ಕಾರ್ತಿಕ್ ನಮ್ರತಾ ಮಧ್ಯರಾತ್ರಿ ಪ್ರೇಮದಾಟ, ಹೊರಗಡೆಯಿಂದ ಕಿ.ಡಿಕಾರಿದ ಸ್ನೇಹಿತ್

 | 
ರ

ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮದಲ್ಲಿ ಸ್ನೇಹಿತ್ ಹಾಗೂ ನಮ್ರತಾ ಮಧ್ಯೆ ಆತ್ಮೀಯತೆ ಇತ್ತು. ಒಂದೇ ಗ್ಯಾಂಗ್‌ನಲ್ಲಿ  ಗುರುತಿಸಿಕೊಂಡಿದ್ದ ಸ್ನೇಹಿತ್ - ನಮ್ರತಾ ಮಧ್ಯೆ ಸ್ನೇಹ ಬೆಳೆದಿತ್ತು. ನಿಮ್ಮ ಮೇಲೆ ನನಗೆ ಫೀಲಿಂಗ್ಸ್ ಇದೆ’’ ಎಂದು ನಮ್ರತಾ ಬಳಿ ಸ್ನೇಹಿತ್‌ ಬಾಯ್ಬಿಟ್ಟು ಹೇಳಿದ್ದರು. ಬಿಗ್ ಬಾಸ್‌ ಮನೆಯಲ್ಲಿ ಲವ್ ಆಗುತ್ತೆ ಅಂತ ನನಗೆ ಅನಿಸಲ್ಲ. ಹೊರಗೆ ಹೋದ್ಮೇಲೆ ನೋಡೋಣ ಎಂದು ನಮ್ರತಾ ಪ್ರತಿಕ್ರಿಯೆ ಕೊಟ್ಟಿದ್ದರು.

ಬಿಗ್ ಬಾಸ್‌’ ಮನೆಯಿಂದ ಸ್ನೇಹಿತ್‌ ಹೊರಗೆ ಬಂದಾಗಿದೆ. ಹೊರಗೆ ಬಂದ್ಮೇಲೆ ಇನ್ಸ್ಟಾಗ್ರಾಮ್‌ನಲ್ಲಿ ನಮ್ರತಾ ಗೌಡ ಅವರನ್ನ ಸ್ನೇಹಿತ್ ಗೌಡ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ನಮ್ರತಾ ಗೌಡ ಜೊತೆಗೆ ಒಳ್ಳೆಯ ಬಾಂಡಿಂಗ್ ಹೊಂದಿದ್ದ ಸ್ನೇಹಿತ್‌, ಏಕಾಏಕಿ ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ಯಾಕೆ?ಈ ಬಗ್ಗೆ ಸ್ನೇಹಿತ್‌ ಬಾಯ್ಬಿಟ್ಟು ಮಾತನಾಡಿಲ್ಲ. 

ಆದರೆ, ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್‌ ವೀಕ್ಷಕರು ಹಾಗೂ ಅಭಿಮಾನಿಗಳ ಊಹಾಪೋಹ ಬೇರೇನೇ ಇದೆ. ಅದೇನಪ್ಪಾ ಅಂತ ತಿಳಿದರೆ ಅಚ್ಚರಿ ಪಡ್ತೀರಿ. ಬಿಗ್ ಬಾಸ್‌’ ಮನೆಯಲ್ಲಿ ಕಾರ್ತಿಕ್ - ನಮ್ರತಾ ತಮಾಷೆಗಾಗಿ ಫ್ಲರ್ಟ್ ಮಾಡುತ್ತಿದ್ದಾರೆ. ಇದರಿಂದಲೇ ಸ್ನೇಹಿತ್ ಬೇಸರಗೊಂಡಿದ್ದಾರಾ? ಸ್ನೇಹಿತ್‌ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಕೆಲ ಬಿಗ್ ಬಾಸ್‌ ವೀಕ್ಷಕರು ಮಾತ್ರ ನಮ್ರತಾನ ಸ್ನೇಹಿತ್‌ ಅನ್‌ಫಾಲೋ ಮಾಡೋದಕ್ಕೆ ಇದೇ ಕಾರಣ ಅಂತ ಕಾಮೆಂಟ್ ಮಾಡ್ತಿದ್ದಾರೆ. ಅಂದ್ಹಾಗೆ, ಕಾರ್ತಿಕ್ ಅವರನ್ನೂ ಇನ್ಸ್ಟಾಗ್ರಾಮ್‌ನಲ್ಲಿ ಸ್ನೇಹಿತ್‌ ಫಾಲೋ ಮಾಡ್ತಿಲ್ಲ.

ಇನ್ಸ್ಟಾಗ್ರಾಮ್‌ನಲ್ಲಿ ಸ್ನೇಹಿತ್ ಅವರನ್ನ ನಮ್ರತಾ ಕೂಡ ಫಾಲೋ ಮಾಡ್ತಿಲ್ಲ ಎನ್ನಲಾಗಿದೆ. ಸದ್ಯ ನಮ್ರತಾ ಬಿಗ್ ಬಾಸ್‌’ ಮನೆಯಲ್ಲಿ ಲಾಕ್ ಆಗಿರೋದ್ರಿಂದ ನಮ್ರತಾ ಅವರ ಇನ್ಸ್ಟಾಗ್ರಾಮ್‌ ಅಕೌಂಟ್‌ನ ಏಜೆನ್ಸಿಯೊಂದು ನಿರ್ವಹಿಸುತ್ತಿದೆ. ಹಾಗಾಗಿ ಅವರು ಹೊರ ಬರುವ ತನಕ ಮುಂದಿನ ನಡೆಯೇನು ತಿಳಿದುಕೊಳ್ಳಲು ಕಾಯಬೇಕಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.