ಬಿಗ್ ಬಾಸ್ ಮನೆಯಲ್ಲಿ ಎಣ್ಣೆ ಸಿಗರೇಟ್, ಮೊಬೈಲ್ ಕೊಡುತ್ತಾರೆ ಎಂದ ಕಾರ್ತಿಕ್

 | 
Uh

ಈ ವಾರ ಬಿಗ್​ಬಾಸ್​ ಮನೆಯಲ್ಲಿ ಕಾರ್ತಿಕ್ ಮತ್ತು ನಮ್ರತಾ ನಡುವಿನ ಮಾತುಕತೆ ಹೆಚ್ಚು ಸದ್ದು ಮಾಡಿತ್ತು. ಕಾರ್ತಿಕ್ ಮತ್ತು ನಮ್ರತಾ ನಡುವಿನ ಮಾತುಕತೆಯನ್ನೇ ಈ ವಾರದ ಕೊನೆಯಲ್ಲಿ ವರ್ತೂರು ಸಂತೋಷ್ ಅನುಕರಣೆ ಮಾಡಿ ಮನೆಯವರಿಂದ ಬೇಷ್ ಅನ್ನಿಸಿಕೊಂಡಿದ್ದರು.

ಇದೀಗ ಇದೇ ವಿಷಯವನ್ನು ಸೂಪರ್ ಸಂಡೇ ವಿಥ್ ಸುದೀಪದಲ್ಲಿ ಕಿಚ್ಚ ಪ್ರಸ್ತಾಪಿಸಿದ್ದಾರೆ. ಈ ವೇಳೆ ಕಾರ್ತಿಕ್ ಕಾಲನ್ನ ಎಳೆದ ಸುದೀಪ್ ಸಖತ್ ಮಜಾ ತೆಗೆದುಕೊಂಡಿದ್ದಾರೆ. ಸುದೀಪ್ ಈ ವಿಷಯವನ್ನು ಮನೆಯವರೊಂದಿಗೆ ಚರ್ಚಿಸಿದ್ದು, ಎಲ್ಲರೂ ನಕ್ಕು ಸುಸ್ತಾಗಿದ್ದಾರೆ.ನಮ್ರತಾ ಅವರಿಗೆ ಹೊಸ ಸ್ನೇಹಿತ ಸಿಕ್ಕಿದ್ದಾರೆ ಎಂದು ಸುದೀಪ್ ಹೇಳುತ್ತಲೇ ಎಲ್ಲರೂ ಯೆಸ್ ಎಂದು ಬೋರ್ಡ್ ಹಿಡಿದಿದ್ದಾರೆ.

ಆದರೆ ಕಾರ್ತಿಕ್ ಮಾತ್ರ ನೋ ಎಂದು ಬೋರ್ಡ್ ತೋರಿಸಿದ್ದಾರೆ. ಯೆಸ್ ಯಾಕೆ ಎಂದು ವಿವರಿಸಿದ ಸಂಗೀತಾ, ಫಸ್ಟ್ ಹಾಫ್ ನನ್ನ ಜೊತೆ, ಸೆಕೆಂಡ್ ಹಾಫ್​ ನಮ್ರತಾ ಅವರ ಜೊತೆ ಸ್ನೇಹವಿದೆ ಎಂದು ಹೇಳಿದ್ದಾರೆ. ಸುದೀಪ್ ಕೇಳುವ ಮೊದಲೇ ಸ್ಪಷ್ಟನೆ ನೀಡಲು ಮುಂದಾದ ಕಾರ್ತಿಕ್, ಇದು ನೋ ಸರ್. ನಮ್ರತಾ ನನಗೆ ಮುಂಚೆಯಿಂದಲೇ ಫ್ರೆಂಡ್ ಎಂದಿದ್ದಾರೆ. 

ನಾನು ನಿಮ್ಮ ಬಗ್ಗೆಯೇ ಮಾತಾಡಿದ್ದು ಯಾರು ಹೇಳಿದ್ದು ಅಂತ ಸುದೀಪ್ ಪ್ರಶ್ನೆ ಹಾಕಿದ್ದಾರೆ. ಸುದೀಪ್ ಮರು ಪ್ರಶ್ನೆ ಮಾಡುತ್ತಿದ್ದಂತೆ ಯೆಸ್ ಬೋರ್ಡ್ ಹಿಡಿದ ಕಾರ್ತಿಕ್, ಸ್ನೇಹ ಸ್ವಲ್ಪ ಜಾಸ್ತಿಯಾಗಿದೆ ಎಂದರು. ಹಾಗಾದ್ರೆ ಇದಕ್ಕೆ ನೋ ಬೋರ್ಡ್ ಬರಬೇಕಲ್ಲವಾ ಅಂತ ಸುದೀಪ್ ಕೇಳಿದರು.ಮತ್ತೆ ಗೊಂದಲಕ್ಕೊಳಗಾದ ಕಾರ್ತಿಕ್, ನೋ ಬೋರ್ಡ್ ಹಿಡಿದರು. ಇದಕ್ಕೂ ಸಹ ಸುದೀಪ್, ನೋ ಯಾಕೆ ಎಂದು ಕೇಳುತ್ತಿದ್ದಂತೆ ಮನೆ ಮಂದಿಯೆಲ್ಲಾ ಜೋರಾಗಿ ನಕ್ಕಿದ್ದಾರೆ.