ಹಂಸ ಪತ್ನಿಯಿಂದ ಜಗದೀಶ್ ಗೆ ಧಳಿತ, ಓಡಿಹೋದ ಜಗ್ಗ

 | 
Hs
ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಕನ್ನಡ 11ನೇ ಸೀಸನ್ ಶೋದ ಸ್ಪರ್ಧಿಗಳಾದ ಜಗದೀಶ್ ಮತ್ತು ಹಂಸ ಕೆಲವೇ ದಿನ ಬಿಗ್‌ಬಾಸ್ ಮನೆಯಲ್ಲಿದ್ದರೂ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಲಾಯರ್ ಜಗದೀಶ್‌ಗೆ ಈ ಶೋ ತುಂಬಾ ಜನಪ್ರಿಯತೆ ತಂದುಕೊಟ್ಟಿದೆ. ಬಿಗ್‌ಬಾಸ್ ಮನೆಯಲ್ಲಿದ್ದಾಗ ಜಗದೀಶ್‌ ಹಂಸ ಜೊತೆ ಸಲುಗೆಯಿಂದಲೇ ಇರುತ್ತಿದ್ದರು, ಅವರು ನನ್ನ ಕ್ರಷ್ ಎನ್ನುವ ರೀತಿ ಮಾತನಾಡುತ್ತಿದ್ದರು.
ಹಂಸ ವಿಚಾರಕ್ಕೆ ಶುರುವಾದ ಜಗಳವೊಂದು ಜಗದೀಶ್ ಮತ್ತು ರಂಜಿತ್‌ರನ್ನು ಎಲಿಮಿನೇಟ್ ಮಾಡುವ ಮೂಲಕ ಅಂತ್ಯವಾಗಿತ್ತು. ಅದಾದ ಕೆಲವು ವಾರಗಳ ಬಳಿಕ ಹಂಸ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬಂದರೂ ಇಬ್ಬರು ಹಲವು ಖಾಸಗಿ ಸುದ್ದಿ ವಾಹಿನಿಗಳಲ್ಲಿ ಜೊತೆಯಾಗಿ ಇಂಟರ್ವ್ಯೂಗಳಲ್ಲಿ ಭಾಗಿಯಾಗಿದ್ದಾರೆ.
https://www.youtube.com/live/hwTqksuGkSA?si=7kWWHUtQx_L8UHTK
ಇದೀಗ ಖಾಸಗಿ ವಾಹಿನಿಯೊಂದರಲ್ಲಿ ಹಂಸ ಮತ್ತು ಜಗದೀಶ್ ಕಾರ್ಯಕ್ರಮದ ನಡುವೆ ಜೊತೆಯಾಗಿ ಕುಣಿದಿದ್ದಾರೆ. ಈ ಸಂದರ್ಭದಲ್ಲೇ ಹಂಸ ಪತಿ ಮಚ್ಚು ಹಿಡಿದು ಪ್ರವೇಶಿಸಿದ್ದಾರೆ. ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ಹಾಡಿಗೆ ಇಬ್ಬರು ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕುತ್ತಿದ್ದರು, ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಹಂಸ ಪತಿ ಜಗದೀಶ್‌ಗೆ ಅವಾಜ್ ಹಾಕಿದ್ದಾರೆ.
ಆದರೆ ಅದು ನಿಜವಾದ ಮಚ್ಚಲ್ಲ ಹಂಸ ಪತಿ ತಮಾಷೆಯಾಗಿಯೇ ಲಾಯರ್ ಜಗದೀಶ್‌ಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಇಬ್ಬರು ನಗುತ್ತಾ ಮಾತನಾಡಿದ್ದಾರೆ. ಹಂಸ ಮತ್ತು ಜಗದೀಶ್ ಬಿಗ್‌ ಬಾಸ್‌ನಿಂದ ಹೊರ ಬಂದ ಬಳಿಕ ಉತ್ತಮ ಸ್ನೇಹಿತರಾಗಿದ್ದು, ಹಲವು ಖಾಸಗಿ ವಾಹಿನಿಗಳಲ್ಲಿ ಜೊತೆಯಲ್ಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.