ತೆಲುಗು ನಟನ ಜೊತೆ ಹಸೆಮಣೆಯೇರಲಿದ್ದಾರಾ ಕನ್ನಡದ ನಟಿ ಅನುಪಮಾ ಪರಮೇಶ್ವರನ್, ಶೀಘ್ರದಲ್ಲೇ ಡೇಟ್ ಫಿಕ್ಸ್

 | 
ರಪಬ

ಮುದ್ದು ಮುಖದ ಚಲುವೆ ಪ್ರೇಮಂ ಚಿತ್ರದ ಮೂಲಕ ಗಮನ ಸೆಳೆದ ನಟಿ ಅನುಪಮಾ ಪರಮೇಶ್ವರನ್ ಈಗ ಮತ್ತೊಮ್ಮೆ ಮದುವೆ ವಿಚಾರವಾಗಿ ಸುದ್ದಿಯಾಗಿದ್ದಾರೆ. ತೆಲುಗಿನ ನಟ ರಾಮ್ ಪೋತಿನೇನಿ ಜೊತೆ ಅನುಪಮಾ ಮದುವೆ ಆಗಲಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಸು ಗುಸು ಶುರುವಾಗಿದೆ.

ಕಳೆದ ಬಾರಿ ಕ್ರಿಕೆಟರ್ ಜಸ್ಟ್ರಿತ್ ಬುಮ್ರಾ ಜೊತೆ ಅನುಪಮಾ ಮದುವೆ ಎಂದು ಸುದ್ದಿಯಾಗಿತ್ತು. ಬಳಿಕ ಈ ಸುದ್ದಿ ಸುಳ್ಳು ಎಂದು ನಟಿ ಸ್ಪಷ್ಟನೆ ನೀಡಿದ್ದರು. ಈಗ ತೆಲುಗು ಹೀರೋ ರಾಮ್ ಪೋತಿನೇನಿ ಜೊತೆ ನಟಿ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

2018ರಲ್ಲಿ ಹಲೋ ಗುರು ಪ್ರೇಮ ಕೋಸಮೆ ಎಂಬ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದರು. ಶೂಟಿಂಗ್‌ ಸಂದರ್ಭದಲ್ಲಿ ಅನುಪಮಾ- ರಾಮ್‌ಗೆ ಪ್ರೇಮಾಂಕುರವಾಗಿದ್ದು, ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.

ಎರಡು ಕುಟುಂಬದ ಗುರುಹಿರಿಯರು ಕೂಡ ಮದುವೆಗೆ ಸಮ್ಮತಿ ಸೂಚಿಸಿದ್ದು, ಮದುವೆಗೆ ಸಕಲ ತಯಾರಿ ನಡೆಯುತ್ತಿದೆ ಎಂಬುದು ಲೇಟೆಸ್ಟ್ ನ್ಯೂಸ್. ಒಂದು ಈ ಸುದ್ದಿ ನಿಜವೇ ಆಗಿದ್ದಲ್ಲಿ, ರಾಮ್- ಅನುಪಮಾ ಫ್ಯಾನ್ಸ್‌ಗೆ ಖುಷಿ ಪಡುವ ಸುದ್ದಿಯಾಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.