ಮದುವೆ ಆಗಿ ಒಂದು ತಿಂಗಳಾಗಿಲ್ಲ, ತರುಣ್ ಸುಧೀರ್ ಮನೆಯಲ್ಲಿ ಏನಾಯ್ತು ಗೊ ತ್ತಾ
ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ತಾರಾ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಜೊತೆ ನಟಿ ಸೋನಲ್ ಮೊಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರು, ಸ್ನೇಹಿತರು, ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಈ ಜೋಡಿ ಬೆಂಗಳೂರಿನ ಮೈಸೂರು ರೋಡ್‌ನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ತಮ್ಮ ಸೊಸೆ ಸೋನಲ್ ಮೊಂಥೆರೋ ಬಗ್ಗೆ ಮಾತನಾಡಿದ ಅವರು, ಸೊಸೆ ಅಷ್ಟೊಂದು ಕ್ಲೋಸ್ ಆಗಿಲ್ಲ. ನಾರ್ಮಲ್ ಆಗಿ ಆಕೆ ಜೊತೆಗೆ ಮಾತನಾಡುತ್ತೇನೆ ಬಿಟ್ಟರೆ ಬೇರೆ ಏನನ್ನೂ ಇನ್ನೂ ಮಾತನಾಡಿಲ್ಲ. ಒಂದು ಎರಡು ಮೂರು ತಿಂಗಳ ಹಿಂದೆ ನನಗೆ ಗೊತ್ತಾಯ್ತು ಅಷ್ಟೇ. ಇವರು ಮದುವೆಯಾಗುತ್ತಾರೆ ಎಂದು, ಅವರ ಆತ್ಮೀಯ ಸ್ನೇಹಿತರೊಬ್ಬರಿಂದ ಈ ವಿಷಯ ನನಗೆ ತಿಳಿಯಿತು.
ನಾನು ರಾಯರ ಭಕ್ತಳು. ಹೀಗಾಗಿ ಜಿಮ್ಮಿ ಅವರು ಗುರುವಾರ ರಾತ್ರಿ ಒಂಬತ್ತು ಗಂಟೆಗೆ ಬಂದು ಲ್ಯಾಪ್‌ಟಾಪ್ ಅಲ್ಲಿ ಅಮ್ಮಾ, ಈ ಹುಡುಗಿ ಹೇಗಿದ್ದಾಳೆ. ತರುಣ್ ಮದುವೆಯಾಗುತ್ತಾನೆ ಅಂದರು. ಹಾ. ಅಂತಾ ನಾನು ಶಾಕ್ ಆದೆ. ಮದುವೆ ಮಾಡಬೇಕು ಅಂತಾ ಬಿಗ್ ಬಾಸ್ ಹೇಳಿದ್ದಾರೆ. ಇದೇ ಹುಡುಗಿಯನ್ನು ನಾವು ಒಕೆ ಮಾಡಿದ್ದೇವೆ. ಬಿಗ್ ಬಾಸ್ ಹೇಳಿದ ಮೇಲೆ ನಾನೇನು ಯೋಚನೆ ಮಾಡಲಿ, ಓಕೆ ಅಂತಾ ಹೇಳಿದೆ ಎಂದು ಮಾಲತಿ ಸುಧೀರ್ ಹೇಳಿದ್ದಾರೆ.
ಇನ್ನು ತಮ್ಮ ಪತಿ ಸುಧೀರ್ ಅವರನ್ನು ನೆನಪಿಸಿಕೊಂಡ ಮಾಲತಿ ಸುಧೀರ್, ಅವರ ನೆನಪು ತುಂಬಾ ಕಾಡುತ್ತದೆ. ಯಜಮಾನರನ್ನು ಬಿಟ್ಟಿರುವುದೇ ಒಂದು ಕಷ್ಟದ ಜೀವನ. ಚಿಕ್ಕ ವಯಸ್ಸಿನಲ್ಲೇ ಅವರನ್ನು ಕಳೆದುಕೊಂಡ ನೋವು ನಮಗೆ ಕಾಡುತ್ತದೆ. ನಾನು ಮೊದಲೇ ಹೇಳಿದ್ದೆ. ಮದುವೆ ಮನೆಯಲ್ಲಿ ಎಲ್ಲಾದರೂ ಒಂದು ಕಡೆ ಸುಧೀರ್ ಅವರ ಫೋಟೋ ಹಾಕಿ ನಿಮ್ಮ ಆಶೀರ್ವಾದ ಸದಾ ನನ್ನೊಂದಿಗೆ ಇರಲಿ ಅಂತಾ ಹಾಕಬೇಕು ಅಂತಾ ಹೇಳಿದ್ದೆ. ಹೀಗಾಗಿ ಮದುವೆಗೆ ಬಂದ ಪ್ರತಿಯೊಬ್ಬರಿಗೂ ಅವರ ಫೋಟೋ ಕಾಣಿಸುವ ಹಾಗೆ ಹಾಕಿಸಿದ್ದಾನೆ. ಸೊಸೆ ಬಂದಮೇಲೆ ಮಗನ ಮುಖ ಅರಳಿದೆ ಅಷ್ಟೇ ಸಾಕು ಎಂದು ಮಾಲತಿ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.