ತಂದೆ ತಾಯಿ ಜೊತೆ ಇದ್ರೆ ಹೇಸಿಗೆ ಅಂತೆ, ಬಿಗ್ ಬಾಸ್ ಗೆ ಗಂಡಾಂತರ ತಂದಿಟ್ಟ ಸ್ವಾಮೀಜಿ

 | 
B

ಬಿಗ್ ಬಾಸ್ ಮನೆಯಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಬಿಗ್ ಬಾಸ್ ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅಗಮಿಸಿದ್ದು, ನೂತನ ವರ್ಷದಲ್ಲಿ ಸ್ಪರ್ಧಿಗಳ ಭವಿಷ್ಯ ಹೇಗಿರಲಿದೆ ಎಂದು ಹೇಳಿದ್ದಾರೆ.ಹೊಸ ವರ್ಷದ ಹಿನ್ನೆಲೆ ಬಿಗ್ ಬಾಸ್ ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರ ಆಗಮನ ಆಗಿದೆ.  ಮನೆಯಲ್ಲಿ ಪೂಜೆ ಮಾಡಿದ ಶ್ರೀಗಳು ಸ್ಪರ್ಧಿಗಳಿಗೆ ಆಶೀವಾರ್ದ ನೀಡಿ, ಶುಭ ಹಾರೈಸಿದ್ರು. 


ಬಿಗ್ ಬಾಸ್​ ಸ್ಪರ್ಧಿಗಳ ಮುಂದಿನ ಭವಿಷ್ಯ ಹೇಗಿದೆ ಎಂದು ಗುರೂಜಿ ಹೇಳಿದ್ದಾರೆ. ಗುರೂಜಿ ಭವಿಷ್ಯ ಕೆಲವರಿಗೆ ಖುಷಿ ಕೊಟ್ರೆ ಇನ್ನು ಕೆಲವರ ಕಣ್ಣಲ್ಲಿ ನೀರು ತರಿಸಿದೆ.ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಬಿಗ್ ಬಾಸ್​ ಮನೆಗೆ ಬಂದಿದ್ದು, ಮನೆ ಮಂದಿ ಕೂಡ ಅವರನ್ನು ಖುಷಿಯಿಂದ, ಗೌರವದಿಂದ ಸ್ವಾಗತಿಸಿದ್ರು. ಒಬ್ಬೊಬ್ಬರಿಗೆ ಗುರೂಜಿ ಭವಿಷ್ಯ ನುಡಿದಿದ್ದಾರೆ.  

ವರ್ತೂರು ಸಂತೋಷ್ ಅವರ ತೊಡೆಯ ಮೇಲೆ ಟ್ಯಾಟೂ ಇದೆ ಅಲ್ವಾ. ಅದನ್ನು ಹಾಕಿಕೊಂಡ ಮೇಲೆ ಎಲ್ಲವೂ ಕೆಟ್ಟದಾಗುತ್ತಿದೆ ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದಾರೆ. ಹೌದು ಹೌದು ಸ್ವಾಮಿ ಎಂದು ವರ್ತೂರು ಹೇಳಿದ್ರು. ಅದನ್ನು ತೆಗೆಯಿರಿ, ಜೀವನದಲ್ಲಿ ಶಾಂತಿ, ನೆಮ್ಮದಿಯಿಂದ ಬದುಕಿ ಎಂದು ವರ್ತೂರು ಸಂತೋಷ್​ಗೆ ಸ್ವಾಮೀಜಿ ಹೇಳಿದ್ರು.

ನಮ್ರತಾ ಬಾಳಲ್ಲಿ ಹೊಸ ವ್ಯಕ್ತಿಯ ಪ್ರವೇಶವಾಗಲಿದೆ ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ರು. ಈ ವರ್ಷ ನಮ್ರತಾಗೆ ಶುಭವಾಗಲಿದೆ ಎಂಬ ಮಾತು ಕೇಳಿ ನಟಿ ಕೂಡ ನಾಚಿಕೊಂಡ್ರು.ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಭವಿಷ್ಯ ಕೇಳಿ ಡ್ರೋನ್ ಪ್ರತಾಪ್ ಕಣ್ಣೀರಾಗಿದ್ದಾರೆ. 3 ವರ್ಷಗಳ ಬಳಿಕ ಅಪ್ಪ-ಅಮ್ಮನನ್ನು ಬಿಗ್ ಬಾಸ್ ಮನೆಯಲ್ಲಿ ಭೇಟಿಯಾದ ಡ್ರೋನ್ ಪ್ರತಾಪ್​ಗೆ ಸ್ವಾಮೀಜಿ ಮಾತು ದೊಡ್ಡ ಆಘಾತಕ್ಕೆ ಕಾರಣವಾಗಿದೆ. 

ಇದನ್ನು ಹೇಳಲು ಬೇಜಾರಾಗ್ತಿದೆ ಆದ್ರೆ ನೀನು ಕುಟುಂಬದಿಂದ ದೂರ ಇರಬೇಕು ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದಾರೆ. ಕುಟುಂಬ ಜೀವನ ನಿನಗೆ ಸರಿ ಹೊಂದಲ್ಲ. ದೂರ ಇದ್ದು ಧೂಪ ಆಗ್ತಿಯೋ, ಹತ್ತಿರ ಇದ್ದು ಹೇಸಿಗೆ ಆಗ್ತಿಯೋ ನಿನಗೆ ಬಿಟ್ಟಿದ್ದು ಎಂದು ಸ್ವಾಮೀಜಿ ಹೇಳಿದ್ರು. ಇತ್ತೀಚಿಗಷ್ಟೇ ಕುಟುಂಬದ ಜೊತೆ ಒಂದಾಗಿದ್ದ ಡ್ರೋನ್ ಪ್ರತಾಪ್​, ಸ್ವಾಮೀಜಿ ಮಾತು ಕೇಳಿ ಕಣ್ಣೀರು ಹಾಕಿದ್ರು. ಆಘಾತಕ್ಕೂ ಒಳಗಾಗಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.