ವತೂ೯ರ್ ಸಂತೋಷ್ ಗೆ ಕ್ಷಮೆ ಕೇಳಿದ ಜಗ್ಗೇಶ್, ನನಗೆ ನಿನ್ನ ತಂದೆ ವಯಸ್ಸಪ್ಪಾ

 | 
Jkj

ನಟ ಜಗ್ಗೇಶ್ ಮತ್ತು ಅಪ್ಪು ಅವರಿಬ್ಬರ ಹುಟ್ಟು ಹಬ್ಬ ಒಂದೇ ದಿನ.ಅಪ್ಪು ಅಗಲಿದ ಬಳಿಕ ಜಗ್ಗೇಶ್, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಾರಿ ಹುಟ್ಟುಹಬ್ಬಕ್ಕೆ ತಮ್ಮ ಮೆಚ್ಚಿನ ದೈವ ರಾಯರ ಬಳಿ ತೆರಳಿದ್ದಾರೆ. ಮಂತ್ರಾಲಯದಲ್ಲಿ ರಾಯರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದಲೂ ಮಂತ್ರಾಲಯದಲ್ಲಿರುವ ಜಗ್ಗೇಶ್ ಇಂದು ಅಲ್ಲಿಂದಲೇ ಫೇಸ್​ಬುಕ್ ಲೈವ್ ಬಂದಿದ್ದರು. ಅಭಿಮಾನಿಗಳೊಡನೆ ಹಲವು ವಿಷಯಗಳನ್ನು ಮಾತನಾಡಿದರು. ಕೊನೆಗೆ ಕ್ಷಮೆ ಸಹ ಕೇಳಿದರು.


ಮುಂದುವರೆದು ಇನ್ನೊಂದು ವಿಷಯಕ್ಕೂ ಕ್ಷಮೆ ಕೇಳಿದರು ಜಗ್ಗೇಶ್. ಕತೆಯೊಂದರ ಮೂಲಕ ಮಾತು ಶುರು ಮಾಡಿದ ಜಗ್ಗೇಶ್, ಇತ್ತೀಚೆಗೆ ಒಂದು ಸಿನಿಮಾ ಮಾಡಿದ್ದೆ. ಆ ಸಿನಿಮಾ ನೋಡಿದ ಹಲವರು ನನ್ನ ಮೇಲೆ ಬೇಸರ ಮಾಡಿಕೊಂಡಿದ್ದಾರೆ’ ಎಂದರು ನೆಟ್​ವರ್ಕ್ ಸಮಸ್ಯೆ ಇದ್ದ ಕಾರಣ ಜಗ್ಗೇಶ್ ಮಾತುಗಳು ಸರಿಯಾಗಿ ಕೇಳುತ್ತಿರಲಿಲ್ಲ.

ಅದು ನನ್ನ ಸಿನಿಮಾ ಅಲ್ಲ, ನಿರ್ದೇಶಕನನ್ನು ನಂಬಿಕೆ ಕೆಲಸ ಕೊಟ್ಟೆ. ಆ ನಿರ್ದೇಶಕ ತನ್ನ ಆಸೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಿದ್ದಾನೆ. ಆ ಸಿನಿಮಾದಿಂದ ಅಕಸ್ಮಾತ್ ಬೇಸರವಾಗಿದ್ದರೆ ಕ್ಷಮೆ ಇರಲಿ. ನಾನು ಪ್ರೀಮಿಯರ್ ಪದ್ಮಿನಿ ಎಂಬ ಒಳ್ಳೆಯ ಸಿನಿಮಾ ಕೊಟ್ಟಿದ್ದೀನಿ, 8 ಎಂಎಂ, ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಕೊಟ್ಟಿದ್ದೀನಿ. ಈ ಒಂದು ಸಿನಿಮಾದಿಂದ ದೂರಾಗುವುದು ಬೇಡ. ವೃತ್ತಿಯಲ್ಲಿ ಲೋಪದೋಷಗಳಾಗಿದ್ದರೆ ಕ್ಷಮೆ ಇರಲಿ. 

ನಾನು ನೇರವಾಗಿ ಮಾತಾಡುವ ಮನುಷ್ಯ, ಹಳ್ಳಿಯ ಸೊಗಡಿನವನು, ನನ್ನ ಮಾತುಗಳಲ್ಲಿ ಹಳ್ಳಿ ಪದಗಳು ಬಂದು ಬಿಡುತ್ತವೆ. ನಾನು ಎಂದಿಗೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ಹೇಳಿದ್ರು.ಮೈಕ್ ಹಿಡಿದ ಮಾತಾಡುವಾಗ ನನ್ನ ಮಾತಿನಿಂದ ಯಾರಿಗಾದ್ರೂ ಬೇಜಾರಾಗಿದ್ದರೆ ಕ್ಷಮಿಸಿಬಿಡಿ. ನಿಮ್ಮ ತಂದೆಯ ವಯಸ್ಸಿನವನು ಅಂದುಕೊಂಡು  ಕ್ಷಮಿಸಿ ಎಂದು ಹೇಳಿದ್ರು.  ಸಿನಿಮಾದ ಪ್ರಚಾರದ ವೇಳೆ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ, ಬಿಗ್​ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಕಿತ್ತೋದ್​ ನನ್​ ಮಗ ಎಂಬ ಪದ ಬಳಸಿದ್ರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಜಗ್ಗೇಶ್ ವರ್ತೂರು ಸಂತೋಷ್ ಹೆಸರು ಹೇಳದೆ ಕ್ಷಮೆ ಕೇಳಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.