ಸೈಫ್ ಅಲಿ ಖಾನ್ ಮೂರು ದಿನ ಆಸ್ಪತ್ರೆ ಬಿಲ್ ಕೇಳಿ ಕರೀನಾ ಕಪೂರ್ ಶಾ ಕ್
Jan 20, 2025, 16:15 IST
|

ಜನವರಿ 16ರಂದು ಸೈಫ್ ಅಲಿ ಖಾನ್ ಅವರು ಆಸ್ಪತ್ರೆ ಸೇರಿದರು. ಅವರನ್ನು ರಿಕ್ಷಾ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಮಗನಾದ ಇಬ್ರಾಹಿಮ್ ಅವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ಬಳಿಕ ಅವರಿಗೆ ವೈದ್ಯರು ಸರ್ಜರಿ ಮಾಡಿದ್ದಾರೆ. ಸೈಫ್ ಬೆನ್ನಿನ ಭಾಗದಲ್ಲಿ ಹೊಕ್ಕಿದ್ದ ಚಾಕುವಿನ ಚೂರನ್ನು ತೆಗೆಯಲಾಗಿದೆ. ಸೈಫ್ ಅಲಿ ಖಾನ್ ಅವರ ಆಸ್ಪತ್ರೆ ಬಿಲ್ 35.95 ಲಕ್ಷ ರೂಪಾಯಿ ಖರ್ಚಾಗಿದೆ. ಇನ್ಸೂರೆನ್ಸ್ ಕಂಪನಿ ಕಡೆಯಿಂದ 25 ಲಕ್ಷ ರೂಪಾಯಿ ಸಿಕ್ಕಿದೆ ಎಂದು ವರದಿ ಆಗಿದೆ.
ಗುರುವಾರ ಮುಂಜಾನೆ 2.30 ಸುಮಾರಿಗೆ ವ್ಯಕ್ತಿಯೋರ್ವ ಸೈಫ್ ಮನೆಗೆ ನುಗ್ಗಿದ್ದ. ಮನೆ ಕೆಲಸದವಳ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಗಲಾಟೆ ಕೇಳಿ ಬಂದ ಸೈಫ್ ಅಲಿ ಖಾನ್ ಅವರ ಮೇಲೆ ಈತ ಹಲ್ಲೆ ಮಾಡಿದ್ದಾನೆ. ಆರು ಕಡೆಗಳಲ್ಲಿ ಸೈಫ್ ಮೇಲೆ ದಾಳಿ ನಡೆದಿದೆ. ಈಗ ಅವರು ಡೇಂಜರ್ಜೋನ್ನಿಂದ ಹೊರ ಬಂದಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಇನ್ಸೂರೆನ್ಸ್ ಕಂಪನಿಯ ಸ್ಟೇಟ್ಮೆಂಟ್ ಇದೆ. ‘ನಿವಾ ಬುಪಾ ಹೆಲ್ತ್ ಇನ್ಸೂರೆನ್ಸ್’ ಪಡೆದಿದ್ದಾರೆ. ಸೈಫ್ ಅವರ ಆಸ್ಪತ್ರೆ ಬಿಲ್ 35.91 ಲಕ್ಷ ರೂಪಾಯಿ. ಇನ್ಸೂರೆನ್ಸ್ ಕಂಪನಿಯಿಂದ 25 ಲಕ್ಷ ಅಪ್ರೂವ್ ಸಿಕ್ಕಿದೆ ಎನ್ನಲಾಗಿದೆ. ಡಾಕ್ಯುಮೆಂಟ್ನಲ್ಲಿ ಅವರ ಮೆಂಬರ್ ಐಡಿ, ರೂಂ ಕ್ಯಾಟೆಗರಿ ಇತ್ಯಾದಿ ವಿಚಾರಗಳನ್ನು ಉಲ್ಲೇಖಿಸಲಾಗಿದೆ.
ಇದೂ ಅಲ್ಲದೆ, ಅವರು ಜನವರಿ 21ರಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂಬುದು ಕೂಡ ಉಲ್ಲೇಖ ಆಗಿದೆ. ಆದರೆ, ಇದು ಆಸ್ಪತ್ರೆಯ ಬಿಲ್ ಹೌದೋ ಅಲ್ಲವೋ ಎಂಬುದು ಖಚಿತವಾಗಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,13 Mar 2025