೆ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಿರಿ ಹೇಳಿಕೊಂಡಿದ್ದಾರೆ.
ಮದುವೆ ಯಾಕೆ ಆಗಲಿಲ್ಲ? ಆಗಬಹುದಿತ್ತು ಅಲ್ವಾ? ಅಂತಾರೆ. ನನಗೆ ಯಾವಾಗ ಇಷ್ಟ ಆಗುತ್ತದೆಯೋ ಯಾರು ನನಗೆ ಸರಿಯಾದ ವ್ಯಕ್ತಿ ಅಂತೆನಿಸಿದಾಗ ಆಗೋದು ಉತ್ತಮ. ಈಗ ನೋಡಿ ನನ್ನ ಗಂಡ ನನಗೆ ಸಿಗದೇ ಇದ್ದಿದ್ರೆ ನಾನು ಮದುವೆನೇ ಆಗದೇ ಇರಬಹುದಾಗಿತ್ತೋ ಏನೋ ಎಂದಿದ್ದಾರೆ ನಟಿ ಸಿರಿ ಪ್ರಭಾಕರ್.ಈಗ ನನಗೆ ಒಳ್ಳೆಯ ಕಂಪಾನಿಯನ್ ಸಿಕ್ಕಿದ್ದಾರೆ ನಾವು ಮದುವೆಯಾದೆವು. ಲೇಟ್ ಆಗಲಿ ಅಥವಾ ಬೇಗ ಆಗಲಿ. ಮದುವೆ ಮಾತ್ರವಲ್ಲ, ಲೈಫ್‌ನಲ್ಲಿ ಏನೇ ಅಗಲಿ ನೀಟಾಗಿ ಪ್ಲ್ಯಾನ್ ಮಾಡಿಕೊಂಡು, ನಿಮಗೆ ಇಷ್ಟ ಆದಮೇಲೆ ಹೆಜ್ಜೆ ಇಡಿ. ಯಾರೋ ಏನೋ ಹೇಳ್ತಾರೆ ಅಂತ, ನಮ್ಮ ಕಷ್ಟವನ್ನೆಲ್ಲಾ ಅವರು ತೆಗೆದುಕೊಳ್ಳಲು ಆಗೋದಿಲ್ಲ. ಯಾರೂ ಏನೇ ಮಾತನಾಡಿದ್ರು ನಾನು ಅದನ್ನು ನಿರ್ಲಕ್ಷಿಸುತ್ತೇನೆ ಎಂದರು ಸಿರಿ ಪ್ರಭಾಕರ್
2024ರ ಜೂನ್‌ನಲ್ಲಿ ಸಿರಿ, ನಟ ಮತ್ತು ಉದ್ಯಮಿ ಪ್ರಭಾಕರ್ ಬೋರೇಗೌಡರನ್ನು ಸರಳವಾಗಿ ಮದುವೆಯಾದರು. ಬದುಕು ಧಾರಾವಾಹಿಯಲ್ಲಿ ಸಿರಿ ಜೊತೆಗೆ ಪ್ರಭಾಕರ್ ಅವರು ನಟಿಸಿದ್ದರು. ವರ್ಷಗಳ ನಂತರ ಇದೀಗ ಸಿರಿ ಸಿನಿಮಾಗೆ ಕಂಬ್ಯಾಕ್ ಮಾಡಿದ್ದಾರೆ. ನಟ ಕೋಮಲ್ ಕುಮಾರ್ ನಟನೆಯ ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,7 Jul 2025