ಮಜಾ ಟಾಕೀಸ್ ಅಲ್ಲ ಅದು, ಡಬಲ್ ಮೀನಿಂಗ್ ಟಾಕೀಸ್, ಸೃಜನ್ ಲೋಕೇಶ್ ಶೋಗೆ ಉಗಿದ ತರಂಗ ವಿಶ್ವ
Jun 16, 2025, 15:05 IST
|

ಇದೀಗ ಇದಕ್ಕೆ ಕಾರಣವೇನು ಅನ್ನೋದನ್ನು ತರಂಗ ವಿಶ್ವ ರಿವೀಲ್ ಮಾಡಿದ್ದಾರೆ. ಮಜಾ ಟಾಕೀಸ್ ಅಂತಂದರೆ ನಂಗೆ ಒಂದು ವಿಶೇಷವಾದ ಸ್ಥಾನ ಮತ್ತು ವಿಶೇಷವಾದ ಗೌರವವನ್ನು ತಂದು ಕೊಟ್ಟಿತು. ಶುರುವಿನ ʻಮಜಾ ಟಾಕೀಸ್ʼ ಎಪಿಸೋಡ್‌ಗಳು ಅತ್ಯದ್ಭುತ. ಅಪರ್ಣಾ ಮೇಡಂ, ಸೃಜನ್ ಲೋಕೇಶ್, ಮಂಡ್ಯ ರಮೇಶ್, ಕುರಿ ಪ್ರತಾಪ್, ಶ್ವೇತಾ ಚೆಂಗಪ್ಪ ಇನ್ನೂ ಮುಂತಾದ ಕಲಾವಿದರ ಜೊತೆಗೆ ನಾನು ಒಬ್ಬನಾಗಿದ್ದೆ. ಯಾರೋ ಒಬ್ಬರಿಂದ ಅಲ್ಲ, ಈ ʻಮಜಾ ಟಾಕೀಸ್ʼ ಸಂಪೂರ್ಣ ಇವರೆಲ್ಲರಿಂದ ಆಗಿದ್ದು.
ಇವರೆಲ್ಲರೂ ಒಂದೊಂದು ಫ್ಲೇವರ್ ಇದ್ದಂಗೆ, ಹಾಗಾಗಿ ನೋಡುಗರಿಗೆ ಬಹಳ ಪ್ರೀತಿ ತಂದು ಕೊಟ್ಟಿತು. ಕುಟುಂಬಸ್ಥರು ಒಟ್ಟಾಗಿ ಕೂತು ನಮ್ಮ ಶೋ ನೋಡಿದಾಗ ಮಜಾ ತಂದು ಕೊಟ್ಟಿತು. ಆ ಯಶಸನ್ನು ನಾವು ಎಂಜಾಯ್ ಮಾಡಿದ್ದೇವೆ. ಬರೀ ಇಂಡಿಯಾ ಅಷ್ಟೇ ಅಲ್ಲ, ನಾವು ಹೊರದೇಶಕ್ಕೆ ಹೋದಾಗಲೂ ಜನ ನನ್ನನ್ನು ಗುರುತಿಸಿದ್ದಾರೆ. ಅದು ಹೆಮ್ಮೆಯ ವಿಚಾರ” ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತರಂಗ ವಿಶ್ವ ಈ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಬಾರಿಯ ʻಮಜಾ ಟಾಕೀಸ್ʼ ಶೋನಲ್ಲಿ ಹಳೆಯ ಕಲಾವಿದರು ಯಾಕಿಲ್ಲ ಎಂಬ ಪ್ರಶ್ನೆಗೆ, “ಈ ಬಗ್ಗೆ ಚಾನೆಲ್ ತೀರ್ಮಾನ ತೆಗೆದುಕೊಳ್ಳುತ್ತದೆ. ಸೃಜನ್ ಲೋಕೇಶ್ ಮತ್ತು ಚಾನೆಲ್ ಅವರ ನಡುವೆ ಏನೆಲ್ಲಾ ಮಾತು ಕಥೆಗಳು ಆಗಿವೆ ಅನ್ನೋದು ನನಗೆ ಗೊತ್ತಿಲ್ಲ. ಈಗ ʻಮಜಾಭಾರತʼ ಮತ್ತು ʻಗಿಚ್ಚಿ ಗಿಲಿಗಿಲಿʼ ಹುಡುಗರಿದ್ದಾರೆ. ಅವರೆಲ್ಲರೂ ಅದ್ಭುತ ಕಲಾವಿದರು. ಇದನ್ನು ʻಗಿಚ್ಚಿ ಗಿಲಿಗಿಲಿʼಯಾಗಿ ತೆಗೆದುಕೊಳ್ಳಬೇಕಾ ಅಥವಾ ಮಜಾ ಟಾಕೀಸ್ ಆಗಿ ತೆಗೆದುಕೊಳ್ಳಬೇಕಾ ಅನ್ನೋ ಕನ್ಫ್ಯೂಷನ್ ಜನರಲ್ಲಿ ಮೂಡಿದೆ.
ಸ್ಕಿಟ್‌ಗಳನ್ನು ನೋಡಿ ನನಗೆ ಹೊರಗಿನಿಂದಲೂ ಸಿಕ್ಕಾಪಟ್ಟೆ ಡಬಲ್ ಮೀನಿಂಗ್ ರಿಪೋರ್ಟ್‌ಗಳು ಬರುತ್ತಿದ್ವು. ಆದರೆ ನಾನು ಏನು ಮಾಡೋಕೆ ಸಾಧ್ಯ? ನಾನೊಬ್ಬ ಪಾತ್ರಧಾರಿ ಅಷ್ಟೇ ಎಂದಿದ್ದಾರೆ ತರಂಗ ವಿಶ್ವ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023