ರಾಜ್ಯಾದ್ಯಂತ ದೊಡ್ಡ ಸದ್ದು ಮಾಡುತ್ತಿರುವ ಕಾಟೇರ, ಬಹುವರ್ಷಗಳ ಬಳಿಕ ದರ್ಶನ್ ಜೀವನವನ್ನೇ ಬದಲಾಯಿಸಿದ ಸಿನಿಮಾ
ಕಾಟೇರನ ಸದ್ದಿಗೆ ಸೈಲೆಂಟ್ ಆದ ಸಲಾರ್ ಹೌದು 2023ರ ಕೊನೆಯಲ್ಲಿ ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಕಾಟೇರ ಚಿತ್ರ ಅದ್ಧೂರಿಯಾಗಿ ತೆರೆಕಂಡಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಸಿನಿಪ್ರಿಯರ ಮನ ಗೆಲ್ಲುವಲ್ಲಿ ಯಶ ಕಂಡಿರುವ ಕಾಟೇರ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಗಳಿಕೆ ಮಾಡಿದೆ. ಕಾಟೇರ ಕಂಪ್ಲೀಟ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು, ಮೇಲು ಜಾತಿಯವರಿಂದ ಕೆಳ ಜಾತಿಯವರ ಮೇಲೆ ಆಗುತ್ತಿದ್ದ ಅನ್ಯಾಯ ಹಾಗೂ ಉಳುವವನೇ ಭೂಮಿಯ ಒಡೆಯ ಕಾಯ್ದೆ ದೇಶದಲ್ಲಿ ಎಂಥ ಬದಲಾವಣೆ ತಂದಿತ್ತು ಎಂಬುದರ ಬಗ್ಗೆ ಚಿತ್ರವು ಮಾತನಾಡಿದೆ.
ದರ್ಶನ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಚಿತ್ರವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಸೇರಿದಂತೆ ಬರೋಬ್ಬರಿ 1,500 ಶೋಗಳು ಪ್ರದರ್ಶನಗೊಂಡಿದೆ. ಬೆಂಗಳೂರು ಹಾಗೂ ಕೆಲ ಜಿಲ್ಲೆಗಳಲ್ಲಿ ಮಧ್ಯರಾತ್ರಿಯಿಂದಲೇ ಕಾಟೇರ ಶೋ ನಡೆದಿದ್ದು, ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗೊಂಡಿದೆ.
ಬಹುತೇಕ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿರುವ ಸಿನಿಮಾವು ಮೊದಲ ದಿನ 19 ಕೋಟಿ 79 ಲಕ್ಷ ರೂ. ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಇದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. 15 ದಿನ ಕಾಟೇರನಿಗೆ ಎದುರಾಳಿಯಾಗಿ ಯಾವುದೇ ಕನ್ನಡ ಸಿನಿಮಾ ಬಿಡುಗಡೆ ಇಲ್ಲ. ಬ್ಯಾಕ್ ಟು ಬ್ಯಾಕ್ ರಜೆ ಇರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಅಂತಾ ಗಾಂಧಿನಗರದ ಸಿನಿ ಪಂಡಿತರು ಹೇಳುತ್ತಿದ್ದಾರೆ.
ದರ್ಶನ್ ಸಿನಿಮಾದ ಕ್ರೇಜ್ ಹೀಗೆಯೇ ಇದ್ರೆ ವಾರಾಂತ್ಯಕ್ಕೆ 25 ರಿಂದ 30 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಸಾಧ್ಯತೆಗಳಿವೆ.ನೋಡಿ ರಾಬರ್ಟ್ ಚಿತ್ರದ ಬಳಿಕ ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಜೊತೆಯಾಗಿ ಮಾಡಿದ ಕಾಟೇರ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಸಿನಿ ಪ್ರೇಕ್ಷಕರು ಈ ವಿಭಿನ್ನ ಕಥೆಗೆ ಫಿದಾ ಆಗಿದ್ದಾರೆ. ದರ್ಶನ್ ಸಿನಿ ಪಯಣದಲ್ಲಿ ವಿಶೇಷ ಚಿತ್ರವಾಗಿ ಕಾಟೇರ ಹೊರಹೊಮ್ಮಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.