ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಕನ್ನಡದ ಸ್ಟಾರ್ ಕಾಮಿಡಿ ನಟ ಎಸ್ಕೇಪ್
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡದ ಸ್ಟಾರ್ ಕಾಮಿಡಿ ನಟ ಚಂದ್ರಪ್ರಭಾ ಅವರು ನಿನ್ನೆರಾತ್ರಿ ತಮ್ಮ i20 ಕಾರಿನಲ್ಲಿ ಮೂಡಿಗೆರೆ ಬಳಿ ಪ್ರಯಾಣಿಸುತ್ತಿದ್ದಾಗ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಇವತ್ತು ಬೆಳಕಿಗೆ ಬಂದಿದೆ.
ಹೌದು, ಕನ್ನಡದ ಸ್ಟಾರ್ ಕಾಮಿಡಿ ನಟ ಚಂದ್ರಪ್ರಭಾ ಅವರ ಕಾರು ನಿನ್ನೆ ತಡರಾತ್ರಿ ಮೂಡಿಗೆರೆ ಬಳಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ದೊಡ್ಡ ಮಟ್ಟದ ಗಾಯಗಳಾಗಿವೆ. ಆದರೆ ಕಾರು ಡಿಕ್ಕಿಯಾದ ತಕ್ಷಣ ಚಂದ್ರಪ್ರಭಾ ಅವರು ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ವೈರಲ್ ಆಗುತ್ತಿದೆ.
ಆದರೆ ಇವತ್ತು ಬೆಳಗ್ಗೆ ನಟ ಚಂದ್ರಪ್ರಭಾ ಅವರು ಲೈವ್ ಬಂದು ಈ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ. ನಿನ್ನೆ ರಾತ್ರಿ ಅಪಘಾತವಾದಾಗ ಬೈಕ್ ಸವಾರನ ಬಳಿ ಚಂದ್ರಪ್ರಭಾ ಅವರು ಬಂದಿದ್ದರು. ಈ ವೇಳೆ ಬೈಕ್ ಸವಾರ ಸಿಕ್ಕಪಟ್ಟೆ ಎಣ್ಣೆ ಕುಡಿದಿದ್ದ ಪರಿಣಾಮ ಚಂದ್ರಪ್ರಭಾ ಅವರು ಅಲ್ಲಿಂದ ಹೊರಟು ಹೋಗಿದ್ದರು.
ಆದರೆ ಮರುದಿನ ಬೆಳಗ್ಗೆ ಚಂದ್ರಪ್ರಭಾ ಅವರ ಮೇಲೆ ಪೊಲೀಸ್ ಕೇಸ್ ದಾಖಲಾಗಿತ್ತು. ನಂತರದಲ್ಲಿ ಠಾಣೆಗೆ ಭೇಟಿ ಕೊಟ್ಟ ಚಂದ್ರಪ್ರಭಾ ಅವರು ನಿನ್ನೆ ನಡೆದ ಘಟನೆ ಬಗ್ಗೆ ಪೊಲೀಸರಿಗೆ ಸ್ಪಷ್ಟತೆ ನೀಡಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.