ಪ್ರಭಾಕರ್ ಮಗಳ ಮದುವೆಯಲ್ಲಿ ಮಿಂಚಿದ ಕನ್ನಡ ತಾರೆಯರು, ಕೋಟಿ ವೆಚ್ಚದಲ್ಲಿ ಮೆಹೆಂದಿ ಶಾಸ್ತ್ರ

 | 
ರ
ಕನ್ನಡದ ಹಿರಿಯ ನಟಿ, ರಾಜಕಾರಣಿ ಜಯಮಾಲಾ ಅವರ ಪುತ್ರಿ ಸ್ಯಾಂಡಲ್‌ವುಡ್‌ ನಟಿ ಸೌಂದರ್ಯ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಡಾ ಜಯಮಾಲಾ - ಹೆಚ್ ಎಂ ರಾಮಚಂದ್ರ ದಂಪತಿಯ ಪುತ್ರಿ ಸೌಂದರ್ಯ ವಿವಾಹ ಮಹೋತ್ಸವ ಇಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನೆರವೇರಿದೆ. ರುಷಭ್ ಎಂಬುವರೊಂದಿಗೆ ಸೌಂದರ್ಯ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಸೌಂದರ್ಯ - ರುಷಭ್‌ ಅದ್ಧೂರಿ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ ತಾರೆಯರು ಸಾಕ್ಷಿಯಾಗಿದ್ದರು. ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್‌ ಯಶ್, ಗೋಲ್ಡನ್ ಸ್ಟಾರ್‌ ಗಣೇಶ್‌, ರಮೇಶ್ ಅರವಿಂದ್ ಸೇರಿದಂತೆ ಸ್ಯಾಂಡಲ್ ವುಡ್‌ನ ಅನೇಕ ಕಲಾವಿದರು, ತಂತ್ರಜ್ಞರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರು, ನಿರ್ದೇಶಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ಸೌಂದರ್ಯ - ರುಷಭ್‌ಗೆ ಶುಭ ಕೋರಿದರು. 
ಈಗಾಗಲೇ ಜಯಮಾಲಾ ಮಗಳ ಹಳದಿ ಶಾಸ್ತ್ರವು ಬೆಂಗಳೂರಿನ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆದಿದೆ. ಹಳದಿ ಶಾಸ್ತ್ರವನ್ನು ಈ ಅದ್ದೂರಿಯಾಗಿ ಮಾಡಲಾಗಿತ್ತು. ಎಲ್ಲೆಲ್ಲೂ ಹಳದಿ ಬಣ್ಣದ ಹೂಗಳಿಂದ ಸಿಂಗಾರ ಮಾಡಲಾಗಿತ್ತು.ಇನ್ನು ನಟಿ ಶ್ರುತಿ, ಮಾಳವಿಕಾ ಅವಿನಾಶ್‌, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್‌, ಗಿರಿಜಾ ಲೋಕೇಶ್‌, ಹರ್ಷಿಕಾ ಪೂಣಚ್ಛ, ಅನು ಪ್ರಭಾಕರ್‌, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್‌, ಹೇಮಾ ಚೌಧರಿ, ಸುಧಾ ನರಸಿಂಹರಾಜು ಮುಂತಾದ ಹಿರಿಯ ನಟಿಯರು ಭಾಗವಹಿಸಿದ್ದರು.
ಸೌಂದರ್ಯ ಜಯಮಾಲಾ ಮತ್ತು ರುಷಭ್ ಅವರ ಮದುವೆ ಎಲ್ಲ ಶಾಸ್ತ್ರಗಳೊಂದಿಗೇನೆ ಆಗಿದೆ. ಈ ಒಂದು ಮದುವೆಗೆ ಕಿಚ್ಚ ಸುದೀಪ್ ದಂಪತಿ ಸಾಕ್ಷಿ ಆಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಕೂಡ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.ಇವತ್ತು ಶುಭದಿನ, ಪವಿತ್ರ ಮತ್ತು ಶುಭಲಗ್ನಕ್ಕೆ ಅತ್ಯಂತ ಪ್ರಶಸ್ತವಾದ ದಿನವಾಗಿರುವುದರಿಂದ ಬಹಳಷ್ಟು ಮದುವೆಗಳು ನಡೆಯುತ್ತಿವೆ, ಹಾಗಾಗಿ ಜಯಮಾಲಾ ಅವರ ಕುಟುಂಬ, ಸುರೇಶ್, ವಿಶ್ವನಾಥ್ ಹಾಗೂ ಇಬ್ಬರು ರಾಮಚಂದ್ರಗಳಿಗೆ ಶುಭ ಹಾರೈಸೋಣ ಅಂತ ಪತ್ನಿಯೊಂದಿಗೆ ಬಂದಿರುವೆ ಎಂದು ಮದುವೆಗೆ ಬಂದಿದ್ದ ಡಿಕೆ ಶಿವಕುಮಾರ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.