ಪ್ರೇಮಿಗಾಗಿ ತನ್ನ ರ ಕ್ತದಲ್ಲಿ ಲವ್‌ಲೆಟರ್ ಬರೆದ ಕನ್ನಡದ ಸೀರಿಯಲ್ ನಟಿ

 | 
Jd
ಲಕ್ಷ್ಮೀ ಬಾರಮ್ಮ ಸೇರಿದಂತೆ 50ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟಿಸಿ, ಸುಮಾರು ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರೊ ನಟಿ ಅನಿಕಾ ಸಿಂಧ್ಯ. ಯಾಹೂ, ಜೊತೆಜೊತೆಯಲಿ, ನೆನಪಿರಲಿ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ್ದರೂ, ನನ್ನಂಥವಳಿಗೆ ಸಿನಿಮಾ ಇಂಡಸ್ಟ್ರಿ ಉಸಾಬರಿಯೇ ಬೇಡ ಎಂದುಕೊಂಡು ಸಿನಿಮಾದಿಂದ ಹೊರಕ್ಕೆ ಬಂದು ಸೀರಿಯಲ್​ಗಳಲ್ಲಿಯೇ ಮಿಂಚುತ್ತಿರುವ ಅನಿಕಾ ಅವರು ಸೀರಿಯಲ್​ ಪ್ರೇಮಿಗಳ ಫೆವರೆಟ್​ ವಿಲನ್​ ಕೂಡ ಹೌದು. 
ಏಕೆಂದರೆ ಈಗ ನಟಿಸಿರುವ ಹಲವಾರು ಸೀರಿಯಲ್​ಗಳಲ್ಲಿ ಇವರದ್ದು ನೆಗೆಟಿವ್​ ರೋಲ್​ಗಳೇ. ಒಂದು ನೆಗೆಟಿವ್​ ರೋಲ್​ ಹಿಟ್​ ಆಯಿತು ಎಂದಾಕ್ಷಣ ಸಹಜವಾಗಿ ಅದೇ ರೋಲ್​ಗಳು ನಟ-ನಟಿಯರನ್ನು ಹುಡುಕಿ ಬರುವುದು ಇದೆ. ಅವರಿಗೆ ಇಷ್ಟ ಇರಲಿ, ಇಲ್ಲದೇ ಇರಲಿ, ಇಂಥ ರೋಲ್​ ಮಾಡುವುದು ಅನಿವಾರ್ಯ ಎನ್ನುವ ಸನ್ನಿವೇಶವೂ ಎದುರಾಗಿಬಿಡುತ್ತದೆ. ಅಂಥವರಲ್ಲಿ ಒಬ್ಬರು ಅನಿಕಾ.
ಇದೀಗ ನಟಿ, ತಮ್ಮ ಜೀವನದ ಕರಾಳ ಘಟನೆಯನ್ನು ತೆರೆದಿಟ್ಟಿದ್ದಾರೆ. ರಾಜೇಶ್​ ಗೌಡ ಅವರ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಹೈಸ್ಕೂಲ್​ನಲ್ಲಿ ಇದ್ದಾಗಲೇ ಟೀಚರ್​ ಒಬ್ಬರು ತಮ್ಮನ್ನು ಪ್ರೀತಿಸಿ, ಲವ್​ ಪ್ರಪೋಸಲ್​ ಮಾಡಿರುವ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ರಕ್ತದಲ್ಲಿಯೇ ಲವ್​ ಲೆಟರ್​ ಕೊಟ್ಟು ಕೊಡಬಾರದ ತೊಂದರೆಯನ್ನು ಕೊಟ್ಟರು ಎಂದು ಹೇಳಿದ್ದಾರೆ. ಆಗ ನನಗೆ ಲವ್​-ಗಿವ್​ ಏನೂ ಗೊತ್ತಿರಲಿಲ್ಲ. ಪ್ರೀತಿ ಮಾಡಿದ್ದು ಅವರ ತಪ್ಪು ಅಂತ ಹೇಳಲ್ಲ. ಆದರೆ ಯಾರ ಜೊತೆ ಲವ್​  ಮಾಡ್ತೇನೆ ಎಂದು ನೋಡಬೇಕಿತ್ತು. ಇದು ದೊಡ್ಡ ಸುದ್ದಿಯಾಗಿ ಅವರನ್ನು ಶಾಲೆಯಿಂದ ಸಸ್ಪೆಂಡ್​  ಮಾಡಿದರು. 
