ಹಿಂದೂ ಯುವತಿ ನೇಹಾ ತಂದೆಯ ಮುಂದೆ ಜೋಶಿ ಖಡಕ್ ಮಾತು; ಫಯಾಜ್ ನನ್ನು ನಾವು ಬಿಡಲ್ಲ ಅಷ್ಟೆ

 | 
Hgt

ಮಗಳು ನೇಹಾ ಕಗ್ಗೊಲೆ ಪ್ರಕರಣದಲ್ಲಿ ನಮಗೆ ನ್ಯಾಯ ದಕ್ಕಿಸಿ ಕೊಡಿ, ದಯವಿಟ್ಟು ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ, ಮಕ್ಕಳ ಅಮೂಲ್ಯ ಜೀವ ಉಳಿಸಿಕೊಡಿ, ಇದು ನಿಮ್ಮಿಂದ ಮಾತ್ರವೇ ಸಾಧ್ಯ ಸರ್, ಪ್ಲೀಸ್. ಹಂತಕನಿಗೆ ಕಠಿಣ ಶಿಕ್ಷೆ ಕೊಡಿಸಿ.

ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ  ಬಳಿ ಕೊಲೆಯಾದ ನೇಹಾ ಹಿರೇಮಠ ಅವರ ತಂದೆ ನಿರಂಜನ್‌ ಹಿರೇಮಠ ಕಣ್ಣೀರಿಡುತ್ತಾ ಮನವಿ ಮಾಡಿದರು. ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿ ನೇಹಾ ಕಗ್ಗೊಲೆ ವಿಷಯ ತಿಳಿದು ಗುರುವಾರ ರಾತ್ರಿಯೇ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರ ಮನೆಗೆ ತೆರಳಿದ್ದ ಕೇಂದ್ರ ಸಚಿವರೆದುರು ಕುಟುಂಬ ವರ್ಗ ದುಃಖ ತೋಡಿಕೊಂಡಿತು.

ಕಾಲೇಜು ಕ್ಯಾಂಪಸ್‌ನಲ್ಲೇ ಹೀಗೆ ಹತ್ಯೆ ನಡೆದರೆ ಹಿಂದೂ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡೋದಾದರೂ ಹೇಗೆ? ಸರ್ಕಾರದವರು ಇಂಥ ನೀಚರಿಗೆ ಕಠಿಣ ಶಿಕ್ಷೆ ಕೊಡಲಿ. ಹಿಂದೂ ಹೆಣ್ಣುಮಕ್ಕಳ ಹತ್ಯೆ ಇಲ್ಲಿಗೇ ಕೊನೆಗಾಣಿಸಿ ಎಂದು ನೇಹಾ ಸೋದರತ್ತೆ ಸಚಿವ ಜೋಶಿ ಅವರಲ್ಲಿ ಕಣ್ಣೀರಿಡುತ್ತಲೇ ಕೋರಿಕೊಂಡರು.

ಅಂದ ಚೆಂದದ ಹಿಂದೂ ವಿದ್ಯಾರ್ಥಿ-ಯುವತಿಯರೇ ಟಾರ್ಗೆಟ್ ಆಗುತ್ತಿದ್ದಾರೆ. ನಾನು ಕಾರ್ಪೋರೇಟ್ ಇದ್ದೇನೆ. ನನ್ನ ಮಗಳಿಗೇ ಹೀಗಾದರೆ ಸಾಮಾನ್ಯರ ಮಕ್ಕಳ ಗತಿ ಏನು? ಹಾಗಾಗಿ ಇದಕ್ಕೊಂದು ತಕ್ಕ ಶಾಸ್ತಿ ಆಗಲೇಬೇಕು ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ ಅವರು ಪ್ರಲ್ಹಾದ್‌ ಜೋಶಿ ಅವರಲ್ಲಿ ಒತ್ತಾಯಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.