'ನನ್ನ ಅಶ್ಲೀಲ ದೃ ಶ್ಯ ನೋಡಿ ಮಾತನಾಡುವುದಲ್ಲ; ಈ ವಿಡಿಯೋ ನೋಡಿ ಆಮೇಲೆ ಹೇಳಿ

 | 
H

ಕನ್ನಡ ಕಿರುತೆರೆಯ ಹಲವು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಮಿಂಚಿರುವ ಚೆಲುವೆ ಜ್ಯೋತಿ ರೈ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋವೊಂದು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಈ ಬಗ್ಗೆ ಸೈಬರ್ ಕ್ರೈಂಗೆ ಜ್ಯೋತಿ ರೈ ದೂರು ಸಲ್ಲಿಸಿದ್ದರು. 

ಇದೀಗ ಬೇರೆ ವಿಡಿಯೋವೊಂದನ್ನು ಖುದ್ದು ಜ್ಯೋತಿ ರೈ ಅವರೇ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ, ತಾಕತ್ತಿದ್ದರೆ ಈ ವಿಡಿಯೋವನ್ನು ವೈರಲ್ ಮಾಡಿ ಎಂದು ಚಿಲ್ಲರೆಗಳಿಗೆ ಜ್ಯೋತಿ ರೈ ಸವಾಲು ಹಾಕಿದ್ದಾರೆ. ಹೌದು ತಮ್ಮ ಅಶ್ಲೀಲ ತುಣುಕುಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂಬುದನ್ನು ಕೇಳಿ ಮೂಲೆ ಸೇರುವ ಬದಲು ಒಳ್ಳೆಯ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಪದ್ಮಶ್ರೀ ಪುರಸ್ಕೃತ ಕಿನ್ನೇರ ಮೊಗುಲಯ್ಯ ಅವರಿಗೆ ನಟಿ ಜ್ಯೋತಿ ರೈ 50 ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದಾರೆ. ಇದೇ ವಿಡಿಯೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಜ್ಯೋತಿ ರೈ, ಈ ವಿಡಿಯೋವನ್ನ ವೈರಲ್ ಮಾಡಲು ತಾಕತ್ತು ಇದ್ಯಾ? ಇದು ಅಸಲಿ ವಿಡಿಯೋ ಎಂದು ಸವಾಲು ಎಸೆದಿದ್ದಾರೆ.

ಅಕ್ಷಯ ತೃತೀಯದ ಶುಭ ದಿನದಂದು, ಜನಪ್ರಿಯತೆ ಹೊರತಾಗಿಯೂ ಆರ್ಥಿಕ ಸವಾಲು ಎದುರಿಸುತ್ತಿರುವ ಶ್ರೀ ಪದ್ಮಶ್ರೀ ಕಿನ್ನೇರ ಮೊಗುಲಯ್ಯ ಅವರಿಗೆ 50,000 ರೂಪಾಯಿ ಆರ್ಥಿಕ ನೆರವು ನೀಡಿದ್ದೇನೆ. ನಿನ್ನೆಯಷ್ಟೇ ಅವರು ಪತ್ರಿಕಾಗೋಷ್ಠಿ ನಡೆಸಿದರು. ನನ್ನ ಪಿಆರ್‌ ಮೂಲಕ ಅವರ ಆರ್ಥಿಕ ಸಂಕಷ್ಟದ ಬಗ್ಗೆ ನನಗೆ ಅರಿವಾಯಿತು. ಸದ್ಯ ನಾನು ಕೂಡ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ. ಆದರೂ ನನ್ನೊಳಗಿನ ಬೆಳಕು ಅವರಿಗೆ ಸಹಾಯ ಮಾಡಲು ಪ್ರೇರೇಪಿಸಿತು. 

ಅವರಿಗೆ ಊಟದ ವ್ಯವಸ್ಥೆ ಮಾಡಿ, ದೇಣಿಗೆ ನೀಡಿದ್ದೇನೆ. ನಾನು ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಬೇರೆ ಯಾರಾದರೂ ಅವರಿಗೆ ಸಹಾಯ ಮಾಡಲು ಬಯಸಿದರೆ, ಒಟ್ಟಾಗಿ ಮಾಡಬಹುದು.ಈ ವಿಡಿಯೋವನ್ನು ವೈರಲ್ ಮಾಡಲು ನಿಮಗೆ ಧೈರ್ಯವಿದೆಯೇ? ಇದು ಅಸಲಿ ವಿಡಿಯೋ. ಅಂದ್ಹಾಗೆ ಈ ಸಾಲು ಕೆಲವು ಹತಾಶ, ಕೆಲಸವಿಲ್ಲದ, ಅಶಿಕ್ಷಿತ, ಟೈಂಪಾಸ್ ಚಿಲ್ಲರೆಗಳಿಗಾಗಿ. 

ನಿರಾಶಾವಾದದ ಬೂದಿಯಿಂದ ಎದ್ದುಬರುತ್ತೇನೆ . ನಕಾರಾತ್ಮಕ ಶಕ್ತಿಯು ಕೇವಲ ಮೆಟ್ಟಿಲು. ನಾನು ಅದರ ಮೇಲೆ ಸಕಾರಾತ್ಮಕತೆಯ ದಿಗಂತದ ಕಡೆಗೆ ಹೆಜ್ಜೆ ಇಡುತ್ತೇನೆ. ಇದು ಕೇವಲ ಆರಂಭ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.