ದ ರ್ಶನ್ ಅ‌.ರೆಸ್ಟ್ ಆದ ತಕ್ಷಣ ರೊಚ್ಚಿಗೆದ್ದ ಜಗ್ಗೇಶ್; ಹಳೆ‌ದ್ವೇ ಷಕ್ಕೆ ಸಿಕ್ತು ಉತ್ತರ

 | 
Hd

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಕ್ಷುಲ್ಲಕ ಕಾರಣಕ್ಕೆ ಒಂದು ಜೀವ ಬಲಿಯಾಗಿದೆ. ತಮ್ಮ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್, ಫೋಟೊ ಕಳುಹಿಸಿದ್ದಕ್ಕೆ ರೇಣುಕಾ ಸ್ವಾಮಿ ಹತ್ಯೆ ಆಗಿದೆ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕಳುಹಿಸಿದ ಮೆಸೇಜ್‌, ಫೋಟೊ ನಟ ದರ್ಶನ್‌ನ ಕೆರಳಿಸಿತ್ತು. ಅದೇ ಕಾರಣಕ್ಕೆ ಆತನನ್ನು ಆಪ್ತರ ಮೂಲಕ ಬೆಂಗಳೂರಿಗೆ ಕರೆಸಿ ಥಳಿಸಿದ್ದು ಈ ವೇಳೆ ಆತನ ಜೀವವೇ ಹೋಗಿದೆ ಎನ್ನಲಾಗ್ತಿದೆ. ಈಗಾಗಲೇ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಪವಿತ್ರಾ ಗೌಡ ಪೋಸ್ಟ್ ಬಳಿಕ ಕೆಲ ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಪರ ವಹಿಸಿ, ಪವಿತ್ರಾ ಗೌಡಳನ್ನು ಟಾರ್ಗೆಟ್ ಮಾಡುತ್ತಿದ್ದರು. ನಿಮ್ಮಿಂದಲೇ ನಮ್ಮ ಬಾಸ್ ದಾಂಪತ್ಯ ಜೀವನ ಹಾಳಾಯಿತು ಎನ್ನುವ ಕಾಮೆಂಟ್ ಮಾಡುತ್ತಿದ್ದರು. ಇದೇ ರೀತಿ ರೇಣುಕಾಸ್ವಾಮಿ ಕೂಡ ತಮ್ಮ ನೆಚ್ಚಿನ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಜೀವನ ಚೆನ್ನಾಗಿರಬೇಕು ಎಂದು ಬಯಸಿದ್ದರು. ಪವಿತ್ರಾ ಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು ಎನ್ನಲಾಗ್ತಿದೆ.

ಕಳೆದ 3 ತಿಂಗಳಿಂದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಿದ್ದರು. ಪವಿತ್ರಾ ಗೌಡ ಆತನ ಅಕೌಂಟ್ ಬ್ಲಾಕ್ ಮಾಡಿದ್ರೆ, ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಮತ್ತೆ ಕಾಮೆಂಟ್ ಹಾಕುತ್ತಿದ್ದರು ಎನ್ನಲಾಗ್ತಿದೆ. 5 ದಿನಗಳ ಹಿಂದೆ ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ರೇಣುಕಾಸ್ವಾಮಿ ಮರ್ಮಾಂಗದ ಫೋಟೊ ಕಳುಹಿಸಿ ದರ್ಶನ್‌ಗಿಂತ ನಾನೇನು ಕಮ್ಮಿ ಬಾ ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು, 

ಇದೇ ಫೋಟೊ, ಕಾಮೆಂಟ್ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ . ಅದಕ್ಕಾಗಿ ಪವಿತ್ರಾ ಗೌಡ ಚಪ್ಪಲಿಯಲ್ಲಿ ಕೂಡಾ ಹೊಡೆದಿದ್ದಾರೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.