ಬಳಿಕ ಅವರು ನನಗೆ ತುಂಬಾ ಟಾರ್ಚರ್​ ಕೊಟ್ಟರು. ಈ ವಿಷಯ ತಿಳಿಯುತ್ತಿದ್ದಂತೆಯೇ, ಕೆಲವು ಹುಡುಗರು ನನ್ನನ್ನು ಹಿಂಬಾಲಿಸಿ ಬಂದರು. ಒಬ್ಬ ಸಿಕ್ಕಾಪಟ್ಟೆ ತೊಂದರೆ ಕೊಟ್ಟ. ಅವನ ವಿರುದ್ಧ ಪೊಲೀಸ್​ ಕಂಪ್ಲೇಂಟ್​ ಕೊಟ್ಟಾಗ ಪೊಲೀಸರು ಆತನನ್ನು ವಿಪರೀತ ಹೊಡೆದು ಬಿಟ್ಟರು, ಬಾಯಲ್ಲೆಲ್ಲಾ  ರಕ್ತ ಬಂದಿತು. ನನಗೆ ತುಂಬಾ ಭಯ ಆಯಿತು ಎಂದಿದ್ದಾರೆ.ಇದು ನಡೆಯುತ್ತಿರುವಾಗಲೇ ಪರಿಚಯದವರೊಬ್ಬರಿಂದ ಮದುವೆ ಪ್ರಪೋಸಲ್​ ಬಂದಿತು. ನನಗೆ ಆಗ ಇವೆಲ್ಲಾ ಘಟನೆಗಳಿಂದ ಲವ್​ ಪ್ರಪೋಸಲ್​ ಎಂದರೆ ಭಯ ಹುಟ್ಟಲು ಶುರುವಾಗಿತ್ತು. 
ಇಷ್ಟು ಬೇಗ ಮದುವೆ ಆಗಲ್ಲ ಎಂದುಬಿಟ್ಟೆ. ಕೊನೆಗೆ ಆತ ನನ್ನನ್ನು ಕಿಡ್​ನ್ಯಾಪ್​ ಮಾಡಿ ಆ್ಯಸಿಡ್​ ಹಾಕಲು ಪ್ಲ್ಯಾನ್​ ಮಾಡಿರುವ ವಿಷಯ ಅಜ್ಜಿಯಿಂದ ಗೊತ್ತಾಯ್ತು. ನನ್ನ ಬಾಲ್ಯ ಹೈಸ್ಕೂಲ್​ ಟೀಚರ್​ನಿಂದ ಭಯದಲ್ಲಿಯೇ ಕಳೆದ್ರೆ, ಕಾಲೇಜಿನಲ್ಲಿ ಇರುವಾಗ ಇವೆಲ್ಲಾ ಆಗಿ ಲೈಫ್​ ಹಾಳಾಗೋಯ್ತು. ಕೊನೆಗೆ ಅದೇ ಭಯದಲ್ಲಿ ಮನೆಯನ್ನೇ ಬಿಟ್ಟು ಬೇರೆ ಕಡೆ ಶಿಫ್ಟ್​ ಮಾಡಿಬಿಟ್ವಿ. ಅಲ್ಲಿ ಅಚಾನಕ್​ ಆಗಿ ಕಿರುತೆರೆಗೆ ಅವಕಾಶ ಸಿಕ್ಕಿತು ಎಂದು ನಟಿ ಹೇಳಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.