ಹಿಂದೂ ದೇವಾಲಯ ತಿರುಪತಿಗೆ ತುಪ್ಪಾ ನಿಷೇಧ ಮಾಡಿದ ಕರ್ನಾಟಕ ಸರ್ಕಾರ, ಇದರ ಹಿಂದಿನ ಉದ್ದೇಶ ಏನು ಗೊತ್ತಾ

 | 
Gg

ತಿರುಪತಿ ಎಂದರೆ ಮೊದಲು ನೆನಪಾಗುವುದು ಶ್ರೀನಿವಾಸ, ನಂತರ ನೆನಪಾಗುವುದು ಅದರ ಲಡ್ಡು. ಶ್ರೀ ವಾರಿ ಲಡ್ಡು ಎಂದೂ ಕರೆಯಲ್ಪಡುವ ಈ ಲಡ್ಡು ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಲಾಗುವ ಸಹಿ ಪ್ರಸಾದ ಸುಮಾರು 307 ವರ್ಷಗಳ ಇತಿಹಾಸವನ್ನು ಹೊಂದಿದೆ. 

ಈ ತಿರುಪತಿ ಲಡ್ಡು ಆರಂಭವಾಗಿದ್ದು ಹೇಗೆ? ಇದನ್ನು ಕೇವಲ ಟಿಟಿಡಿಯಲ್ಲಿ ಮಾತ್ರ ಏಕೆ ತಯಾರಿಸಲಾಗುತ್ತದೆ ತಿಳಿದುಕೊಳ್ಳೋಣ. ತಿರುಪತಿಯ ವೆಂಕಟೇಶ್ವರನ ದೇವಸ್ಥಾನದಲ್ಲಿ ಪ್ರಸಾದವಾಗಿ ವಿತರಿಸಲಾಗುವ ತಿರುಪತಿ ಲಡ್ಡುವನ್ನು ಮೊದಲ ಬಾರಿಗೆ ಆಗಸ್ಟ್ 2, 1715 ರಂದು ಪರಿಚಯಿಸಲಾಯಿತಂತೆ. ಕಡಲೆಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್​ ತಯಾರಿಸಲಾದ ಲಡ್ಡು ಪ್ರಪಂಚದ ಶ್ರೀಮಂತ ಹಿಂದೂ ದೇವಾಲಯದ ಭಾಗವಾಗಿದೆ. 

ಅಲ್ಲದೇ ಹೆಚ್ಚು ಬೇಡಿಕೆ ಇರುವ ಪ್ರಸಾದ ಸಹ ಎಂದು ಹೇಳಬಹುದು. ಸಾಮಾನ್ಯವಾಗಿ ಈ ಲಡ್ಡುಗೆ 50ರೂಪಾಯಿಗಳು, ದೊಡ್ಡ ಗಾತ್ರದ ಲಡ್ಡುಗೆ 200 ರೂ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ತಿಮ್ಮಪ್ಪನ ಸನ್ನಿಧಿಗೆ ಹೋದಾಗ, ದರ್ಶನದ ಬಳಿಕ ಲಡ್ಡು ಪಡೆದರೆ ಸಾರ್ಥಕ ಭಾವ ಮೂಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತಿಮ್ಮಪ್ಪನ ದರ್ಶನದ ಬಳಿಕ ಪ್ರಸಾದ ರೂಪದಲ್ಲಿ ಸಿಗುವ ಲಡ್ಡುಗೆ ಭಕ್ತಾಧಿಗಳು ಕ್ಯೂ ನಿಲ್ಲುತ್ತಾರೆ. 

ಈ ಲಡ್ಡು ವಿತರಿಸಲು ಸುಮಾರು 29ಕ್ಕೂ ಹೆಚ್ಚು ಕೌಂಟರ್​ಗಳಿದ್ದು ಪ್ರತಿದಿನವೂ ಭಕ್ತರಿಂದ ತುಂಬಿತುಳುಕುತ್ತಲೇ ಇರುತ್ತದೆ ಎನ್ನಬಹುದು.
ಸಾಮಾನ್ಯವಾಗಿ ಅಲ್ಲಿಗೆ ಹೋದವರು ಲಡ್ಡು ಪಡೆಯದೇ ಯಾರೂ ಕೂಡ ಮರಳಿ ಬರುವುದಿಲ್ಲ, ಲಡ್ಡು ಇಲ್ಲದಿದ್ದರೆ ದರ್ಶನ ಅಪೂರ್ಣವಾದಂತೆ ಎನ್ನುವ ಭಾವ ಭಕ್ತಾಧಿಗಳಲ್ಲಿದೆ. ಇನ್ನು ಟೋಕನ್ ಅನುಸಾರವಾಗಿ ಇಲ್ಲಿ ಲಡ್ಡು ಸಹ ನೀಡಲಾಗುತ್ತದೆ. ತಿಮ್ಮಪ್ಪನ ದರ್ಶನ ಪಡೆದರೆ ಒಂದು ಲಡ್ಡು ಫ್ರೀ ಆಗಿ ಸಿಗುತ್ತದೆ. ಹಾಗೆಯೇ ಒಂದು ಟೋಕನ್ ಅಡಿಯಲ್ಲಿ ನೀವು ಹಣ ನೀಡಿ 6 ಲಡ್ಡು ಪಡೆಯಬಹುದು. ಈ ಲಡ್ಡು ಪರಿಮಳ ಹಾಗೂ ರುಚಿ ಜನರನ್ನು ಇದರತ್ತ ಸೆಳೆಯುತ್ತದೆ.

ಕೆಲ ಅಂದಾಜಿನ ಪ್ರಕಾರ ತಿರುಪತಿಯಲ್ಲಿ ದಿನಕ್ಕೆ ಸುಮಾರು ಒಂದೂವರೆಯಿಂದ 2 ಲಕ್ಷದ ವರೆಗೆ ಲಡ್ಡು ತಯಾರಿಸಲಾಗುತ್ತದೆ. ದರ್ಶನಕ್ಕೆ ಬಂದ ಪ್ರತಿಯೊಬ್ಬರು 3 ರಿಂದ 4 ಲಡ್ಡು ತೆಗೆದುಕೊಂಡು ಹೋಗುತ್ತಾರೆ. ಇನ್ನು ವಿಶೇಷ ಕಾರ್ಯಕ್ರಮಗಳ ಸಮಯದಲ್ಲಿ ಲಡ್ಡು ಬೇಡಿಕೆ ಹೆಚ್ಚಿರುತ್ತದೆ. ಬ್ರಹ್ಮೋತ್ಸವದ ಸಮಯದಲ್ಲಿ ಕೋಟಿ ಕೋಟಿ ಲಡ್ಡು ಮಾರಾಟವಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ. ಇನ್ನು 2014ರಲ್ಲಿ ಈ ತಿರುಪತಿ ಲಡ್ಡಿಗೆ GI ಟ್ಯಾಗ್​ ಸಹ ಸಿಕ್ಕಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.