ದಲಿತ ಕುಟುಂಬದಲ್ಲಿ ಹುಟ್ಟಿ IAS ಆದ ಮೊದಲ ಕನ್ನಡಿಗ, ಬಡತನದಲ್ಲಿ ಬೆಳೆದು ಬಂದ ಕೆ‌.ಶಿವರಾಮ್

 | 
Ghi

ನಟ, ರಾಜಕಾರಣಿ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ವಿಧಿವಶರಾಗಿದ್ದಾರೆ. ಕಾರ್ಡಿಯಕ್ ಅರೆಸ್ಟ್ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಕಳೆದ 20 ದಿನಗಳಿಂದ ಶಿವರಾಮ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿನದಿಂದ ದಿನಕ್ಕೆ ಅವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಿವರಾಮ್ ಅವರಿಗೆ ಡಾ.ಶೇಖರ್ ಪಾಟೀಲ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆ ಶಿವರಾಮ್ ನಟನಾಗಿ ಅಷ್ಟೇ ಅಲ್ಲದೇ ಉತ್ತಮ ರಾಜಕಾರಣಿಯಾಗಿಯೂ ಜನಪ್ರಿಯತೆ ಪಡೆದಿದ್ದರು.

ನಟನೆ, ರಾಜಕೀಯ ಮಾತ್ರವಲ್ಲದೇ ಕೆ.ಶಿವರಾಮ್​ ಐಎಎಸ್​ ಅಧಿಕಾರಿಯಾಗಿದ್ದರು. ಕನ್ನಡದಲ್ಲೇ ಐಎಎಸ್ ಪರೀಕ್ಷೆ​ ಬರೆದು ಉತ್ತೀರ್ಣರಾದ ಕೀರ್ತಿ ಇವರಿಗೆ ಸಲ್ಲಿತ್ತು. ಬಳಿಕ ಕೆ.ಶಿವರಾಮ್ ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿದ್ದು, ಬಳಿಕ ಸರ್ಕಾರಿ ಸೇವೆಗೆ ವಿದಾಯ ಹೇಳಿ ಸಿನಿಮಾದತ್ತ ಹೆಜ್ಜೆ ಇಟ್ಟರು.

ಕೆ.ಶಿವರಾಮ್​ 'ಬಾನಲ್ಲೆ ಮಧುಚಂದ್ರಕ್ಕೆ', 'ವಸಂತಕಾವ್ಯ' ಚಿತ್ರದಲ್ಲಿ ನಾಯಕನಾಗಿ ನಟನೆ ಮಾಡಿದ್ದರು. ಬಳಿಕ ರಾಜಕೀಯದತ್ತ ಹೆಜ್ಜೆಯಿಟ್ಟು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ನಿನ್ನೆಯಷ್ಟೇ ಶಿವರಾಮ್ ಅನಾರೋಗ್ಯದಿಂದಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಅಳಿಯ ಪ್ರದೀಪ್ ನಿನ್ನೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಅವರ ಕಂಡೀಷನ್ ಕ್ರಿಟಿಕಲ್ ಆಗಿದೆ ಎಂದಿದ್ದರು. 

ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕನ್ನಡದಲ್ಲೇ ಐಎಎಸ್ ಬರೆದು, ನಂತರ ಬೆಂಗಳೂರು, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅವರು ಕೆಲಸ ಮಾಡಿ ಹಲವಾರು ಜನರ ಮನ ಗೆದ್ದಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.