ಇಷ್ಟು ಮುದ್ದಾಗಿರುವ ಶ್ರುತಿ ಮಗಳ ವಯಸ್ಸು ಕೇಳಿ ಅಚ್ಚರಿಗೊಂಡ ಕನ್ನಡಿಗರು
ಕನ್ನಡ ಚಿತ್ರರಂಗದ ಅದ್ಭುತ ನಟಿ ಶ್ರುತಿ ಕೃಷ್ಣ ತಮ್ಮ ಮುದ್ದಿನ ಮಗಳನ್ನು ಬಣ್ಣದ ಪ್ರಪಂಚಕ್ಕೆ ಕರೆ ತರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಒಂದೆರಡು ತಿಂಗಳ ಹಿಂದೆ ನನ್ನ ಮಗಳು ಗೌರಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವುದರ ಬಗ್ಗೆ ಹೇಳಿದ್ದರು. ಅದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ ಎಂದು ಶ್ರುತಿ ಹೇಳಿದ್ದಾರೆ.
ಇನ್ನು ತಯಾರಿ ಇಲ್ಲದೆ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಡಬಾರದು ಎಂದು ಈಗಾಗಲೆ ಎಲ್ಲಾ ರೀತಿ ಟ್ರೈನಿಂಗ್‌ಗಳನ್ನು ನೀಡುತ್ತಿದ್ದಾರಂತೆ. ಅಲ್ಲದೆ ಈಗಾಗಲೆ ಸಾಕಷ್ಟು ನಿರ್ದೇಶಕರು ಕಥೆಗಳೊಂದಿಗೆ ಸಂಪರ್ಕ ಮಾಡಿದ್ದಾರೆ ಆದರೆ ತಯಾರಿ ಇಲ್ಲದೆ ಸಿನಿಮಾ ಮಾಡುವುದು ಸರಿ ಅಲ್ಲ ಎನ್ನುತ್ತಾರೆ ಶ್ರುತಿ. ಮಗಳನ್ನು ತಮ್ಮ ಬ್ಯಾನರ್‌ನಲ್ಲಿ ಲಾಂಚ್ ಮಾಡುವುದಿಲ್ಲವಂತೆ. ಮತ್ತೊಬ್ಬರ ಬ್ಯಾನರ್ ಮೂಲಕವೇ ಮಗಳು ಮೊದಲ ಸಿನಿಮಾ ಮಾಡಬೇಕು ಎನ್ನುತ್ತಾರೆ.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಗೌರಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಸುಮಾರು 110ಕ್ಕೂ ಹೆಚ್ಚು ಪೋಸ್ಟ್ ಹಾಕಿದ್ದಾರೆ. ಇನ್ನು ಗೌರಿಗೆ ಹಾಡುವುದು ತುಂಬಾನೇ ಇಷ್ಟ. ಟ್ರೆಂಡ್‌ನಲ್ಲಿರುವ ಹಾಡುಗಳನ್ನು ಹಾಡಿ ಅಪ್ಲೋಡ್ ಮಾಡುತ್ತಾರೆ. ಕೆಲವೊಮ್ಮೆ ಫಾಲೋವರ್ಸ್ ಬೇಡಿಕೆ ಇಟ್ಟು ಹಾಡಿಸುತ್ತಾರೆ.
ನಟಿ ಶ್ರುತಿ ಮಗಳು ಗೌರಿ ಸದ್ಯ ಡಿಗ್ರಿ ಶಿಕ್ಷಣ ಪಡೆಯುತ್ತಿದ್ದಾರೆ. ಸಂಗೀತದಲ್ಲಿ ಆಸಕ್ತಿ ಹೊಂದಿರುವ ಗೌರಿ ಅವರು ಆಗಾಗ ಹಾಡಿರುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಾರೆ. ಗೌರಿ ಅವರು ಇತ್ತೀಚೆಗೆ ತಾಯಿ ಶ್ರುತಿ ಜೊತೆಗೆ ಚಿತ್ರರಂಗದ ಕಾರ್ಯಕ್ರಮಗಳಿಗೆ ಹಾಜರಿ ಹಾಕುತ್ತಿರುತ್ತಾರೆ.
ಸದ್ಯ ಗಾಯನದಲ್ಲಿ ಆಸಕ್ತಿ ಹೊಂದಿರುವ ಗೌರಿ ನಟಿಯಾಗುತ್ತಾರಾ ಅಂತ ಕಾದು ನೋಡಬೇಕಿದೆ. ಇನ್ನು ಅವರು ಶಿಕ್ಷಣದಲ್ಲಿ ಕೂಡ ಮುಂದಿದ್ದಾರಂತೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.