ಸಂಗೀತ ತಂದೆಯ ಮಾತಿಗೆ ಫಿದಾ ಆದ ಕಾರ್ತಿಕ್, ಬಿಗ್ ಬಾಸ್ ಮನೆಯಲ್ಲಿ ಸಂಭ್ರಮ

 | 
Jj

ಬಿಗ್​ಬಾಸ್ ಮನೆಗೆ ಸ್ಪರ್ಧಿಗಳ ಮನೆಯವರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಬುಧವಾರದ ಎಪಿಸೋಡ್​ನಲ್ಲಿ ಮನೆಗೆ ಕಾರ್ತಿಕ್, ಸಿರಿ ಹಾಗೂ ಸಂಗೀತಾ ಅವರುಗಳ ಕುಟುಂಬ ಸದಸ್ಯರು ಆಗಮಿಸಿದ್ದರು. ಇತರೆ ಸ್ಪರ್ಧಿಗಳ ಕುಟುಂಬದ ಒಬ್ಬರು ಅಥವಾ ಇಬ್ಬರು ಮನೆಗೆ ಬಂದರೆ ಸಂಗೀತಾ ಕುಟುಂಬದ ಎಲ್ಲರೂ ಮನೆಗೆ ಬಂದಿದ್ದರು. 

ಮನೆಯಲ್ಲಿ ಸಂಗೀತಾರ ವೈರಿ ಆಗಿರುವ ವಿನಯ್​, ಆರಂಭದಲ್ಲಿ ಸಂಗೀತಾರ ಕುಟುಂಬದವರನ್ನು ಎದುರುಗೊಳ್ಳದೆ ತುಕಾಲಿ ಹಾಗೂ ಮೈಖಲ್ ಜೊತೆ ಕೋಣೆಯಲ್ಲಿ ಕೂತಿದ್ದರು. ಮೊದಲಿಗೆ ಸಂಗೀತಾರ ಅತ್ತಿಗೆ ಸುಚಿ ಅವರು ಬಂದರು. ಅದಾದ ಬಳಿಕ ಅವರ ಸಹೋದರ ಬಂದರು. ಸಂಗೀತಾರ ಅಣ್ಣ ವಿನಯ್ ಬಳಿ ಮಾತನಾಡಿ, ನಾನು ನಿಮ್ಮ ಅಭಿಮಾನಿ ಎಂದರು. ಬಳಿಕ ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರಿ. 

ನಿಮ್ಮ ಸ್ಟ್ರಾಟಜಿ ಬಹಳ ಚೆನ್ನಾಗಿದೆ. ಆಟವೇ ಅಗ್ರೆಸ್ಸಿವ್ ಆಗಿದೆ. ಅವಳೂ ಸಹ ಅಗ್ರೆಸ್ಸಿವ್ ನನಗೆ ನಿಮ್ಮ ಯೋಚನೆ ಅರ್ಥವಾಗುತ್ತದೆ. ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರಿ ಎಂದು ಹುರಿದುಂಬಿಸಿದರು. ಆ ಬಳಿಕ ಸಂಗೀತಾರ ತಾಯಿ ಮತ್ತು ತಂದೆ ಮನೆಗೆ ಬಂದರು. ಸಂಗೀತಾರ ತಂದೆ ಮಾಜಿ ಸೈನಿಕ, ಈಗಲೂ ಫಿಟ್ ಆಗಿ ಕುಸ್ತಿ ಪಟುವಿನಂತೆ ಇದ್ದಾರೆ, ಅವರ ಮೈಕಟ್ಟು ನೋಡಿ ಮನೆಯ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು. 

ಸಂಗೀತಾ, ವಿನಯ್​ ಅನ್ನು ಉದ್ದೇಶಿಸಿ, ನಮ್ಮ ಅಪ್ಪ ಬಂದಿದ್ದಾರೆ, ನಿಮಗೆ ಹೊಡೆಯುತ್ತಾರೆ, ಮಿಲ್ಟ್ರಿ ಮ್ಯಾನ್ ಅವರು ಗನ್ ತಂದಿದ್ದಾರೆ ಎಂದು ತಮಾಷೆಯಾಗಿ ದೂರು ಹೇಳಿದರು. ಸಂಗೀತಾರ ತಂದೆ ನಗುತ್ತಲೇ ಅಯ್ಯೋ ಹಾಗೆಲ್ಲ ಇಲ್ಲ ಎಂದರು. ಸಂಗೀತಾರ ತಂದೆ, ಡ್ರೋನ್ ಪ್ರತಾಪ್ ನಾಯಕನಾಗಬೇಕು ಎಂದು ಆಯ್ಕೆ ಮಾಡಿ  ಕಾರ್ತೀಕ್ ಗೆ ಚೆನ್ನಾಗಿ ಆಡಲು ಹೇಳಿ ಕುಟುಂಬದವರನ್ನು ಕರೆದುಕೊಂಡು ಹೊರನಡೆದರು. 

ಅವರು ಪ್ರೀತಿಯಿಂದ ಕಾರ್ತೀಕ್ ಬಳಿ ಮಾತಾಡಿದ್ದನ್ನು ನೋಡಿದರೆ ಅಳಿಯನನ್ನು ಮಾಡಿಕೊಳ್ಳುತ್ತಾರೆ ಎನ್ನುವಂತಿತ್ತು. ಹಾಗಾಗಿ ಸಂಗೀತಾ ಕಾರ್ತೀಕ್ ಪ್ರೀತಿಗೆ ಮನೆಯವರ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.