ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಕರೀನಾ ಕಪೂರ್, ಕನ್ನಡದ ನಟಿಯರಿಗೆ ಅವಕಾಶ ನೀಡದ ರಾಕಿ ಬಾಯ್

 | 
ಕ್
ಕೆಜಿಎಫ್‌ ಸಿನಿಮಾದ ಮೂಲಕ ದೇಶವಿದೇಶಗಳಲ್ಲಿ ಅಭಿಮಾನಿಗಳನ್ನು ಗಳಿಸಿರುವ ಸ್ಯಾಂಡಲ್‌ವುಡ್‌ ನಟ ಯಶ್‌ ಅವರ ಮುಂಬರುವ ಟಾಕ್ಸಿಕ್‌ ಸಿನಿಮಾದ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ. ಕೆಜಿಎಫ್‌ ಬಳಿಕದ ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಹೊರತುಪಡಿಸಿ ಬೇರೆ ಯಾವ ಕಲಾವಿದರು ನಟಿಸಲಿದ್ದಾರೆ ಎಂಬ ಕುರಿತು ವಿವರ ಲಭ್ಯವಿಲ್ಲ. ಆದರೆ, ಈ ಸಿನಿಮಾದಲ್ಲಿ ಬಾಲಿವುಡ್‌ನ ಸ್ಟಾರ್‌ ನಟಿಯೊಬ್ಬರು ನಟಿಸಲಿದ್ದಾರೆ ಎಂದು ವದಂತಿಗಳು ಇದ್ದವು. 
ಇದೀಗ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ನ ಕರೀನಾ ಕಪೂರ್‌ ನಟಿಸಲಿದ್ದಾರೆ ಎಂದು ಸುದ್ದಿಯಾಗಿದೆ. ಮಲಯಳ ಚಿತ್ರರಂಗದ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಜತೆ ಯಶ್‌ ತನ್ನ ಮುಂದಿನ ಪ್ರಾಜೆಕ್ಟ್‌ ನಡೆಸುತ್ತಿದ್ದಾರೆ. ಟಾಕ್ಸಿಕ್‌ ಸಿನಿಮಾ ಟೈಟಲ್‌ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಈ ಚಿತ್ರದಲ್ಲಿ ಕರೀನಾ ಕಪೂರ್‌ ನಟಿಸಲಿದ್ದಾರೆ ಎಂದು ಸುದ್ದಿಯಾಗಿದೆ. ನಮ್ಮ ಮೂಲಗಳ ಪ್ರಕಾರ ಕರೀನಾ ಕಪೂರ್‌ ಅವರು ಯಶ್‌ ನಟನೆಯ ಟಾಕ್ಸಿಕ್‌ ತಂಡ ಸೇರಲಿದ್ದಾರೆ. 
ಈ ಚಿತ್ರದ ಮೂಲಕ ಕರೀನಾ ಕಪೂರ್‌ ಕೆಜಿಎಫ್‌ ನಟನ ಜತೆ ಮೊದಲ ಸಿನಿಮಾ ಮಾಡಲಿದ್ದಾರೆ. ಈ ಕುರಿತು ಸಿನಿಮಾ ತಂಡ ಇನ್ನು ಅಧಿಕೃತವಾಗಿ ಘೋಷನೇ ಮಾಡಲಿಲ್ಲ. ಈ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. ತನ್ನ ಟೈಟಲ್ ಮೂಲಕವೇ ಗಮನ ಸೆಳೆದಿರುವ ಯಶ್ ಸಿನಿಮಾ 'ಟಾಕ್ಸಿಕ್'. ಹೀಗಿದ್ದಾಗಲೇ ಅಬ್ಬರದಿಂದ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಸುತ್ತಿದ್ದಾರೆ ನಟ ಯಶ್ ಅವರು. 
ಇದಕ್ಕಾಗಿ ಅಂತಾ ಹುಟ್ಟುಹಬ್ಬದ ಆಚರಣೆ ಸಮಯದಲ್ಲೂ, ಅಭಿಮಾನಿಗಳಿಂದ ದೂರ ಉಳಿದಿದ್ದಾರೆ ನಟ ಯಶ್. ಇಷ್ಟೆಲ್ಲದರ ನಡುವೆ ಬೆಳಗ್ಗೆಯೇ 'ಕೆವಿಎನ್' ಸಂಸ್ಥೆ ಯಶ್ ಬರ್ತ್ ಡೇಗಾಗಿ ವಿಶೇಷ ವಿಡಿಯೋ ರಿಲೀಸ್ ಮಾಡಿತ್ತು. ಈ ವಿಡಿಯೋದಲ್ಲಿ ಟಾಕ್ಸಿಕ್ ಅವತಾರದಲ್ಲಿ ನಟ ಯಶ್ ಮಿಂಚಿದ್ದಾರೆ. ಆದರೆ ಬೇಸರದ ಸಂಗತಿ ಏನೆಂದರೆ ಅದರಲ್ಲಿ ಕನ್ನಡಿಗರೇ ಕಡಿಮೆ. ಇನ್ನು ನಟ ಯಶ್ ಒಂದು ಸಿನಿಮಾಗಿಂತ ಮತ್ತೊಂದು ಸಿನಿಮಾವನ್ನು ಅತ್ಯಂತ ವಿಭಿನ್ನವಾಗಿ & ಕಲರ್ ಫುಲ್ ಆಗಿ ಮಾಡ್ತಾರೆ. 
ಹೀಗಾಗಿ, ಮುಂದಿನ ಸಿನಿಮಾಗೆ ಸಾಕಷ್ಟು ಸಮಯ ತೆಗೆದುಕೊಂಡು 19ನೇ ಸಿನಿಮಾ ಟೈಟಲ್‌ಗೆ ಟಾಕ್ಸಿಕ್ ಎಂದು ಹೆಸರು ಇಟ್ಟಿದ್ದಾರೆ. ಈ ಮೂಲಕವೇ ಗೋವಾ ಡ್ರಗ್ಸ್ ಲೋಕದ 1960-70ರ ಕಥೆ ಹೇಳಲು ಯಶ್ ಹೊರಟಿದ್ದಾರೆ ಅಂತಾ ಹೇಳಲಾಗಿದೆ. ಹೀಗೆ ಕನ್ನಡಕ್ಕೆ ಈ ಸಿನಿಮಾ ಇಂಡಸ್ಟ್ರಿ ಮುಂದೆ, ಹಾಲಿವುಡ್ ಅಂಗಳದಲ್ಲೂ ಮಿಂಚುತ್ತಾ? ಅನ್ನೋ ಕುತೂಹಲ ಕೂಡ ಡಬಲ್ ಆಗಿದೆ. ಯಾವುದಕ್ಕೂ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.