ಮದುವೆಗೆ ಆಸಕ್ತಿ ಇಲ್ಲ‌ಅಂತಲ್ಲ, ನನ್ನ ಮಗ ಇನ್ನೂ ಚಿಕ್ಕವನು‌ ಎಂದ ವಿಜಯ್ ರಾಘವೇಂದ್ರ

 | 
Nd
ವೀಕ್ಷಕರೇ ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಮೇಘನಾ ರಾಜ್ ಎರಡನೇ ಮದುವೆ ಆಗುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ಕೆಲವರು ಪೋಸ್ಟ್ ಮಾಡುತ್ತಾರೆ. ಮೇಘನಾ ಪತಿಯನ್ನು ಕಳೆದುಕೊಂಡಿದ್ದಾರೆ, ವಿಜಯ್ ಪತ್ನಿಯನ್ನು ಕಳೆದುಕೊಂಡಿದ್ದಾರೆ. 
ಹಾಗಾಗಿ ಇವರಿಬ್ಬರು ಮದುವೆ ಆಗುತ್ತಾರಂತೆ, ಇಬ್ಬರೂ ಮದುವೆ ಆದ್ರೆ ಚೆನ್ನಾಗಿರುತ್ತದೆ ಅಂತೆಲ್ಲಾ ಸುದ್ದಿ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಮೇಘನಾ ರಾಜ್ ಇಂತಹ ವದಂತಿಗಳಿಗೆಲ್ಲಾ ಬ್ರೇಕ್ ಹಾಕಿದ್ದರು. 
ಇದೀಗ ನಟ ವಿಜಯ ರಾಘವೇಂದ್ರ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅದೆಲ್ಲಾ ಸುಳ್ಳು.. ಇಂತಹ ವಿಚಾರಕ್ಕೆ ಸ್ಪಷ್ಟೀಕರಣ ಕೊಡುವುದು ಹಿಂಸೆ ಅನ್ನಿಸುತ್ತೆ. ಕೆಲವೊಮ್ಮೆ ಕೋಪ ಕೂಡ ಬರುತ್ತೆ ಎಂದಿದ್ದಾರೆ.
ನನ್ನ ವಿಚಾರದಲ್ಲಿ ಇನ್ನು ಮುಂದೆ ಹೇಗೆ ಎನ್ನುವ ಕಾಳಜಿ, ಪ್ರೀತಿಯನ್ನು ಬಹುತೇಕರು ತೋರಿಸುತ್ತಾರೆ. ಆದರೆ ಅದು ಸುದ್ದಿಯಾಗಿ ಹಬ್ಬಿದಾಗ ಅದು ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ, ನನಗೂ ಮಗ ಇದ್ದಾನೆ. ಅದರ ಬಗ್ಗೆ ನಾನು ಮಾತಾಡಲ್ಲ. 
ಅದು ಸತ್ಯಕ್ಕೆ ದೂರವಾದುದು. ಮೇಘಾ ಅಥವಾ ಇನ್ನಾರ ಜೊತೆಗೋ ನಾನು ಮದುವೆ ಆಗ್ತೀನಿ ಎನ್ನುವುದು ಸುಳ್ಳು. ಇನ್ನೊಂದು ಮದುವೆ ಅಥವಾ ಮತ್ತೊಬ್ಬರನ್ನು ನನ್ನ ಬದುಕಿಗೆ ಬರಮಾಡಿಕೊಳ್ಳುವುದು ಇನ್ನು ಆಗದ ಕೆಲಸ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.