ಒಬ್ಬ ನಟಿ 10ವಷ೯ ಇಂಡಸ್ಟ್ರಿಯಲ್ಲಿ ಇರೋದು ಸುಲಭ ಅಲ್ಲ, ರಚ್ಚು ಬಗ್ಗೆ ದಶ೯ನ್ ಮೆಚ್ಚುಗೆ

 | 
Hji

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಕನ್ನಡ ಚಿತ್ರರಂಗಕ್ಕೆ ಆಗಮಿಸಿ ದಶಕದ ಮೇಲಾಯ್ತು. ಇಂದಿಗೂ ಸಾಲು ಸಾಲು ಸಿನಿಮಾಗಳಲ್ಲಿ ರಚಿತಾ ನಟಿಸುತ್ತಿದ್ದಾರೆ. ಮೊದಲಿದ್ದ ಸ್ಟಾರ್‌ಡಮ್‌ ಅನ್ನೇ ಇನ್ನೂ ಉಳಿಸಿಕೊಂಡು, ಕನ್ನಡದಲ್ಲಿ ಬೇಡಿಕೆಯ ನಟಿಯಾಗಿದ್ದಾರೆ.

 2013ರಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಬುಲ್‌ ಬುಲ್‌ ಸಿನಿಮಾ ಮೂಲಕ ಬಂದ ಚಂದನವನಕ್ಕೆ ಬಂದ ರಚಿತಾ, ಸ್ಟಾರ್‌ ಹೀರೋಗಳಷ್ಟೇ ಅಲ್ಲದೆ, ಹೊಸಬರಿಗೂ ಸಾಥ್‌ ನೀಡುತ್ತಿದ್ದಾರೆ. ಈಗ ಇದೇ ಬುಲ್‌ ಬುಲ್‌ ಬಗ್ಗೆ ಮ್ಯಾಟ್ನಿ ಸಿನಿಮಾ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ದರ್ಶನ್‌ ಮಾತನಾಡಿದ್ದಾರೆ.

10 ವರ್ಷ ಒಬ್ಬ ನಾಯಕ ನಟಿ, ಸಿನಿಮಾರಂಗದಲ್ಲಿಈಜುವುದಾಗಲಿ, ಜಯಿಸುವುದಾಗಲಿ ತುಂಬ ಕಷ್ಟ. ಕಷ್ಟ ಅಂದ್ರೆ ಮೆಂಟೇನ್‌ ಮಾಡಿಕೊಂಡು ಹೋಗಬೇಕಲ್ಲ ಅಂತ. ಬುಲ್‌ ಬುಲ್‌ ಸಿನಿಮಾದಲ್ಲಿ ಏನ್‌ ನೋಡಿದ್ವೋ, ಮ್ಯಾಟ್ನಿ ಸಿನಿಮಾದಲ್ಲೂ ಅದೇ ರೀತಿ ಕಾಣಿಸ್ತಿದ್ದಾರೆ. ಅದರಲ್ಲಿಯೇ ಅವರ ಜರ್ನಿ ಗೊತ್ತಾಗ್ತಿದೆ.

 ಅದರಲ್ಲೊಂದು ಶ್ರಮ ಇದ್ದೇ ಇದೆ. ಹತ್ತು ವರ್ಷ ಅಂದ್ರೆ ಸಣ್ಣದಲ್ಲ. ನಮ್ಮ ಇಂಡಸ್ಟ್ರಿನೇ ತಿರುಗಿ ನೋಡಿ, ಹಳೇ ತಲೆಮಾರಲ್ಲ. ಈಗಿನವರು ಯಾರಿದ್ದಾರೆ? ತುಂಬ ಕಮ್ಮಿ. ಅದರಲ್ಲಿ ಮೊದಲನೇ ಸ್ಥಾನದಲ್ಲಿ ನಿಂತಿದ್ದಾರೆ. ಅವರಿಗೆ ಆಲ್‌ ದಿ ಬೆಸ್ಟ್‌ ಎಂದರು ದರ್ಶನ್.‌

ನೀಲಕಂಠೇಶ್ವರ ನಾಟ್ಯ ಸಂಘ, ನಾವೂ ಅಲ್ಲಿಯೇ ಕಲಿತಿದ್ದು, ಅಲ್ಲಿಂದ ಬಂದವರು. ಈಗ ಹೀರೋ ಆಗಿದ್ದಾರೆ ಎಂದರೆ, ಆ ಜರ್ನಿ ತುಂಬ ದೊಡ್ಡದು. ಯಾವುದೋ ವ್ಯಕ್ತಿ ಬೆಳೆದಿದ್ದಾನೆ ಎಂದರೆ, ಅದರ ಹಿಂದೆ ಶ್ರಮ ಇದ್ದೇ ಇರುತ್ತೆ. ಸುಮ್ನೆ ಯಾರೂ ಮೇಲೆ ಬಂದಿರಲ್ಲ. ಸೋಲು ಗೆಲುವು, ಅಪಮಾನ, ಅವಮಾನ ಎಲ್ಲ ಪಡೆದುಕೊಂಡು ಒಬ್ಬ ನಾಯಕ ನಟ ಆಗಿದ್ದಾರೆ ಎಂದು ನಟ ಸತೀಶ್ ಬಗ್ಗೆ‌ ದರ್ಶನ್‌ ಮಾತನಾಡಿದರು.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.