ಹೃ.ದಯಾಘಾತದಿಂದ ಜೈಲರ್ ಸಿನಿಮಾದ ನಟ ಇಹಲೋಕ, ಕಂಗಾಲಾದ ಪ್ರೇಕ್ಷಕರು

 | 
ರೀ

ಜೈಲರ್ ಸಿನಿಮಾ ನೋಡಿದವರಿಗೆಲ್ಲ ಖಳನಾಯಕ ಜೊತೆ ಮಿಂಚಿದ್ದ ಮಾರಿಮುತ್ತು ಯಾರೆಂದು ತಿಳಿದಿರುತ್ತದೆ. ಸಿನಿಮಾವನ್ನು ಅತ್ಯಧಿಕವಾಗಿ ಪ್ರೀತಿಸಿದ ಅವರು ಡಬ್ಬಿಂಗ್ ವೇಳೆ ಇನ್ನಿಲ್ಲವಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಹಾಗೂ ನಟ ಮಾರಿಮುತ್ತು ಮೊನ್ನೆ ಬೆಳಗ್ಗೆ ಹಠಾತ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 

57ರ ಹರೆಯದ ಮಾರಿಮುತ್ತು ಕಣ್ಣುಮ್ ಕಣ್ಣುಮ್ ಮತ್ತು ಪುಲಿವಾಲ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾದ ಜೈಲರ್ ಸಿನಿಮಾದಲ್ಲಿ ಖಳನಟನಾಗಿಯೂ ನಟಿಸಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಎದುರ್ ನೀಚಲ್‌ ಧಾರಾವಾಹಿ ಡಬ್ಬಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ. 

ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾದರೂ, ಜೀವ ಉಳಿಯಲಿಲ್ಲ. ಜೈಲರ್‌ ಸಿನಿಮಾದಲ್ಲಿ ನಟಿಸಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ ಮಾರಿಮುತ್ತು ಅವರ ನಿಧನಕ್ಕೆ ತಮಿಳು ಸಿನಿಮಾ ಮಂದಿ ಕಂಬನಿ ಮಿಡಿದಿದ್ದಾರೆ.
ಮಾರಿಮುತ್ತು ಎಂದಿನಂತೆ ಶುಕ್ರವಾರ ಬೆಳಗ್ಗೆ ಚೆನ್ನೈನ ಸ್ಟುಡಿಯೊದಲ್ಲಿ ತನ್ನ ಸಹನಟ ಕಮಲೇಶ್ ಜೊತೆಗೆ ಸೀರಿಯಲ್‌ ಡಬ್ಬಿಂಗ್‌ನಲ್ಲಿ ಭಾಗವಹಿಸಿದ್ದರು. ಡಬ್ಬಿಂಗ್‌ ವೇಳೆಯೇ ಸ್ಟುಡಿಯೋದಲ್ಲಿಯೇ ಹಠಾತ್ ಕುಸಿದು ಬಿದ್ದಿದ್ದಾರೆ. 

ತಕ್ಷಣವೇ ವಡಪಳನಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ನಿರ್ದೇಶಕರಾಗಿ ಮಿಂಚಲು ಸಾಧ್ಯವಾಗದ ಮಾರಿಮುತ್ತು ಹಲವು ಪ್ರಮುಖ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದಾದ ಬಳಿಕ ಸಿನಿಮಾದಲ್ಲಿ ನಟನೆಯ ಅವಕಾಶಗಳೂ ಸಿಕ್ಕವು. ಇತ್ತೀಚಿನ ದಿನಗಳಲ್ಲಿ ನಟನೆಯತ್ತಲೇ ಗಮನ ಹರಿಸಿದ್ದರು. ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಪೊಲೀಸ್ ಪಾತ್ರ, ಖಳನಟನಾಗಿಯೇ ಕಾಣಿಸಿಕೊಂಡಿದ್ದು ಹೆಚ್ಚು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.