ದರ್ಶನ್ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಜಗ್ಗೇಶ್;
ಕೆಲ ದಿನಗಳ ಹಿಂದಷ್ಟೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈಚೆಗೆ ಆಕ್ಷೇಪಾರ್ಹ ಟ್ವೀಟ್‌ವೊಂದು ವೈರಲ್ ಆಗಿತ್ತು. ಆರ್‌ಸಿಬಿ ಸೋಲುತ್ತಿರುವುದಕ್ಕೆ ಅಶ್ವಿನಿ ಕಾರಣ ಎಂಬ ಕೀಳುಮಟ್ಟದ ಟ್ವೀಟ್‌ವೊಂದನ್ನು ಕಿಡಗೇಡಿಯೊಬ್ಬ ಮಾಡಿದ್ದು, ಅದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೀಗ ಈ ಬಗ್ಗೆ ಹಿರಿಯ ನಟ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ಪುನೀತ್ ರಾಜ್‌ಕುಮಾರ್ ಅವರ ಪತ್ನಿಯನ್ನು ಅಣಕಿಸಿದ ನತದೃಷ್ಟರಿಗೆ ಅವರ ತಾಯಿ ಬೆಲೆ ಗೊತ್ತಿರಬೇಕು ಎಂದು ಹೇಳಿದ್ದಾರೆ. ಪುನೀತನ ಮಡದಿ ಅಣಕಿಸಿದ ನತದೃಷ್ಟರೇ ನಿಮಗೂ ತಾಯಿ ಇರಬೇಕು ಹಾಗೂ ತಾಯಿ ಬೆಲೆ ಗೊತ್ತಿರಬೇಕು. ಒಂದುವೇಳೆ, ತಾಯಿ ಹೆಣ್ಣು ಗೌರವ ಇಲ್ಲ ಎಂದರೆ, ಖಂಡಿತ ಅಂಥವರು ಮನುಕುಲಕ್ಕೆ ಅನರ್ಹ! ಪುನೀತನ ಮಡದಿ ಅನಾಥಳಲ್ಲ.
ತನ್ನ ಪ್ರೀತಿಸುತ್ತಿದ್ದ ಕೋಟ್ಯಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ. ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ದಾರ ಆದ ಇತಿಹಾಸವಿಲ್ಲ ಎಂದು ನಟ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಮಾತ್ರವಲ್ಲದೆ, ನಟಿ, ನಿರೂಪಕಿ ಅನುಶ್ರೀ ಅವರು ಕೂಡ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಹೆಣ್ಣಾಗಿ ಹುಟ್ಟೋದು ಒಂದು ವರ.ಇನ್ನೊಬ್ಬರ ಮನೆ ಬೆಳಗೋ ಲಕ್ಷ್ಮೀ ಸಮಾಜಕ್ಕೆ ಒಂದು ವರ.
ಇದೆಲ್ಲ ಗಾಳಿ ಮಾತುಗಳ ಹೆಮ್ಮರ.. ಈ ಜಾಗದಲ್ಲಿ ನಿಮ್ಮ ತಾಯಿ ಮಡದಿ ಅಥವಾ ಸಹೋದರಿ ಇದ್ದಿದ್ದರೆ..?? ಹೆಣ್ಣಿಗೆ ಗೌರವ ಸಿಗೋದು.. ಒಂದು ಕನಸು ಅಷ್ಟೇ.. ಈ ಕೆಟ್ಟ ಬೆಳವಣಿಗೆಗೆ ಕೊನೆಯಿಲ್ಲವೇ..?? ಸ್ತ್ರೀ ಅಂದರೆ ಅಷ್ಟೇ ಸಾಕೆ.ಹೆಣ್ಣೆಂದರೆ ಅಂಬಿಕೆ.ನಿಜ ಮಾಡಿ ಈ ಮೂಢನಂಬಿಕೆ. ಎಂದು ಪೋಸ್ಟ್ ಹಾಕಿದ್ದಾರೆ. ಸಿದ್ಧರಾಮಯ್ಯ ಸೇರಿ ಹಲವರು ಜನ ಕಿಡಿ ಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.