ನಮ್ರತಾಳ ಬಿಳಿ ಕೆನ್ನೆಗೆ ಮುತ್ತಿಟ್ಟ ಕಾರ್ತಿಕ್; ಇಬ್ಬರ ಡ್ಯಾನ್ಸ್ ನೋಡಿ ಫಿದಾ ಆದ ಕನ್ನಡಿಗರು

ಬಿಗ್ಬಾಸ್ 10 ವಿನ್ನರ್ ಕಾರ್ತಿಕ್ ಮತ್ತು ನಮ್ರತಾ ಗೌಡ ರೊಮ್ಯಾನ್ಸ್ ಮಾಡಿದ್ದಾರೆ. ಸಖಿಯೇ ಸಖಿಯೇ ಹಾಡಿಗೆ ಇಬ್ಬರೂ ಸಕತ್ ಸ್ಟೆಪ್ ಹಾಕಿದ್ದಾರೆ. ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ಕೋಟಿ ಮನರಂಜನೆಯಲ್ಲಿ ಈ ಜೋಡಿ ಸಕತ್ ಡ್ಯಾನ್ಸ್ ಮಾಡಿದ್ದಾರೆ. ಇದರ ಪ್ರೊಮೋ ಅನ್ನು ವಾಹಿನಿ ಬಿಡುಗಡೆ ಮಾಡಿದೆ. ನಮ್ರತಾಗೆ ‘ಸಖಿಯೇ... ಸಖಿಯೇ...’ ಅಂತಿದ್ದಾರೆ ಕಾರ್ತಿಕ್! ಎನ್ನುವ ಶೀರ್ಷಿಕೆಯಡಿಯಲ್ಲಿ ಈ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಹಲವರು ಸ್ನೇಹಿತ್ ಎಲ್ಲಿದ್ದಿಯಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ.
ಬಿಗ್ಬಾಸ್ನಲ್ಲಿ ಇದ್ದಾಗ ಸ್ನೇಹಿತ್ ಹಾಗೂ ನಮ್ರತಾ ನಡುವೆ ಆತ್ಮೀಯತೆ ಗಾಢವಾಗಿತ್ತು. ಅದಕ್ಕಾಗಿ ಇವರಿಬ್ಬರೂ ಲವ್ ಮಾಡುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದು ಬರೀ ಸ್ನೇಹಾನಾ ಅಥವಾ ಪ್ರೀತಿನಾ ಎಂದು ಪ್ರೇಕ್ಷಕರು ಕೇಳಿದ್ದುಂಟು. ಅದೂ ಸಾಲು ಎಂಬುದಕ್ಕೆ ಬಿಗ್ಬಾಸ್ ಮನೆಯಿಂದ ಸ್ನೇಹಿತ್ ಹೊರಕ್ಕೆ ಬಂದಾಗ ನಮ್ರತಾ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದನ್ನು ನೋಡಿ ಇವರಿಬ್ಬರ ಬಗ್ಗೆ ಮತ್ತಷ್ಟು ಸುದ್ದಿಯಾಗಿತ್ತು.
ಆದರೆ ಬರಬರುತ್ತಾ ಇವರಿಬ್ಬರ ನಡುವೆ, ಸಂಬಂಧ ಹಳಸಿದೆ ಎಂದೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದನ್ನೇ ಹಿಡಿದುಕೊಂಡು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ನಮ್ರತಾ ಅವರು, ಈಚೆಗೆ ಸಂದರ್ಶನವೊಂದರಲ್ಲಿ ಮದುವೆ, ಸಂಬಂಧಗಳ ಕುರಿತು ಓಪನ್ನಾಗಿ ಹೇಳಿಕೊಂಡಿದ್ದರು. ನಮಗೆ ಏನೆನೋ ಕನಸುಗಳು ಇರುತ್ತವೆ, ಅಂದುಕೊಂಡಿದ್ದನ್ನು ಸಾಧಿಸುವ ಛಲವಿರುತ್ತದೆ. ಇಂಥ ಸಂದರ್ಭದಲ್ಲಿ ಮದುವೆ ಈಗಲೇ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಮೊದಲಿಗೆ ಮ್ಯಾರೆಜ್ ಸಿಸ್ಟಮ್ ಅರ್ಥ ಮಾಡಿಕೊಳ್ಳಬೇಕು. ಏನೇನೋ ಅಡ್ಜಸ್ಟ್ಮೆಂಟ್ಗಳು ಇರುತ್ತವೆ. ಅದಕ್ಕಾಗಿಯೇ ಮದು ನನ್ನ ಲೈಫ್ನಲ್ಲಿ ಬೇಕಾ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿದ್ದರು. ಆದರೂ ಟ್ರೋಲಿಗರು ಟ್ರೋಲ್ ಮಾಡುವುದನ್ನು ಬಿಡುವುದಿಲ್ಲ. ಜೋಡಿ ಸೂಪರ್ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಕೆಲವರು ಕಾರ್ತಿಕ್ , ನಟಿ ಸಂಗೀತಾ ಶೃಂಗೇರಿಗೆ ಕೈ ಕೊಟ್ಟೇ ಬಿಟ್ರಾ?ಸಂಗೀತಾಗೆ ಕರಿಮಣಿ ಮಾಲೀಕ ಯಾರು? ಎಂದು ಕಮೆಂಟ್ ಮಾಡಿದ್ದಾರೆ.ಕಾರ್ತಿಕ್ ಅವರು ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ, 50 ಲಕ್ಷ ರೂಪಾಯಿ, ಅದ್ಧೂರಿ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.