ತಾಯಿಯ ಆಸೆಯಂತೆ ಸಿಹಿಸುದ್ದಿ ಕೊಟ್ಟ ಕಾರ್ತಿಕ್ ಮಹೇಶ್, ಇದೇ ತಿಂಗಳು ಹಬ್ಬದೂಟ

 | 
Hii
ಬಿಗ್‌ ಬಾಸ್‌ ಕನ್ನಡ’ ಶೋನಲ್ಲಿ ಭಾಗವಹಿಸಿದ ಅನೇಕ ಸ್ಪರ್ಧಿಗಳು ಸದ್ಯ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ, ಸಿನಿಮಾ ಮಾಡುತ್ತಿದ್ದಾರೆ, ಇನ್ನೂ ಕೆಲವರು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಶೈನ್‌ ಶೆಟ್ಟಿ, ಚೈತ್ರಾ ವಾಸುದೇವನ್‌, ವಾಸುಕಿ ವೈಭವ್‌, ಚಂದನ್‌ ಶೆಟ್ಟಿ ಅವರು ಈ ಹೆಸರನ್ನು ಸದ್ವಿನಿಯೋಗ ಮಾಡಿಕೊಂಡಿದ್ದಾರೆ. ಈಗ ಬಿಗ್‌ ಬಾಸ್‌ ಕನ್ನಡ 10 ವಿಜೇತ ಕಾರ್ತಿಕ್‌ ಮಹೇಶ್‌ ಅವರು Golify ಎನ್ನುತ್ತಿದ್ದಾರೆ.
 ಇದಕ್ಕೂ ಕಾರಣ ಇದೆ. ಹಾಗಂದರೆ ಏನು ಎಂದು ನಿಮಗೂ ಪ್ರಶ್ನೆ ಕಾಡುತ್ತಿರಬಹುದು. ಹೌದು, ಕಾರ್ತಿಕ್‌ ಮಹೇಶ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ Golify ವಿಷಯವನ್ನು ಶೇರ್‌ ಮಾಡಿದ್ದಾರೆ. ಸದ್ಯ ʼರಾಮರಸʼ ಎನ್ನುವ ಸಿನಿಮಾ ಮಾಡುತ್ತಿರುವ ಅವರು ʼGolifyʼ ಎನ್ನುವ ಉದ್ಯಮ ಆರಂಭಿಸಿದ್ದಾರೆ. ಇದು ಗೋಲಿ ಸೋಡ ಕುರಿತಾದ ಒಂದು ಉದ್ಯಮ. ಕಾರ್ತಿಕ್‌ ಮಹೇಶ್‌ ಅವರ ಈ ಹೊಸ ಸಾಹಸಕ್ಕೆ ನಮ್ರತಾ ಗೌಡ ಅವರು ಶುಭ ಹಾರೈಸಿದ್ದಾರೆ. 
ಈ ಉದ್ಯಮದ ಬಗ್ಗೆ ಕಾರ್ತಿಕ್‌ ಅವರು ಮುಂದಿನ ದಿನಗಳಲ್ಲಿ ಮಾಹಿತಿ ನೀಡಬಹುದು. ಬಿಗ್‌ ಬಾಸ್ ಶೋನಲ್ಲಿ ಗೆದ್ದ ಹಣದಿಂದ ಏನು ಮಾಡ್ತೀರಾ ಅಂತ ಕಾರ್ತಿಕ್‌ ಮಹೇಶ್‌ ಅವರ ಬಳಿ ಪ್ರಶ್ನೆ ಮಾಡಿದಾಗ ಮನೆ ತಗೊಳ್ಳಬೇಕು, ಆದರೆ ಬಿಗ್‌ ಬಾಸ್‌ ಶೋನಿಂದ ಸಿಕ್ಕ ಹಣದಿಂದ ಮನೆ ತಗೊಳೋಕೆ ಆಗೋದಿಲ್ಲ, ಇನ್ನೂ ಒಂದಿಷ್ಟು ದುಡಿಮೆ ಬೇಕಾಗುತ್ತದೆ ಎಂದು ಅವರು ಹೇಳಿದ್ದರು. 
ಕಾರ್ತಿಕ್‌ ಭಾಗವಹಿಸಿದ್ದ ಸೀಸನ್‌ ಮುಗಿದು, ಇನ್ನೊಂದು ಸೀಸನ್‌ ಕೂಡ ಇತ್ತೀಚೆಗೆ ಮುಕ್ತಾಯವಾಗಿದೆ. ಈಗ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ, ಇದಕ್ಕೆ ತಯಾರಿ ಕೂಡ ಮಾಡಿಕೊಳ್ತಿದ್ದಾರೆ. ಅಂದಹಾಗೆ ಸ್ಟಾರ್‌ ಸುವರ್ಣ ವಾಹಿನಿಯ ಶೋವೊಂದರಲ್ಲಿ ಕಾರ್ತಿಕ್‌ ಅವರು ನಿರೂಪಕ ಆಗಿಯೂ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕಾರ್ತಿಕ್‌ ಫುಲ್‌ ಆಕ್ಟಿವ್‌ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.