ನಿದ್ದೆಯಲ್ಲಿದ್ದ ಮಂಗಳೂರು ಜನರನ್ನು ಬಡಿದೆಬ್ಬಿಸಿದ ಕನ್ನಡದ ಯೂಟ್ಯೂಬರ್;

 | 
H
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ನಡೆಯುತ್ತಿದ್ದು, ಅನೇಕ ಕಡೆಗಳಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಯಲ್ಲಿ ಒಂದಲ್ಲೊಂದು ಯಡವಟ್ಟುಗಳು ಬೆಳಕಿಗೆ ಬರುತ್ತಿದೆ. ಹೀಗಾಗಿ ಜಿಲ್ಲೆಯ ಜನರು ಅಧಿಕಾರಿಗಳಿಂದ ಹಿಡಿದು ಯೋಜನೆ ರೂಪಿಸಿದ ಮಹಾಜ್ಞಾನಿಗಳಿಗೆ ಬಗೆಬಗೆಯಾಗಿ ಮಂಗಳಾರತಿ ಮಾಡುತ್ತಿದ್ದಾರೆ. 
ಸ್ಮಾರ್ಟ್‌ ಸಿಟಿ ಯೋಜನೆ ಹೆಸರಲ್ಲಿ ಬುದ್ಧಿವಂತರ ಜಿಲ್ಲೆ ಎಂದು ಹೇಳಲ್ಪಡುವ ಜಿಲ್ಲೆಯ ಜನರನ್ನು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಮೂರ್ಖರನ್ನಾಗಿಸಲು ಹೊರಟಿದ್ದಾರೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ನಗರದ ಜೈಲ್‌ ರೋಡ್‌ನಲ್ಲಿಎಲೆಕ್ಟ್ರಿಕ್‌ ಕಂಬವನ್ನು ತೆರವು ಮಾಡದರೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದ್ದು, ಅಪಘಾತವನ್ನು ಆಹ್ವಾನಿಸುತ್ತಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿನೂರಾರು ವಾಹನಗಳು ಸಾಗುತ್ತಿದ್ದು, ಎಲೆಕ್ಟ್ರಿಕ್‌ ಕಂಬವನ್ನು ತಪ್ಪಿಸಿಕೊಂಡು ಸಾಗಬೇಕಿದೆ.
ನಗರದ ಪಿವಿಎಸ್‌ ಜಂಕ್ಷನ್‌ ಸಮೀಪ ಎಲೆಕ್ಟ್ರಿಕ್‌ ಕಂಬಳ ತೆರವುಗೊಳಿಸದೆ ಫುಟ್‌ಪಾತ್‌ ಕಾಮಗಾರಿ ನಡೆಸಲಾಗಿದೆ. ಈ ಫುಟ್‌ಪಾತ್‌ ಮಧ್ಯೆಯೇ ಎಲೆಕ್ಟ್ರಿಕ್‌ ಕಂಬವಿರುವ ಕಾರಣ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ ಮತ್ತು ಮಳೆಗಾಲದಲ್ಲಿಅಪಾಯವನ್ನು ಅಲ್ಲಗಳೆಯುವಂತಿಲ್ಲ
ಇನ್ನು ಕೆಲವರಂತೂ ಅಲ್ಲಲ್ಲೇ ಮಲಗುತ್ತಾರೆ. ಕುಡಿದು ಬಂದು ಅಲ್ಲಿಯೇ ಮಲಗಿ ಕಾಲ ಕಳೆಯುತ್ತಾರೆ. ಅವರನ್ನು ಕೇಳುವವರಿಲ್ಲ. ಹೇಳುವವರಿಲ್ಲ. ಇತ್ತೀಚಿಗೆ ಯೂಟ್ಯೂಬ್ ಒಂದರಲ್ಲಿ ಈ ಎಲ್ಲಾ ಅವ್ಯವಸ್ಥೆಗಳನ್ನು ತೋರಿಸಿಲಾಗಿದೆ. ಇನ್ನು ಈ ವಿಡಿಯೋಗೆ ಅತಿ ಹೆಚ್ಚು ವೀಕ್ಷಣೆ ಕೂಡ ದೊರೆತಿದ್ದು ಕಾಟಾಚಾರಕ್ಕೆ ಮಾಡಬೇಡಿ ಎಂದು ಕೂಡಾ ಅಧಿಕಾರಿಗಳಿಗೆ ಜನ ಸಾಮಾನ್ಯರು ಬೈದು ಬುದ್ಧಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.