ಗಗನಕ್ಕೇರಿದ ಕರ್ಣಾ ಸೀರಿಯಲ್ ಟಿಆರ್.ಪಿ, ಇತಿಹಾಸದಲ್ಲೇ ಇದು ಮೊದಲು ಎಂದ ನಿರ್ಮಾಪಕ
Jul 12, 2025, 17:19 IST
|

ಝೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಜೂನ್ 16ರಂದು ರಾತ್ರಿ 8 ಗಂಟೆಗೆ ಪ್ರಸಾರ ಕಾಣಬೇಕಿತ್ತು. ಆದರೆ ʼಕರ್ಣʼ ಧಾರಾವಾಹಿಯ ಪ್ರಸಾರವನ್ನು ಕೊನೇ ಕ್ಷಣದಲ್ಲಿ ಏಕಾಏಕಿ ರದ್ದು ಮಾಡಲಾಗಿತ್ತು. ಈ ಧಾರಾವಾಹಿ ಸದ್ಯಕ್ಕೆ ಟೆಲಿಕಾಸ್ಟ್ ಆಗುವುದಿಲ್ಲ, ಆದರೆ ಮುಂದೆ ರಾತ್ರಿ 8 ಗಂಟೆಗೆ ಪ್ರಸಾರ ಆಗುವುದು ಖಚಿತ ಎಂಬ ಮಾಹಿತಿಯನ್ನು ವಾಹಿನಿ ನೀಡಿತ್ತು. ಆದಷ್ಟು ಬೇಗ ಪುನಃ ನಿಮ್ಮ ಮುಂದೆ ಬರುತ್ತೇವೆ ಎಂದು ಹೇಳಿತ್ತು. ಹೇಳಿದಂತೆ ಸರಿಯಾಗಿ ಈಗ ಧಾರಾವಾಹಿಯ ಪ್ರಸಾರದ ದಿನವನ್ನು ಝೀ ವಾಹಿನಿ ಖುಷಿಯಿಂದ ಘೋಷಿಸಿದೆ.
ಈ ಧಾರಾವಾಹಿಯಲ್ಲಿ ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ಝೀ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಚಾನೆಲ್ ಜತೆಗೆ ಭವ್ಯಾ ಗೌಡ ಅವರ ಅಗ್ರಿಮೆಂಟ್ ಆಗಿತ್ತು. ಅದರ ಪ್ರಕಾರ, ಕೆಲ ತಿಂಗಳ ಮಟ್ಟಿಗೆ ಭವ್ಯಾ ಗೌಡ ಬೇರೆ ಚಾನೆಲ್‌ಗಾಗಿ ಕೆಲಸ ಮಾಡುವಂತಿರಲಿಲ್ಲ. ಆದರೆ ಇವರು ಆ ಅಗ್ರಿಮೆಂಟ್ ಮುಗಿಯುವ ಮುನ್ನವೇ ʼಕರ್ಣʼ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದು ಉದ್ದೇಶಪೂರ್ವಕ ಅಲ್ಲದಿದ್ದರೂ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ತಪ್ಪಾಗಿತ್ತು.
ಈ ವಿವಾದದ ಬಳಿಕ ಭವ್ಯಾ ಸೈಲೆಂಟ್ ಆಗಿದ್ದರು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯಾವುದೇ ಫೋಟೊ ಅಥವಾ ವಿಡಿಯೊವನ್ನು ಹಂಚಿಕೊಂಡಿರಲಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಭವ್ಯಾ ಇನ್‌ಸ್ಟಾಗ್ರಾಂ ಸಖತ್ ಆ್ಯಕ್ಟಿವ್ ಆಗಿದ್ದರು. ಒಂದರ ಹಿಂದೆ ಒಂದರಂತೆ ಸ್ಟೋರಿ ಹಂಚಿಕೊಳ್ಳಲು ಆರಂಭಿಸಿದ್ದರು. ಮೊನ್ನೆಯಷ್ಟೇ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದರು. ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾದರು. ಅದಾದ್ಮೇಲೆ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಭವ್ಯಾ ಗೌಡ ಒಂದು ಸ್ಟೋರಿ ಹಂಚಿಕೊಂಡಿದ್ದರು. ಇದು ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿತ್ತು.
ಭವ್ಯಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ "ತುಳಿದ ಜಾಗದಲ್ಲಿ ಬೆಳೆದು ತೋರಿಸು" ಎಂದು ಬರೆದುಕೊಂಡಿದ್ದರು. ಹಾಗೇ ಮಣ್ಣಿನ ಮೇಲೆ ಇಟ್ಟ ಹೆಜ್ಜೆಯ ಗುರುತು, ಅದರ ಮೇಲೆ ಹುಟ್ಟಿದ ಸಸಿಯ ಫೋಟೊವನ್ನು ಹಂಚಿಕೊಂಡಿದ್ದರು. ಇದೀಗ ಝೀ ವಾಹಿನಿಯು ʼಕರ್ಣʼ ಧಾರಾವಾಹಿಯ ಪ್ರಸಾರ ದಿನ ಘೋಷಣೆ ಮಾಡಿದೆ. ಹಾಗಾಗಿ ಭವ್ಯಾ ಗೌಡ ಅಂತಿಮವಾಗಿ ಮೇಲುಗೈ ಸಾಧಿಸಿದಂತಾಗಿದೆ. ಇದು ಅವರ ಅಪಾರ ಅಭಿಮಾನಿಗಳಿಗೆ ಖುಷಿ ತಂದಿದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,27 Jul 2025