'ಲೈವ್ ಅಲ್ಲೇ ಸಂಗೀತಾಗೆ ಬಿಸಿ ಮುಟ್ಟಿಸಿದ ಕಾರ್ತಿಕ್ ಹಾಗೂ ತನಿಷಾ'

 | 
Bz

ನನಗೆ ಫ್ರೆಂಡ್‌ಷಿಪ್ ಆಗೋದು ತುಂಬ ಕಷ್ಟ. ಈ ಮನೆಯಲ್ಲಿ ಪ್ರಾರಂಭದಲ್ಲಿಯೇ ಕಾರ್ತಿಕ್ ಮತ್ತು ತನಿಷಾ ಜೊತೆಗೆ ಫ್ರೆಂಡ್‌ಷಿಪ್ ಆಯ್ತು. ಸಡನ್ ಆಗಿ ಆದ ಫ್ರೆಂಡ್‌ಷಿಪ್ ಅಷ್ಟೇ ಸಡನ್ ಆಗಿ ಹೋಗುವ ಸಾಧ್ಯತೆಯೂ ಸಾಕಷ್ಟು ಇರುತ್ತವೆ. ಹಾಗೇ ಆಯ್ತು. ನನ್ನದು ಮತ್ತು ಅವರದು ಕೆಲವು ಚಕಮಕಿ ನಡೆಯಿತು. ಅದು ಕೊನೆಯವರೆಗೂ ಮುಂದುವರಿಯಿತು ಈಗ  ಅವರಿಬ್ಬರೂ ವೀಡಿಯೊ ಕಾಲ್ ಮಾಡಿಕೊಂಡು ನನಗೆ ಬಯ್ಯುವ ಕೆಲಸ ಮಾಡ್ತಿದ್ದಾರೆ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. 

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಟ್ರಾಂಗ್‌ ಮಹಿಳಾ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಕನ್ನಡ ಸಿನಿಮಾ ಮತ್ತು ಧಾರಾವಾಹಿ ನಟಿ ಸಂಗೀತಾ ಶೃಂಗೇರಿ  ಬೇಸರದಿಂದ ಈ ಮಾತನ್ನು ಹೇಳಿದ್ದರು. ಆದರೆ ಅದು ನಿಜವೆಂದು ಈಗ ಎಲ್ಲರಿಗೂ ಅರಿವಾಗುತ್ತಿದೆ ಈ ಹಿಂದೆ ಕೂಡ ತಾನಿಶಾ ಬಿಗ್ಬಾಸ್ ಮನೆಯಿಂದ ಆಚೆ ಬಂದ ಮೇಲೆ ಸಂಗೀತಾ ಗೆ ಬೈಯ್ದಿದ್ದರು. ಅಲ್ಲದೆ ಈ ವೀಡಿಯೊ ಅಲ್ಲಿಯೂ ಕೂಡ ನಾನು ಪಿನ್ ಇಡ್ತೇನೆ ಅಂತ ಕಾಮೆಂಟ್ ಮಾಡ್ತಿದ್ದಾರೆ ಕಾರ್ತಿಕ್ ನಾನೇನಾದರೂ ನಿನ್ನ ಮತ್ತು ಸಂಗೀತಾ ನಡುವೆ ಬಂದಿದ್ದೆನಾ ಅಂತ ಕೇಳಿದ್ದಾರೆ. 

ಆಗ ಕಾರ್ತೀಕ ಪಿನ್ ಅಲ್ಲ ಗನ್ ಎಂದು ಹೇಳು. ಇಂತ ಮಾತು ಆಡಿದರೆ ಗನ್ ಇಡ್ತೀನಿ ಹೇಳು ಅಂದಿದ್ದಾರೆ. ಈ ಹಿಂದೆ ಕೂಡ ತಾನಿಷ ಸಂಗೀತಾ ಬಗ್ಗೆ ಹೇಗೆ ಹೇಳಿದ್ರು ಮೊದಲಿನಿಂದ ಒಟ್ಟಿಗೆ ಇದ್ದಿದ್ದರಿಂದ ಸಂಗೀತಾ, ಕಾರ್ತಿಕ್, ಹಾಗೂ ನನ್ನ ನಡುವೆ ಟ್ರಯೊ ಫ್ರೆಂಡ್‌ಷಿಪ್ ಬೆಳೆಯಿತು. ಆದರೆ ಅವರಿಬ್ಬರೂ ಸ್ವಲ್ಪ ಜಾಸ್ತಿ ಕ್ಲೋಸ್ ಆಗಿರುವುದು ನನಗೆ ಖಂಡಿತವಾಗಲೂ ಗೊತ್ತಿತ್ತು. ಆ ಕಾರಣಕ್ಕೇ, ಇದು ಗುಂಪಲ್ಲ, ನನಗೆ ಇವರ ಜೊತೆಗೆ ಹೆಚ್ಚು ಮಾತಾಡಬೇಕು ಅನಿಸುತ್ತದಷ್ಟೆ ಎಂದು ಹೇಳಿಕೊಂಡು; ಎಲ್ಲರ ಜೊತೆ ಮಾತಾಡಿಕೊಂಡು ಓಡಾಡಿಕೊಂಡೇ ಇದ್ದೆ. ತನಿಷಾ ಅವರೆಲ್ಲರ ದುಃಖಕ್ಕೆ ಸ್ಪಂದಿಸುವುದಕ್ಕೆ ಪ್ರತಿಸಲ ಇರುತ್ತಿದ್ದಳು. ಆದರೆ ತನಿಷಾಗೆ, ತನಿಷಾ ಥರ ಯಾರೂ ಇರಲಿಲ್ಲ.

ನನ್ನ ದುಃಖಕ್ಕಾಗಲಿ, ಖುಷಿಗಾಗಲಿ, ನನ್ನ ಕೋಪಕ್ಕಾಗಲಿ ಸ್ಪಂದಿಸುವವರು ಯಾರೂ ಇರಲಿಲ್ಲ. ಸಂಗೀತಾಗೆ ಫ್ರೆಂಡ್ಸ್ ಅಂದ್ರೆ ಅವರನ್ನು ಸ್ವಲ್ಪ ತಲೆಮೇಲೆ ಇಟ್ಕೋಬೇಕು. ಆಗ ಅವರಿಗೆ ಸಮಾಧಾನ ಆಗುತ್ತದೆ. ಇಲ್ಲಾ ಅಂದ್ರೆ ಸಮಾಧಾನ ಆಗುವುದಿಲ್ಲ. ನಾನು ಜಗಳ ಆಯ್ತು ಅಂದ್ರೆ ಅಲ್ಲಲ್ಲೇ ಬಿಟ್ಟು ಹೋಗ್ತಾ ಇರ್ತೀನಿ. ಅವ್ರು ಜನರನ್ನೇ ಬಿಟ್ಟು ಹೋಗ್ತಿರ್ತಾರೆ. ಹಾಗಾಗಿ ಅವರು ತಪ್ಪು ಮಾಡಿದ್ರೂ ತುಂಬ ಬೇಗ ಕ್ಷಮಿಸಿ ನಾರ್ಮಲ್ ಆಗಿಬಿಡ್ತಿದ್ದೆ. ಆದ್ರೆ ಅವಳು ಹಾಗಲ್ಲ ಎಂದು ಓಪನ್ ಅಗಿ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.