ಕರ್ನಾಟಕಕ್ಕೆ ಬೇಕಾಗಿದೆ ಯೋಗಿಯಂತಹ ಸಿಎಮ್, ಉತ್ತರ ಪ್ರದೇಶವನ್ನು ಸಂಪೂರ್ಣ ಬದಲಾಯಿಸಿದ ಗಂಡೆದೆ ವೀರ

 | 
ಪಲಕ

ರಾಜ್ಯದಲ್ಲಿ ಯೋಗಿ ಸರ್ಕಾರ ಮರಳಿದ ನಂತರ ಅಪರಾಧಿಗಳಲ್ಲಿ ಭೀತಿ ಉಂಟಾಗಿದೆ. ಪ್ರತಿನಿತ್ಯ ಅಪರಾಧಿಗಳು ಪೊಲೀಸ್ ಠಾಣೆಗೆ ಬಂದು ತಾವಾಗಿಯೇ ಶರಣಾಗುತ್ತಿದ್ದಾರೆ. ಹೌದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಅತ್ರೌಲಿ ಎಂಬಲ್ಲಿ 74 ಕ್ರಿಮಿನಲ್​ಗಳು  ಎನ್​ಕೌಂಟರ್​ಗೆ ಹೆದರಿ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾರೆ. 

ಇನ್ಮುಂದೆ ಯಾವತ್ತೂ ಅಪರಾಧ ಎಸಗುವುದಿಲ್ಲ ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡು ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಯ ಮುಂದೆ ಪ್ರಮಾಣ ಮಾಡಿ ಶರಣಾಗಿದ್ದಾರೆ. ಜೊತೆಗೆ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅಪರಾಧ ಪ್ರಕರಣ ನಡೆದರೆ ಆ ಬಗ್ಗೆ ಪೊಲೀಸರಿಗೆ ತಿಳಿಸುವುದಾಗಿ ಹಾಗೂ ಅಪರಾಧ ತಡೆಗೆ ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

ಅಟ್ರೌಲಿ ಪೊಲೀಸ್ ಠಾಣೆಯಲ್ಲಿ, ಅಪರಾಧ ಇತಿಹಾಸವುಳ್ಳ ರೌಡಿ ಶೀಟರ್​ಗಳು ಫಲಕ ಹಿಡಿದು ಇನ್‌ಸ್ಪೆಕ್ಟರ್-ಇನ್‌ಚಾರ್ಜ್ ದಿಲೀಶ್ ಸಿಂಗ್ ಅವರ ಮುಂದೆ ಬಂದು ಮುಂದೆ ಯಾವುದೇ ರೀತಿಯ ಅಪರಾಧ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ಈ ಎಲ್ಲ ರೌಡಿ ಶೀಟರ್​ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ನಿರ್ಣಯದ ಬಗ್ಗೆ ತಿಳಿಸಿದ್ದಾರೆ.

ನಂತರ ಪೊಲೀಸ್ ಠಾಣೆಯ ಪ್ರಭಾರಿಯವರು ಈ ಎಲ್ಲಾ ಹಿಸ್ಟ್ರಿ ಶೀಟರ್‌ಗಳಿಗೆ ಸಾಮೂಹಿಕವಾಗಿ ಪ್ರಮಾಣ ವಚನ ಬೋಧಿಸಿದ್ದಾರೆ. ಜನರಿಗೆ ಅನಗತ್ಯ ಕಿರುಕುಳ ನೀಡುವುದಿಲ್ಲ ಎಂದು ಪೊಲೀಸ್ ಪರವಾಗಿ ಇನ್ಸ್‌ಪೆಕ್ಟರ್ ದಿಲೀಶ್ ಸಿಂಗ್​ಗೆ ಭರವಸೆ ನೀಡಿದ್ದಾರೆ.ರಾಜ್ಯದಲ್ಲಿ ಯೋಗಿ ಸರ್ಕಾರ ಮರಳಿದ ನಂತರ ಅಪರಾಧಿಗಳಲ್ಲಿ ಭೀತಿ ಉಂಟಾಗಿದೆ.

ಪ್ರತಿನಿತ್ಯ ಅಪರಾಧಿಗಳು ಪೊಲೀಸ್ ಠಾಣೆಗೆ ಬಂದು ತಾವಾಗಿಯೇ ಶರಣಾಗುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ಬಂದ ಅವರೆಲ್ಲರ ಕೈಯಲ್ಲಿ ನಾನು ಅಪರಾಧದಿಂದ ದೂರವಿರುತ್ತೇನೆ ಫಲಕ, ಪತ್ರಗಳಿದ್ದವು. ಅಪರಾಧಿಗಳ ಅಪರಾಧ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಮತ್ತು ಅಪರಾಧದಿಂದ ದೂರವಿರಲು ಅವರನ್ನು ಪ್ರೇರೇಪಿಸುವುದೇ ನಮ್ಮ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.